ETV Bharat / bharat

Ring of Fire: ಅಕ್ಟೋಬರ್​ 14ರಂದು ಸೂರ್ಯಗ್ರಹಣ; ಭಾರತದಲ್ಲಿ ಗೋಚರಿಸಲಿದ್ಯಾ?

author img

By ETV Bharat Karnataka Team

Published : Oct 9, 2023, 12:50 PM IST

ring-of-fire-nasa-to-live-stream-annular-solar-eclipse-occurring-on-october-14-here-is-how-indians-can-watch
ring-of-fire-nasa-to-live-stream-annular-solar-eclipse-occurring-on-october-14-here-is-how-indians-can-watch

ಭಾರತದಲ್ಲಿ ಕಾಣ ಸಿಗದ ಈ ಖಗೋಳ ಕೌತುಕದ ಘಟನೆಯನ್ನೂ ನಾಸಾದಲ್ಲಿ ಯುಟ್ಯೂಬ್​ ಚಾನಲ್​ ಮೂಲಕ ಕಣ್ತುಂಬಿಕೊಳ್ಳಬಹುದು.

ಬೆಂಗಳೂರು: ಆಕಾಶದಲ್ಲಿ ನಡೆಯುವ ಖಗೋಳ ಅಚ್ಚರಿಗಳಲ್ಲಿ ಒಂದಾಗಿರುವ ಸೂರ್ಯಗ್ರಹಣವೂ ಇದೇ ಅಕ್ಟೋಬರ್​ 14ರಂದು ನಡೆಯಲಿದೆ. ರಿಂಗ್​ ಆಫ್​ ಫೈರ್​​ (ಅಗ್ನಿಯ ವರ್ತುಲ)ಎಂದು ಈ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ. ಈ ಸೂರ್ಯಗ್ರಹಣವೂ ಭಾರತದಲ್ಲಿ ಮಾತ್ರ ಗೋಚರಿಸುವುದಿಲ್ಲ.

ಅಕ್ಟೋಬರ್​ 14ರಂದು ಸೂರ್ಯ ಗ್ರಹಣವೂ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 11.29ಕ್ಕೆ ಆರಂಭವಾಗಲಿದ್ದು, 11.37ಕ್ಕೆ ಅಂತ್ಯವಾಗಲಿದೆ. ಭಾರತದ ಹೊರತಾಗಿ ಇತರೆ ದೇಶದಲ್ಲಿ ಈ ಸೂರ್ಯ ಗ್ರಹಣ ಕಾಣಲಿದೆ.

ಸೂರ್ಯ ಗ್ರಹಣವು ವಾರ್ಷಿಕವಾಗಿ ನಡೆಯುವ ವಿದ್ಯಮಾನವಾಗಿದೆ. ಸೂರ್ಯನ ಮುಂದೆ ಚಂದ್ರ ಹಾದು ಹೋಗುವಾಗ ಅದರ ಸುತ್ತಲು ಉಂಗುರದಾಕಾರದ ಬೆಳಕನ್ನು ಕಾಣಬಹುದಾಗಿದೆ. ಕಳೆದ ವರ್ಷ ಈ ಸೂರ್ಯಗ್ರಹಣವು 2012ರಲ್ಲಿ ಅಮರಿಕದಲ್ಲಿ ಕಂಡು ಬಂದಿತ್ತು. ಈ ಬಾರಿ ಸಂಭವಿಸಲಿರುವ ಈ ರಿಂಗ್​ ಆಫ್ ಫೈರ್​ ಅಥವಾ ಅನ್ಯುಲರ್​ ಸೂರ್ಯ ಗ್ರಹಣವೂ ಪಶ್ಚಿಮ ಅಮೆರಿಕದ ಕೆಲವು ಭಾಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

  • On October 14, a “ring of fire” solar eclipse will appear across a swath of the western United States, as well as in parts of Central and South America. Here’s what it is and where you can experience it for yourself
    https://t.co/qq9z5boi8B

    — National Geographic (@NatGeo) October 3, 2023 " class="align-text-top noRightClick twitterSection" data=" ">

ಖಗೋಳದಲ್ಲಿ ನಡೆಯುವ ಈ ಅಚ್ಚರಿಯನ್ನು ಭಾರತೀಯರು ಕಣ್ತುಂಬಿಕೊಳ್ಳಲು ನೇರವಾಗಿ ಸಾಧ್ಯವಾಗುವುದಿಲ್ಲ ಎಂಬ ಬೇಸರಕ್ಕೆ ನಾಸಾ ಪರಿಹಾರ ಮಾರ್ಗ ನೀಡಿದೆ. ಈ ಸೂರ್ಯಗ್ರಹಣವನ್ನು ನಾಸಾ ತನ್ನ ಯುಟ್ಯೂಬ್​ ಚಾನಲ್​ನಲ್ಲಿ ಪ್ರಸಾರ ಮಾಡಲು ಮುಂದಾಗಿದೆ. ಅಕ್ಟೋಬರ್​​ 14ರಂದು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಈ ನೇರ ಪ್ರಸಾರ ಆರಂಭವಾಗಲಿದ್ದು, ಜಗತ್ತಿನೆಲ್ಲೆಡೆ ಜನರು ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಏನಿದರ ವಿಶೇಷತೆ: ಸೂರ್ಯ ಭೂಮಿ ನಡುವೆ ಚಂದ್ರ ಬರುವ ಘಟನೆಯೇ ಸೂರ್ಯಗ್ರಹಣವಾಗಿದೆ. ಈ ವೇಳೆ ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಾನೆ. ಈ ಸಮಯದಲ್ಲಿ ಸೂರ್ಯನ ಕಿರಣಗೂ ಅದರ ಸುತ್ತ ವೃತ್ತಾಕಾರದಲ್ಲಿ ಕಾಣಬಹುದು. ಇದನ್ನು ರಿಂಗ್​ ಆಫ್​ ಫೈರ್​ ಎನ್ನಲಾಗುವುದು. ಒಟ್ಟಾರೆ ಸೂರ್ಯ ಗ್ರಹಣದಲ್ಲಿ ಈ ಅನ್ಯುಲರ್​ ಸೂರ್ಯಗ್ರಹಣವೂ ವಿಭಿನ್ನವಾಗಬಹುದು. ಈ ವೇಳೆ ಚಂದ್ರ ಸೂರ್ಯನಿಗಿಂತ ದೊಡ್ಡದಾಗಿ ಕಾಣುತ್ತದೆ. ಇದಕ್ಕೆ ಕಾರಣ ಇದು ಭೂಮಿಗೆ ಸಮೀಪದಲ್ಲಿ ಇರುತ್ತದೆ.

