ETV Bharat / bharat

ಗುವಾಹಟಿಯಿಂದ ಜೈಪುರಕ್ಕೆ ಹೊರಟಿದ್ದ ವಿಮಾನ ರದ್ದು: ಆಕ್ರೋಶಗೊಂಡ ಪ್ರಯಾಣಿಕರಿಂದ ಗಲಾಟೆ

author img

By

Published : Apr 27, 2023, 9:38 PM IST

Jaipur Flight Cancelled
ಗುವಾಹಟಿಯಿಂದ ಜೈಪುರಕ್ಕೆ ಹೊರಟಿದ್ದ ವಿಮಾನ ರದ್ದು

ಗುವಾಹಟಿಯಿಂದ ಜೈಪುರಕ್ಕೆ ತೆರಳುತ್ತಿದ್ದ ವಿಮಾನ ಹಠಾತ್ ರದ್ದುಗೊಂಡಿದ್ದರಿಂದ ಪ್ರಯಾಣಿಕರು ಆಕ್ರೋಶಗೊಂಡರು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಕೋಲಾಹಲ ಸೃಷ್ಟಿಸಿದರು. ಸ್ಪೈಸ್ ಜೆಟ್ ಆಡಳಿತವು ವಿಮಾನವನ್ನು ರದ್ದುಗೊಳಿಸುವ ಮೊದಲೇ ಏಕೆ ತಿಳಿಸಲಿಲ್ಲ ಎಂದು ಪ್ರಯಾಣಿಕರು ಕಿಡಿಕಾರಿದರು.

ಜೈಪುರ(ರಾಜಸ್ಥಾನ): ಸ್ಪೈಸ್‌ಜೆಟ್ ಏರ್‌ಲೈನ್ಸ್ ಗುವಾಹಟಿಯಿಂದ ಜೈಪುರಕ್ಕೆ ಹೊರಟಿದ್ದ ವಿಮಾನವನ್ನು ಪ್ರಯಾಣಿಕರಿಗೆ ತಿಳಿಸದೇ ರದ್ದುಗೊಳಿಸಿದೆ. ಗುವಾಹಟಿ ವಿಮಾನ ನಿಲ್ದಾಣ ತಲುಪಿದಾಗ ವಿಮಾನ ರದ್ದಾಗಿರುವುದು ಪ್ರಯಾಣಿಕರಿಗೆ ತಿಳಿಯಿತು. ಗುವಾಹಟಿ ವಿಮಾನ ನಿಲ್ದಾಣದಲ್ಲಿ 288 ಪ್ರಯಾಣಿಕರು ತೊಂದರೆ ಅನುಭವಿಸಿದರು. ಇದರ ಬೆನ್ನೆಲ್ಲೇ ಸ್ಪೈಸ್ ಜೆಟ್ ಏರ್‌ಲೈನ್ಸ್ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಿಜೆಪಿ ಸಿದ್ಧಾಂತವು 'ಹಾವು ಇದ್ದಂತೆ' ಎಂದಿದ್ದೇನೆಂದ ಖರ್ಗೆ: ಪ್ರಧಾನಿಯವರ ಕ್ಷಮೆ ಕೇಳುವಂತೆ ಬಿಜೆಪಿ ಆಗ್ರಹ

ತೊಂದರೆ ಅನುಭವಿಸಿದ 288 ಪ್ರಯಾಣಿಕರು: ಗುವಾಹಟಿ ವಿಮಾನ ನಿಲ್ದಾಣದಿಂದ ಜೈಪುರಕ್ಕೆ ಬರುತ್ತಿದ್ದ ವಿಮಾನ ಹಠಾತ್ ರದ್ದಾದ ನಂತರ ಪ್ರಯಾಣಿಕರು ಗಲಾಟೆ ಮಾಡಿದರು. ಗುರುವಾರ ಗುವಾಹಟಿ ವಿಮಾನ ನಿಲ್ದಾಣದಲ್ಲಿ ಸುಮಾರು 288 ಪ್ರಯಾಣಿಕರು, ವಿಮಾನ ರದ್ದತಿಯಿಂದಾಗಿ ಅಸಮಾಧಾನಗೊಂಡರು. ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಮಾಹಿತಿ ನೀಡದೆ ವಿಮಾನವನ್ನು ರದ್ದುಗೊಳಿಸಿವೆ ಎಂದು ಪ್ರಯಾಣಿಕರು ಗದ್ದಲ ಎಬ್ಬಿಸಿದರು. ತಾಂತ್ರಿಕ ಕಾರಣಗಳಿಂದ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಯು ಉತ್ತರ ನೀಡಿತು.

