ETV Bharat / bharat

ಕತ್ತಿ, ಕಹಳೆ ಮತ್ತು ಗದೆಯ ಚಿನ್ಹೆಗಾಗಿ ಪ್ರಸ್ತಾವನೆ ಸಲ್ಲಿಸಿದ  ಶಿಂಧೆ ಬಣ.. ಠಾಕ್ರೆ ಕಳುಹಿಸಿದ ಪ್ರಸ್ತಾವನೆ ಏನು?

author img

By

Published : Oct 10, 2022, 10:39 PM IST

Sena symbol row: Shinde group submits symbols of sword, trumpet and mace to EC
ಕತ್ತಿ, ಕಹಳೆ ಮತ್ತು ಗದೆಯ ಚಿನ್ನೆಯನ್ನು ಕಳುಹಿಸಿದ ಶಿಂಧೆ ಬಣ

ಚುನಾವಣಾ ಆಯೋಗವು ಮಧ್ಯಂತರ ಆದೇಶ ಹೊರಡಿಸಿದ್ದು, ಅಂಧೇರಿ ಪೂರ್ವ ಉಪಚುನಾವಣೆಯಲ್ಲಿ ಶಿವಸೇನೆಗೆ ಮೀಸಲಾಗಿರುವ 'ಬಿಲ್ಲು ಮತ್ತು ಬಾಣ' ಚಿಹ್ನೆಯನ್ನು ಬಳಸಲು ಎರಡು ಗುಂಪುಗಳಿಗೂ ನೀಡದಂತೆ ಚುನಾವಣಾ ಆಯೋಗ ಸ್ಥಗಿತಗೊಳಿಸಿದೆ.

ಮುಂಬೈ(ಮಹರಾಷ್ಟ್ರ) : ಭಾರತೀಯ ಚುನಾವಣಾ ಆಯೋಗವು 'ಬಿಲ್ಲು ಮತ್ತು ಬಾಣ'ವನ್ನು ಸ್ಥಗಿತಗೊಳಿಸಿದ ನಂತರ ಶಿವಸೇನೆಯ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವು ಕತ್ತಿ, ಕಹಳೆ ಮತ್ತು ಗದೆಯನ್ನು ಚುನಾವಣಾ ಆಯೋಗ ಅನುಮತಿಗಾಗಿ ಮೂರು ಚಿನ್ಹೆಗಳನ್ನು ಸೂಚಿಸಿದ್ದಾರೆ.

ನವೆಂಬರ್ 3 ರಂದು ನಡೆಯಲಿರುವ ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಠಾಕ್ರೆ ಮತ್ತು ಪ್ರಸ್ತುತ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣಗಳು ಪಕ್ಷದ ಹೆಸರು ಮತ್ತು ಅದರ ಚುನಾವಣಾ ಚಿಹ್ನೆ ಬಿಲ್ಲು ಮತ್ತು ಬಾಣವನ್ನು ಬಳಸದಂತೆ ಚುನಾವಣಾ ಆಯೋಗ ಶನಿವಾರ ನಿರ್ಬಂಧ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಶಿಂದೆ ಬಣ ಈ ಚಿನ್ಹೆ ನೀಡುವಂತೆ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಗದೆ, ಕಹಳೆ ಮತ್ತು ಕತ್ತಿ : ಆಯೋಗವು ಇತ್ತೀಚೆಗೆ ಮಧ್ಯಂತರ ಆದೇಶವನ್ನು ಹೊರಡಿಸಿದ್ದು, ಶಿವಸೇನೆಯ ಎರಡೂ ಗುಂಪುಗಳು ಹೆಸರುಗಳು ಮತ್ತು ಚಿಹ್ನೆಗಳ ಬಗ್ಗೆ ಹಕ್ಕು ಸಾಧಿಸಿದ ಹಿನ್ನೆಲೆಯಲ್ಲಿ ಸೋಮವಾರದೊಳಗೆ ಆಯಾ ಬಣಗಳಿಗೆ ಮೂರು ಹೊಸ ಹೆಸರುಗಳು ಮತ್ತು ಚಿಹ್ನೆಗಳನ್ನು ಸೂಚಿಸುವಂತೆ ಹೇಳಿದೆ. ಅದರಂತೆ, ಎರಡೂ ಪಕ್ಷಗಳು ಪರ್ಯಾಯ ಚಿಹ್ನೆಗಳನ್ನು ಆಯ್ಕೆ ಮಾಡಬೇಕಿದೆ. ಶಿಂಧೆ ಬಣದ ಕಾರ್ಯಕಾರಿ ಸಭೆಯಲ್ಲಿ ಕಹಳೆ, ಗದೆ ಮತ್ತು ಕತ್ತಿಯನ್ನು ಸೂಚಿಸಲಾಗಿದೆ.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ತನ್ನ ಚುನಾವಣಾ ಚಿಹ್ನೆಗಾಗಿ ತ್ರಿಶೂಲ, ಉದಯಿಸುವ ಸೂರ್ಯ ಅಥವಾ ಮಶಾಲ್ (ಉರಿಯುವ ಜ್ಯೋತಿ) ಎಂಬ ಮೂರು ಆಯ್ಕೆಗಳನ್ನು ಚುನಾವಣಾ ಸಂಸ್ಥೆಗೆ ಸಲ್ಲಿಸಿದೆ.

ಈ ವರ್ಷದ ಜೂನ್‌ನಲ್ಲಿ ಶಿವಸೇನೆ ಶ್ರೇಣಿಯಲ್ಲಿನ ವಿಭಜನೆಯ ನಂತರ ಪ್ರತಿಸ್ಪರ್ಧಿ ಬಣಗಳು ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದವು, ಎರಡೂ ಪಕ್ಷಗಳು 'ನಿಜವಾದ ಶಿವಸೇನೆ' ಎಂದು ಹೇಳಿಕೊಂಡಿವೆ. ಹಾಲಿ ಶಿವಸೇನಾ ಶಾಸಕ ರಮೇಶ್ ಲಟ್ಕೆ ಅವರ ನಿಧನದಿಂದಾಗಿ ಉಪನಗರ ಮುಂಬೈನ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಅನಿವಾರ್ಯವಾಗಿದೆ.

ಕಾಂಗ್ರೆಸ್ ಮತ್ತು ಎನ್‌ಸಿಪಿ ಠಾಕ್ರೆ ಬಣದ ಅಭ್ಯರ್ಥಿ ರಮೇಶ್ ಲಟ್ಕೆ ಅವರ ಪತ್ನಿ ರುಜುತಾ ಲಟ್ಕೆ ಅವರಿಗೆ ಟಿಕೆಟ್​ ನೀಡಲು ನಿರ್ಧರಿಸಿದೆ. ಶಿಂಧೆ ಬಣದ ಮಿತ್ರ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷವು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಟರ್‌ನ ಮುರ್ಜಿ ಪಟೇಲ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಇದನ್ನೂ ಓದಿ : ಹೊಸ ಚಿಹ್ನೆ ಶಿವಸೇನೆಗಾಗಿ ಕ್ರಾಂತಿಯನ್ನೇ ಮಾಡಲಿದೆ: ರಾವುತ್


ETV Bharat Logo

Copyright © 2024 Ushodaya Enterprises Pvt. Ltd., All Rights Reserved.