ETV Bharat / bharat

ಡೇವಿಡ್​ ವಾರ್ನರ್​ ಅಂದೇ ನಿವೃತ್ತಿ ಘೋಷಿಸಬೇಕಿತ್ತು : ರಿಕಿ ಪಾಂಟಿಂಗ್​

author img

By

Published : Mar 2, 2023, 8:53 PM IST

Updated : Mar 2, 2023, 11:09 PM IST

ಡೇವಿಡ್​ ವಾರ್ನರ್​ ಬಗ್ಗೆ ಆಸೀಸಿ ಮಾಜಿ ನಾಯಕ ರಿಕಿ ಪಾಂಟಿಂಗ್​ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ರಿಕಿ ಪಾಂಟಿಂಗ್​
ರಿಕಿ ಪಾಂಟಿಂಗ್​

ಮೇಲ್ಬೋರ್ನ್​: ಆಸ್ಟ್ರೇಲಿಯಾದ ಓಪನರ್​ ಹಾಗೂ ಎಡಗೈ ಬ್ಯಾಟ್ಸ್​ಮಾನ್ ಡೇವಿಡ್​ ವಾರ್ನರ್​ ಸತತ ವೈಫಲ್ಯವನ್ನು ಎದುರಿಸುತ್ತಿದ್ದು, ಆಶಸ್​ ಸರಣಿಯಿಂದ ಹೊರಗುಳಿಯುವ ಅಪಾಯವಿದೆ ಎಂದು ಆಸೀಸ್​ನ ಮಾಜಿ ನಾಯಕ ರಿಕಿ ಪಾಂಟಿಂಗ್​ ಆತಂಕ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ದೀರ್ಘಕಾಲದ ವೈಫಲ್ಯವನ್ನು ಎದುರಿಸುತ್ತಿರುವ ವಾರ್ನರ್​, ಅವರ ಆಶಯದಂತೆ ಟೆಸ್ಟ್​ ವೃತ್ತಿಜೀವನ ಕೊನೆಗೊಳ್ಳಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 36 ವರ್ಷದ ವಾರ್ನರ್​ ಆಶಸ್​ ಸರಣಿಯ ತಂಡದಲ್ಲಿ ಸ್ಥಾನ ಪಡೆಯಲು ಹೆಣಗಾಡುತ್ತಿದ್ದಾರೆ. ಅಲ್ಲದೇ ಅವರ ಇಚ್ಚೆಯಂತೆ ಟೆಸ್ಟ್​ ಜೀವನ ಕೊನೆಗೊಳ್ಳಲು ಎಂದು ರೇಡಿಯೋ ಕಾರ್ಯಕ್ರಮವೊಂದರಲ್ಲಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ​.

ಇನ್ನು ಭಾರತಲ್ಲಿ ನಡೆಯುತ್ತಿರುವ ಬಾರ್ಡರ್​ ಗವಾಸ್ಕರ್​ ಟೆಸ್ಟ್​ ಸರಣಿಯ ಎರಡನೇ ಪಂದ್ಯದ ವೇಳೆ ಮೊಳಕೈ ಮೂಳೆ ಮುರಿತಕ್ಕೊಳಗಾದ ವಾರ್ನರ್​ ಸರಣಿಯಿಂದ ಹೊರಬಿದ್ದರು. ಈ ಸರಣಿಯಲ್ಲಿ ಮೂರು ಇನ್ನಿಂಗ್ಸ್​ಗಳನ್ನು ಆಡಿದ ವಾರ್ನರ್​ ಅವರ ಬ್ಯಾಟ್​ನಿಂದ ಕೇವಲ 26 ರನ್​ಗಳು ಮಾತ್ರ ಹರಿದು ಬಂದಿದ್ದವು. ಅಲ್ಲದೇ 2019ರಲ್ಲಿ ಆಶಸ್​ ಸರಣಿಯಲ್ಲಿ ವಾರ್ನರ್​ ಕೇವಲ 9.5 ಸರಾಸರಿಯಲ್ಲಿ ರನ್​ಗಳಿಸಿದ್ದರು ಎಂದು ಹೇಳಿದರು. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ ವಾರ್ನರ್​ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಬೇಕಿತ್ತು. ಇದು ಅವರ 100 ನೇ ಪಂದ್ಯವೂ ಆಗಿತ್ತು. ಅಥವಾ ಸಿಡ್ನಿಯಲ್ಲಿ ಅವರ ತವರು ಮೈದಾನದಲ್ಲಿ ನಡೆದ 101ನೇ ಪಂದ್ಯದಲ್ಲಾದರೂ ಅವರು ಟೆಸ್ಟ್​​ಗೆ ನಿವೃತ್ತಿ ಘೋಷಿಸ ಬೇಕಿತ್ತು ಎಂದು ಹೇಳಿದರು.