ಇದನ್ನೂ ಓದಿ: ಕಾಂಗ್ರೆಸ್​ನಿಂದ 5ನೇ ಗ್ಯಾರಂಟಿ ಘೋಷಣೆ : ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ

ಕೋಪಗೊಂಡ ಪ್ರಯಾಣಿಕರಿಂದ ಗದ್ದಲ ಸೃಷ್ಟಿ: ಗುವಾಹಟಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಹಾಜರಿದ್ದ ಕಾಂಗ್ರೆಸ್ ಮುಖಂಡ ಅಲೋಕ್ ಪರೀಕ್ ಅವರ ಪ್ರಕಾರ, ಗುವಾಹಟಿಯಿಂದ ಜೈಪುರಕ್ಕೆ ಗುರುವಾರ ಸ್ಪೈಸ್ ಜೆಟ್ ಆಡಳಿತವು ಪ್ರಯಾಣಿಕರಿಗೆ ತಿಳಿಸದೇ ವಿಮಾನವನ್ನು ರದ್ದುಗೊಳಿಸಿತು. ವಿಮಾನ ನಿಲ್ದಾಣವನ್ನು ತಲುಪಿದ ನಂತರ ಪ್ರಯಾಣಿಕರಿಗೆ ಸ್ಪೈಸ್ ಜೆಟ್ ವಿಮಾನವನ್ನು ರದ್ದಾಗಿರುವುದು ತಿಳಿದಿದೆ. ಸ್ಪೈಸ್‌ಜೆಟ್ ಆಡಳಿತ ಮಂಡಳಿಯಿಂದ ಸರಿಯಾದ ವ್ಯವಸ್ಥೆ ಆಗಿಲ್ಲ ಎಂದು ಆರೋಪಿಸಿದರು. ಈ ಬಗ್ಗೆ ಪ್ರಯಾಣಿಕರು ಸ್ಪೈಸ್‌ಜೆಟ್ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮೀನುಗಾರರಿಗೆ ದೊರೆಯಲಿದೆ 10 ಲಕ್ಷ ರೂ. ವಿಮೆ, ಲೀಟರ್ ಡೀಸೆಲ್‌ಗೆ 25 ರೂ. ಸಬ್ಸಿಡಿ: ರಾಹುಲ್ ಗಾಂಧಿ ಭರವಸೆ

ಸ್ಪೈಸ್‌ಜೆಟ್ ಏರ್‌ಲೈನ್ಸ್ ಆಡಳಿತದ ವಾದ: ಗುವಾಹಟಿ ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಪ್ರಯಾಣಿಕರು, ಅಲ್ಲಿಂದ ಸುಮಾರು 288 ಪ್ರಯಾಣಿಕರು ಜೈಪುರಕ್ಕೆ ಸ್ಪೈಸ್‌ಜೆಟ್ ವಿಮಾನಕ್ಕಾಗಿ ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ಹೇಳಿದರು. ಗುರುವಾರ ವಿಮಾನ ಇತ್ತು. ವಿಮಾನ ನಿಲ್ದಾಣಕ್ಕೆ ಬಂದ ನಂತರ, ಪ್ರಯಾಣಿಕರಿಗೆ ಬೆಳಗ್ಗೆ 9.15ಕ್ಕೆ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲಾಯಿತು. ಸ್ಪೈಸ್‌ಜೆಟ್ ವಿಮಾನವು ಗುವಾಹಟಿಯಿಂದ ಬೆಳಗ್ಗೆ 10.40ಕ್ಕೆ ಟೇಕ್ ಆಫ್ ಆಗಿ, ಜೈಪುರದಲ್ಲಿ ಇಳಿಯಬೇಕಿದ್ದ ಸಂದರ್ಭದಲ್ಲಿ ವಿಮಾನವನ್ನು ರದ್ದುಗೊಳಿಸಲಾಯಿತು. ಆದರೆ, ಕಾರಣವನ್ನೂ ಸಹ ನೀಡಲಾಗಿಲ್ಲ. ಈಗ ಈ ವಿಮಾನವು ಏಪ್ರಿಲ್ 28 ರಂದು ಬೆಳಗ್ಗೆ 10.40ಕ್ಕೆ ಹೊರಡಲಿದೆ ಎಂದು ಸ್ಪೈಸ್‌ಜೆಟ್ ಏರ್‌ಲೈನ್ಸ್ ಮ್ಯಾನೇಜ್‌ಮೆಂಟ್ ತಿಳಿಸಿದೆ.

ಇದನ್ನೂ ಓದಿ: ಸುಡಾನ್​ನಿಂದ 246 ಭಾರತೀಯರನ್ನು ಕರೆತಂದ ಎರಡನೇ ವಿಮಾನ..

ಇದನ್ನೂ ಓದಿ: ಪರಾರಿಯಾಗಿದ್ದ ನಮೀಬಿಯಾ ಹೆಣ್ಣು ಚಿರತೆಯ ಜಾಡು ಪತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.