ETV Bharat / bharat

ಸಿರಾಜ್​ ಹೊಸ ಮನೆಗೆ ಭೇಟಿ ನೀಡಿ ಹೈದರಾಬಾದ್​ ಬಿರಿಯಾನಿ ಸವಿದ ಆರ್​ಸಿಬಿ ಆಟಗಾರರು!

author img

By

Published : May 17, 2023, 11:04 AM IST

Virat Kohli
ಸಿರಾಜ್​ ಮನೆಗೆ ಭೇಟಿ ನೀಡಿದ ಆರ್​ಸಿಬಿ ನಾಯಕರು

ಸ್ಟಾರ್‌ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ, ಫಾಪ್ ಡು ಪ್ಲೆಸಿಸ್ ಸೇರಿದಂತೆ ಹಲವು ಆರ್‌ಸಿಬಿ ತಂಡದ ಆಟಗಾರರು ವೇಗಿ ಮೊಹಮ್ಮದ್‌ ಸಿರಾಜ್ ಮನೆಗೆ ಭೇಟಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೈದರಾಬಾದ್ : ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಾಳೆ ಐಪಿಎಲ್ ಪಂದ್ಯ ನಡೆಯಲಿದೆ. ಆರ್​ಸಿಬಿ ತಂಡ ಈಗಾಗಲೇ ಹೈದರಾಬಾದ್​ ತಲುಪಿದ್ದು, ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಇದರ ನಡುವೆ ನಿನ್ನೆ(ಮಂಗಳವಾರ) ಹೈದರಾಬಾದ್‌ನ ಫಿಲ್ಮ್ ನಗರದ ಜೂಬ್ಲಿ ಹಿಲ್ಸ್‌ನಲ್ಲಿರುವ ಮೊಹಮ್ಮದ್ ಸಿರಾಜ್ ಅವರ ನೂತನ ನಿವಾಸಕ್ಕೆ ವಿರಾಟ್ ಕೊಹ್ಲಿ ಮತ್ತು ತಂಡದ ಸದಸ್ಯರು ಭೇಟಿ ನೀಡಿದರು.

ಸಾಮಾಜಿಕ ಮಾಧ್ಯಮದಲ್ಲಿ ಆರ್​ಸಿಬಿ ಆಟಗಾರರು ಸಿರಾಜ್ ಮನೆಗೆ ತೆರಳುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಸೇರಿದಂತೆ ತಂಡದ ಇತರೆ ಸದಸ್ಯರು ಇದ್ದಾರೆ. ಸಿರಾಜ್ ಮನೆಗೆ ವಿರಾಟ್‌ ಕೊಹ್ಲಿ ಆಗಮಿಸುವ ಸುದ್ದಿ ತಿಳಿದು ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನು ಕಣ್ತುಂಬಿಕೊಳ್ಳಲು ಜಮಾಯಿಸಿದ್ದರು.

ಇದನ್ನೂ ಓದಿ : ಮುಂಬೈ ವಿರುದ್ಧ ಲಕ್ನೋಗೆ 5 ರನ್‌ಗಳ ಗೆಲುವು : ಅಬ್ಬರಿಸಿದ ಸ್ಟೋಯಿನಿಸ್‌

ಆರ್​ಸಿಬಿ ಫ್ರಾಂಚೈಸಿ ಕೂಡಾ ಫೋಟೋಗಳನ್ನು ತನ್ನ ಟ್ವಿಟರ್​ ಅಕೌಂಟ್​ನಲ್ಲಿ ಹಂಚಿಕೊಂಡಿದೆ. "ಹೈದರಾಬಾದ್​ ಬಿರಿಯಾನಿ ಸಮಯ! ನಿನ್ನೆ ರಾತ್ರಿ ಮಿಯಾನ್ ಅವರ ಸುಂದರವಾದ ಹೊಸ ಮನೆಯಲ್ಲಿ ನಮ್ಮ ಹುಡುಗರು ಪಿಟ್‌ಸ್ಟಾಪ್ ತೆಗೆದುಕೊಂಡರು" ಎಂಬ ಹೆಡ್‌ಲೈನ್‌ ಕೊಟ್ಟಿದೆ. ಇನ್ನೊಂದೆಡೆ, ವಿರಾಟ್ ಮೇಲಿನ ಮೊಹಮ್ಮದ್ ಸಿರಾಜ್ ಅವರ ಅಭಿಮಾನಕ್ಕೆ ಕೊಹ್ಲಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ' ದಾದ ' ನಿಗೆ ಝೆಡ್ ಪ್ಲಸ್‌​ ಭದ್ರತೆ ನೀಡಲು ಮುಂದಾದ ' ದೀದಿ ' ಸರ್ಕಾರ

ಮೊಹಮ್ಮದ್ ಸಿರಾಜ್ ಅವರು ಹೈದರಾಬಾದ್‌ನಲ್ಲಿ ಇತ್ತೀಚೆಗೆ ಹೊಸ ಮನೆ ಖರೀದಿಸಿದ್ದರು. ಹೀಗಾಗಿ, ತಮ್ಮ ಸಹ ಆಟಗಾರರನ್ನು ಊಟಕ್ಕೆ ಆಹ್ವಾನಿಸಿದ್ದರು. ಬ್ರೇಕ್‌ಫಾಸ್ಟ್ ವಿಥ್ ಚಾಂಪಿಯನ್ಸ್‌ ಸಂಚಿಕೆಯಲ್ಲಿ ಸಿರಾಜ್, ಸ್ಟಾರ್ ಇಂಡಿಯಾ ಬ್ಯಾಟರ್‌ ಹಾಗು ಆರ್‌ಸಿಬಿ ಆಟಗಾರರಿಗೆ ಆಹ್ವಾನ ಕಳುಹಿಸಿದ್ದರು.

ಇದನ್ನೂ ಓದಿ : LSG vs MI : ಲಕ್ನೋಗೆ ಆಸರೆಯಾದ ಮಾರ್ಕಸ್ ಸ್ಟೋನಿಸ್, ಮುಂಬೈ ಗೆಲುವಿಗೆ 178 ರನ್​ನ ಗುರಿ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲಿಯವರೆಗೂ ಆಡಿರುವ 12 ಪಂದ್ಯಗಳಲ್ಲಿ 6 ರಲ್ಲಿ ಗೆದ್ದು 6 ರಲ್ಲಿ ಸೋತಿದೆ. ಒಟ್ಟು 12 ಅಂಕಗಳನ್ನು ಕಲೆ ಹಾಕಿದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿದೆ. ಇನ್ನೂ ಎರಡು ಪಂದ್ಯಗಳು ಬಾಕಿ ಇದೆ. ಸತತ ಮೂರು ಬಾರಿ ಪ್ಲೇಆಫ್​ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ನಾಕ್‌ಔಟ್‌ ಹಂತಕ್ಕೆ ತಲುಪಲು ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯಬೇಕಾದ ಅಗತ್ಯವಿದೆ.

ಇದನ್ನೂ ಓದಿ : ತನ್ನ ಶರ್ಟ್ ಮೇಲೆ ಧೋನಿ ಆಟೋಗ್ರಾಫ್​ ಪಡೆದ ಕ್ರಿಕೆಟ್‌ ದಿಗ್ಗಜ ಸುನೀಲ್ ಗವಾಸ್ಕರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.