ETV Bharat / bharat

PUBG Addiction: ಮಕ್ಕಳಿಂದ ತಂದೆಯ ಬಳಿಯೇ ಕಳ್ಳತನ, 8 ಲಕ್ಷ ದೋಚಿದ ದಂಪತಿ

author img

By

Published : Dec 17, 2021, 6:39 PM IST

ಪಬ್​ಜಿ ಮೊಬೈಲ್ ಗೇಮ್​ಗಾಗಿ ಮಕ್ಕಳೇ ತನ್ನ ತಂದೆ ಮನೆ ಖರೀದಿಗೆ ಕೂಡಿಟ್ಟಿದ್ದ ಸುಮಾರು 8 ಲಕ್ಷ ರೂಪಾಯಿ ಹಣವನ್ನು ದೋಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
PUBG Addiction - Sons steals Rs.8 lakh from Parents
PUBG Addiction: ಮಕ್ಕಳಿಂದ ಕಳ್ಳತನ ಮಾಡಿಸಿ, 8 ಲಕ್ಷ ದೋಚಿದ ದಂಪತಿ

ಚೆನ್ನೈ, ತಮಿಳುನಾಡು: ಮೊಬೈಲ್ ಬಳಕೆ ಪ್ರಸ್ತುತ ಜನಸಮುದಾಯವನ್ನೇ ಮೋಡಿ ಮಾಡಿರುವುದು ಮಾತ್ರವಲ್ಲದೇ, ಗೀಳಾಗಿ ಪರಿವರ್ತನೆಯಾಗಿದೆ. ಅದರಲ್ಲೂ ಮಕ್ಕಳ ಮೇಲೆ ಇದರ ದುಷ್ಪರಿಣಾಮ ಯಾವ ರೀತಿ ಇದೆ ಎಂಬುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಈಗ ಮೊಬೈಲ್​ನಲ್ಲಿ ಜನಪ್ರಿಯ ಗೇಮ್​ ಆಗಿರುವ ಪಬ್​ಜಿ (PUBG) ಮಕ್ಕಳು ಅಡಿಕ್ಟ್​ ಆಗುತ್ತಿದ್ದು, ಪಬ್​ಜಿ ಕಾರಣದಿಂದ ವ್ಯಕ್ತಿಯೊಬ್ಬರು ಸುಮಾರು 8 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ತಮಿಳುನಾಡಿನ ಚೆನ್ನೈ ತೆನಾಂಪೇಟ್​ ಪ್ರದೇಶದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿರುವ ನಟರಾಜನ್​ಗೆ ಇಬ್ಬರು ಮಕ್ಕಳು. ಓರ್ವ 10ನೇ ತರಗತಿಯಲ್ಲಿ ಓದುತ್ತಿದ್ದರೆ, ಮತ್ತೊಬ್ಬ 12ನೇ ತರಗತಿ ಓದುತ್ತಿದ್ದನು. ಇನ್ನು ನಟರಾಜನ್​ಗೆ ಮನೆಯೊಂದನ್ನು ಕೊಳ್ಳುವ ಕನಸಿದ್ದು, ಅದಕ್ಕಾಗಿ ತನ್ನ ದಿನಸಿ ಅಂಗಡಿಯಲ್ಲಿ ಯಾರಿಗೂ ತಿಳಿಯದಂತೆ ರಹಸ್ಯವಾಗಿ ಹಣವನ್ನು ಕೂಡಿಡುತ್ತಿದ್ದನು. ಸುಮಾರು 8 ಲಕ್ಷ ರೂಪಾಯಿ ಹಣವನ್ನು ಕೂಡಿಟ್ಟಿದ್ದ ಹಣ ಒಮ್ಮೆಲೇ ಕಳುವಾಗಿತ್ತು.