ಎಲ್ಲಿ ಕಾಣಲಿದೆ ಸೂರ್ಯಗ್ರಹಣ: ಅನ್ಯುಲರ್​ ಸೂರ್ಯ ಗ್ರಹಣವು ಅಕ್ಟೋಬರ್​ 14ರಂದು ಟೆಕ್ಸಾಸ್​ ಗಲ್ಫ್​​ ಕರಾವಳಿ ತೀರದಲ್ಲಿ ಕಾಣಸಿಗಲಿದೆ. ಅಮೆರಿಕದ ಒರೆಗೊನ್​, ನೆವಡಾ, ಉತ್ತಾ, ನ್ಯೂ ಮಾಕ್ಸಿಕೊ, ಟೆಕ್ಸಾಸ್​​ ಮತ್ತು ಕ್ಯಾಲಿಫೋರ್ನಿಯಾದ ಕೆಲವು ಭಾಗ, ಅರಿಜೋನಾ ಸೇರಿದಂತೆ ಕೆಲವು ಪ್ರದೇಶದಲ್ಲಿ ಈ ಕೌತುಕ ಕ್ಷಣ ಕಾಣಲಿದೆ. ಅದು ಕೂಡ ಹವಾಮಾನ ಪ್ರತಿಕೂಲವಾಗಿದ್ದರೆ ಮಾತ್ರ ಎಂದು ನಾಸಾ ತಿಳಿಸಿದೆ. ಮೆಕ್ಸಿಕೋ, ಕೇಂದ್ರ ಅಮೆರಿಕ ಮತ್ತು ದಕ್ಷಿಣ ಅಮೆರಿಕದಿಂದ ಆರಂಭವಾಗಲಿರುವ ಈ ಸೂರ್ಯಗ್ರಹದ ಪ್ರಯಾಣ ಅಟ್ಲಾಂಟಿಕ್​ ಸಾಗರದಲ್ಲಿ ಸೂರ್ಯಾಸ್ತ ಮೂಲಕ ಅಂತ್ಯವಾಗಲಿದೆ. ಅಮೆರಿಕದಲ್ಲಿ ಕಾಣಸಿಗಲಿರುವ ಈ ಸೂರ್ಯ ಗ್ರಹಣದ ಅವಧಿ ಸರಾಸರಿ ನಾಲ್ಕರಿಂದ ಐದು ನಿಮಿಷ ಮಾತ್ರ.

ಮುನ್ನೆಚ್ಚರಿಕೆ: ಸೂರ್ಯಗ್ರಹಣವನ್ನು ಎಂದಿಗೂ ಬರೀಗಣ್ಣಿನಿಂದ ನೋಡುವುದು ಸೂಕ್ತವಲ್ಲ. ಇದಕ್ಕೆ ವಿಶೇಷ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ರಕ್ಷಣಾತ್ಮಕ ಕನ್ನಡಕಗಳು ಧರಿಸಿ ಮಾತ್ರ ನೋಡಬೇಕು. ಇದರಿಂದ ಕಣ್ಣಿಗೆ ಆಗುವ ಶಾಶ್ವತ ಹಾನಿಯನ್ನು ತಡೆಯಬಹುದು. ಕ್ಯಾಮರಾ, ಟೆಲಿಸ್ಕೋಪ್​​, ಬಯ್ನೊಕ್ಯೂಲರ್​ ಅಥವಾ ಇನ್ನಿತರ ಸಾಧನಗಳಿಂದ ಕೂಡ ಸೂಕ್ತ ಫಿಲ್ಟರ್​ ಇಲ್ಲದೇ, ವೀಕ್ಷಣೆ ಮಾಡಬೇಡಿ. ಇದಕ್ಕೆ ಪಿನ್​ಹೋಲ್​ ಪ್ರೋಟೆಕ್ಟರ್​ ಬಳಕೆ ಮಾಡಿ ವೀಕ್ಷಣೆ ಮಾಡಬಹುದಾಗಿದೆ.

ಇದನ್ನೂ ಓದಿ: ಆದಿತ್ಯ-ಎಲ್1 ಮಿಷನ್: ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದೆ- ಇಸ್ರೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.