ETV Bharat / bharat

ಪಂಜಾಬ್‌ನಲ್ಲಿ ಸೇಬು ಟ್ರಕ್​ ಲೂಟಿ: ಮಾಲೀಕನ ನಷ್ಟ ತುಂಬಿದ್ದು ಯಾರು ಗೊತ್ತೇ?

author img

By

Published : Dec 6, 2022, 7:05 PM IST

police-action-against-who-robbed-the-apple-truck
ಸೇಬು ಟ್ರಕ್​ ಲೂಟಿ ಮಾಡಿದ ಹತ್ತು ಮಂದಿ ಬಂಧನ; ಮಾಲೀಕನಿಗೆ ಸಾಮಾಜಿಕ ಕಾರ್ಯಕರ್ತರಿಂದ ನಷ್ಟ ಪರಿಹಾರ

ಸೇಬಿನ ಮಾಲೀಕರಿಗೆ 9 ಲಕ್ಷದ 12 ಸಾವಿರ ರೂಪಾಯಿಯಷ್ಟು ನಷ್ಟವಾಗಿದ್ದು, ಅಷ್ಟೂ ಮೊತ್ತದ ಚೆಕ್ ಅ​ನ್ನು ಪಂಜಾಬಿನ ಸಾಮಾಜಿಕ ಕಾರ್ಯಕರ್ತರು ನೀಡಿದ್ದಾರೆ.

ಮೊಹಾಲಿ(ಪಂಜಾಬ್): ಮೂರು ದಿನಗಳ ಹಿಂದೆ ಸೇಬು ಟ್ರಕ್ಕೊಂದನ್ನು ಪಂಜಾಬ್‌ ಜನರು ಲೂಟಿ ಮಾಡಿರುವ ಘಟನೆ ಘತೇಘರ್ ಸಹಾನ್​ ಎಂಬಲ್ಲಿ ನಡೆದಿತ್ತು. ಇದೀಗ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ.

ನಾವು ಈಗಾಗಲೇ 10 ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ. ಸೇಬಿನ ಮಾಲೀಕರಿಗೆ 9 ಲಕ್ಷದ 12 ಸಾವಿರ ರೂಪಾಯಿಯಷ್ಟು ನಷ್ಟವಾಗಿದೆ. ಅಷ್ಟೂ ಮೊತ್ತದ ಚೆಕ್ ಅ​ನ್ನು ಪಂಜಾಬಿನ ಸಾಮಾಜಿಕ ಕಾರ್ಯಕರ್ತರು ನೀಡಿದ್ದಾರೆ ಎಂದು ಎಸ್​ಪಿ ತಿಳಿಸಿದರು.

ಸೇಬು ಕಳ್ಳತನದ ವಿಡಿಯೋ ನೋಡಿ ನಾವೇ ಬೆಚ್ಚಿಬಿದ್ದೆವು. ನಮ್ಮ ಪಂಜಾಬಿನಲ್ಲಿ ಈ ರೀತಿಯ ಜನರಿದ್ದಾರೆ ಎಂದು ತಿಳಿದಿರಲಿಲ್ಲ. ಇದು ನಮ್ಮ ಗೌರವ, ಪ್ರತಿಷ್ಠೆಗೆ ಧಕ್ಕೆ ತಂದಿದೆ. ಹೀಗಾಗಿ ಮಾಲೀಕರಿಗೆ ನಾವೇ ಸಹಾಯ ಮಾಡಲು ನಿರ್ಧರಿಸಿ, ಅವರಿಗೆ ಚೆಕ್ ನೀಡಿದ್ದೇವೆ ಎಂದು ಪಂಜಾಬಿನ ಸಾಮಾಜಿಕ ಕಾರ್ಯಕರ್ತರು ಹೇಳಿದ್ದಾರೆ.

ಈ ಬಗ್ಗೆ ಸೇಬು ಮಾಲೀಕ ಖುಷಿ ವ್ಯಕ್ತಪಡಿಸಿದರು. ನನ್ನ ಟ್ರಕ್ ಡ್ರೈವರ್ ನನಗೆ ಕರೆ ಮಾಡಿ ಸೇಬು ಕಳ್ಳತನವಾಗಿದೆ ಎಂದಾಗ ನಂಬಲಾಗಲಿಲ್ಲ. ಈ ರೀತಿಯ ಜನರು ಪಂಜಾಬಿನಲ್ಲಿದ್ದಾರೆಯೇ ಎಂಬುದೇ ನನಗೆ ಆಶ್ಚರ್ಯವಾಗಿತ್ತು. ಆದರೆ ಇದೀಗ ಅವರೇ ಬಂದು ನಷ್ಟ ಪರಿಹಾರ ನೀಡಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಸಹಾಯ ಮಾಡಿದ ಕಾರ್ಯಕರ್ತರನ್ನು ಶ್ರೀ ಫತೇಘರ್ ಸಾಹೇಬ್​ ಅಲ್ಲಿನ ವಕೀಲರು ವಿಶೇಷ ರೀತಿಯಲ್ಲಿ ಸನ್ಮಾನಿಸಿದರು.

ಇದನ್ನೂ ಓದಿ: ಲಂಚ ಪ್ರಕರಣ: ರೈಲ್ವೆ ಉಪ ಮುಖ್ಯ ಇಂಜಿನಿಯರ್​ನ ಬಂಧನ.. 2 ಕೋಟಿ ರೂ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.