ಪಬ್​ಜಿಗಾಗಿ ಮಕ್ಕಳಿಂದ ಕಳ್ಳತನ: ಹಣ ಕಳುವಾದ ನಂತರ ಆಘಾತಗೊಂಡ ನಟರಾಜನ್ ತನ್ನ ದಿನಸಿ ಅಂಗಡಿಗೆ ಯಾರೂ ಕಳ್ಳತನಕ್ಕೆ ಬರುವ ಸಾಧ್ಯತೆ ಇಲ್ಲ ಎಂದು ಅರಿತು, ತಮ್ಮ ಮಕ್ಕಳನ್ನೇ ಈ ಬಗ್ಗೆ ವಿಚಾರಿಸಿದಾಗ ಮಕ್ಕಳೇ ಹಣವನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದರು. ಮಕ್ಕಳು ಪಬ್ಜಿ ಆಟವನ್ನು ಗೀಳಾಗಿಸಿಕೊಂಡಿದ್ದು, ಪಬ್​​ಜಿ ಆಟದಲ್ಲಿ ನಿಪುಣನಾದ ಸ್ನೇಹಿತನಿಗಾಗಿ ಕದ್ದ ಹಣ ನೀಡಿದ್ದಾಗಿ ಹೇಳಿಕೊಂಡಿದ್ದರು. ಈ ಕುರಿತು ನಟರಾಜನ್ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನಲ್ಲಿದೆ ಅಸಲಿ ವಿಷಯ: ಹಣ ಕಳುವಾದ ಕುರಿತು ನಟರಾಜನ್ ಪೊಲೀಸರಲ್ಲಿ ದೂರು ನೀಡಿದ್ದಾರೆ. ನಟರಾಜನ್ ಪುತ್ರರು ರಾಜಶೇಖರ್ ಮತ್ತು ಮೆರಿಟಾ ಪುಷ್ಪಾರಾಣಿ ಎಂಬುವವರ ಮನೆಗೆ ಬಂದು ಅವರ ಪುತ್ರನೊಂದಿಗೆ ಪಬ್​ ಜಿ ಆಡುತ್ತಿದ್ದರು. ಪಬ್​ಜಿ ಆಡುವ ವೇಳೆ ರಾಜಶೇಖರ್ ಮತ್ತು ಮೆರಿಟಾ ಪುಷ್ಪಾರಾಣಿ ಚೆನ್ನಾಗಿ ಮಾತನಾಡಿಸುವುದು ಮಾತ್ರವಲ್ಲದೇ, ಅವರಿಗೆ ಬೇಕಾದ ತಿಂಡಿ, ತಿನಿಸುಗಳನ್ನು ಮಾಡಿಕೊಡುತ್ತಿದ್ದರು.

ಕೆಲವು ದಿನಗಳ ನಂತರ ಪಬ್​ಜಿ ಆಡುವ ವೇಳೆ ಬೆಗ ಬಗೆಯ ತಿಂಡಿ ಮಾಡಿಕೊಡಬೇಕಾದರೆ ಹಣ ನೀಡಬೇಕೆಂದು ನಟರಾಜನ್ ಪುತ್ರರಿಗೆ ರಾಜಶೇಖರ್ ಮತ್ತು ಮೆರಿಟಾ ಪುಷ್ಪಾರಾಣಿ ಹೇಳಿದ್ದಾರೆ. ಇದಕ್ಕಾಗಿ ನಟರಾಜನ್ ಪುತ್ರರು 8 ಲಕ್ಷ ಹಣ ಕದ್ದು, ರಾಜಶೇಖರ್ ಮತ್ತು ಮೆರಿಟಾ ಪುಷ್ಪಾರಾಣಿ ಅವರಿಗೆ ನೀಡಿದ್ದಾರೆ ಎಂದು ನಟರಾಜನ್ ಹೇಳಿಕೊಂಡಿದ್ದಾರೆ.

ಈಗ ಸದ್ಯಕ್ಕೆ ಆರೋಪಿಗಳಾಗಿರುವ ರಾಜಶೇಖರ್ ಮತ್ತು ಮೆರಿಟಾ ಪುಷ್ಪಾರಾಣಿ ಪರಾರಿಯಾಗಿದ್ದು, ದೂರಿನ ಅನ್ವಯ ಪೊಲೀಸರು ಅವರ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾ ಲಸಿಕೆ ಹೆಸರಲ್ಲಿ ಕೋಟಿ ಕೋಟಿ ಕದ್ದ ಸೈಬರ್ ಕಳ್ಳರು.. ಈ ವೈದ್ಯರಿಗೆ 11.80 ಕೋಟಿ ರೂ. ವಂಚನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.