ಒಬ್ಬ ಬ್ಯಾಟ್ಸ್‌ಮನ್ ಆಗಿ, ರನ್ ಗಳಿಸಲು ಸಾಧ್ಯವಾಗದೇ ಇದ್ದಗಾ ಕಷ್ಟಕರ ಪರಿಸ್ಥಿತಿಯಲ್ಲಿ ಆಡುವುದು ಕಂಡು ಬರುತ್ತದೆ. ಇದು ನಮಗೆಲ್ಲ ಅನುಭವವಾಗಿದೆ ಎಂದು ನುಡಿದರು. ಇನ್ನು ಕಳೆದ ವಾರ ವಾರ್ನರ್​ ನಾನು ತಂಡಕ್ಕಾಗಿ ಪಿಟ್​ ಅಲ್ಲ ಎಂದು ಆಯ್ಕೆಗಾರರಿಗೆ ಎನಿಸಿದರೆ ತಂಡದಿಂದ ನನ್ನನ್ನು ಕೈ ಬಿಡಲಿ. ಆದರೆ, ತಂಡಕ್ಕಾಗಿ ರನ್​ ಗಳಿಸುವ ದಾಹ ನನ್ನಲ್ಲಿ ಇನ್ನು ಆರಿಲ್ಲ' ಎಂದು ಹೇಳಿದ್ದರು. ಈ ಮೂಲಕ ಆಯ್ಕೆಗಾರರು ತಂಡಕ್ಕೆ ಸೇರ್ಪಡೆ ಮಾಡದಿದ್ದರೆ ನಿವೃತ್ತಿಯ ಚಿಂತನೆ ಮಾಡಲಿದ್ದಾರೆ ಎಂಬ ಮುನ್ಸೂಚನೆ ಇಟ್ಟಿದ್ದರು. ಆದರೆ, ವೈಟ್​ ಬಾಲ್​ನಲ್ಲಿ ಇನ್ನಷ್ಟು ಆಡುವ ಹುಮ್ಮಸ್ಸನ್ನೂ ತೋರಿದ್ದರು.

ಗಾಯದ ಸಮಸ್ಯೆಯಿಂದ ಎರಡೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ ನಂತರ ತಂಡದಿಂದ ಹೊರಗುಳಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್​ ವಾರ್ನರ್ ಆಸ್ಟ್ರೇಲಿಯಾಕ್ಕೆ ಮರಳಿದ್ದರು. ದೆಹಲಿಯ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಸಿರಾಜ್​ ಬೌಲಿಂಗ್​ ವೇಳೆ ಬೌನ್ಸ್​ರ ಬಾಲ್​ ಮೊಣಕೈಗೆ ತಗುಲಿ ಗಾಯವಾಗಿತ್ತು. ಇದರಿಂದ ವಾರ್ನರ್​ ಚಿಕಿತ್ಸೆಗೆಂದು ಸ್ವದೇಶಕ್ಕೆ ಮರಳಿದ್ದ ವೇಳೆ ಇದನ್ನು ಹೇಳಿದ್ದರು. ಅವರ ಈ ಹೇಳಿಕೆಗೆ ರಿಕಿ ಪಾಂಟಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.​ ​

ಇದನ್ನೂ ಓದಿ: ಮೊಣಕೈ ಗಾಯ: ಇಂದೋರ್​, ಅಹಮದಾಬಾದ್ ಪಂದ್ಯದಿಂದ ಡೇವಿಡ್​​ ವಾರ್ನರ್​ ಔಟ್​..!

Last Updated :Mar 2, 2023, 11:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.