ETV Bharat / bharat

ವಿದೇಶಿ ಮಹಿಳಾ ಪ್ರವಾಸಿಯೊಂದಿಗೆ ವ್ಯಕ್ತಿಯ ಅನುಚಿತ ವರ್ತನೆ.. ಮೈ, ಕೈ ಮುಟ್ಟಿದವನ ವಿರುದ್ಧ ಕ್ರಮಕ್ಕೆ ಒತ್ತಾಯ..!

author img

By

Published : Jul 3, 2023, 7:21 PM IST

Updated : Jul 4, 2023, 1:10 PM IST

On camera, female foreign tourist touched inappropriately by man in Jaipur
ವಿದೇಶಿ ಮಹಿಳಾ ಪ್ರವಾಸಿಯೊಂದಿಗೆ ವ್ಯಕ್ತಿಯ ಅನುಚಿತ ವರ್ತನೆ.. ಎಲ್ಲೆಂದರಲ್ಲಿ ಮುಟ್ಟಿದವನ ವಿರುದ್ಧ ಕ್ರಮಕ್ಕೆ ಒತ್ತಾಯ..!

ಜೈಪುರದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ವಿದೇಶಿ ಮಹಿಳಾ ಪ್ರವಾಸಿಗಳೊಂದಿಗೆ ಅನುಚಿತವಾಗಿ ಸ್ಪರ್ಶಿಸಿರುವ ಘಟನೆ ನಡೆದಿದೆ. ಅನುಚಿತವಾಗಿರುವ ಈ ಬಗೆಗಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ಜೈಪುರ (ರಾಜಸ್ಥಾನ): ಜೈಪುರದಲ್ಲಿ ವ್ಯಕ್ತಿಯೊಬ್ಬ ವಿದೇಶಿ ಮಹಿಳಾ ಪ್ರವಾಸಿಗರನ್ನು ಅನುಚಿತವಾಗಿ ಸ್ಪರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ಜೈಪುರ ನಗರದ ಸಿಂಧಿ ಕ್ಯಾಂಪ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯಾವಾಗ ಎಂಬುದು ಇನ್ನೂ ದೃಢಪಟ್ಟಿಲ್ಲ.

ವಿಡಿಯೋದಲ್ಲಿ ಮಹಿಳಾ ಪ್ರವಾಸಿ ಹಾಗೂ ಅವರ ಸಂಗಾತಿ ಮತ್ತು ಸ್ಥಳೀಯ ವ್ಯಕ್ತಿಯೊಬ್ಬ ಪ್ರವಾಸಿ ಮಹಿಳೆ ಜತೆ ಪದೇ ಪದೇ ಅಸಭ್ಯವಾಗಿ ಸ್ಪರ್ಶ ಮಾಡಲು ಪ್ರಯತ್ನಿಸುತ್ತಿರುವುದು ಕಂಡು ಬರುತ್ತಿದೆ. ಮಹಿಳಾ ಪ್ರವಾಸಿ ಈ ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು "ಸುಂದರ" ಮತ್ತು "ಧನ್ಯವಾದ" ಪದಗಳನ್ನು ಬಳಸುತ್ತಿದ್ದರೂ ಆತ ಮಾತ್ರ ಅದನ್ನು ಲೆಕ್ಕಿಸದೇ ಪ್ರವಾಸಿಗೆ ಸ್ಪರ್ಶಿಸುತ್ತಲೇ ನಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

On camera, female foreign tourist touched inappropriately by man in Jaipur
ವಿದೇಶಿ ಮಹಿಳಾ ಪ್ರವಾಸಿಯೊಂದಿಗೆ ವ್ಯಕ್ತಿಯ ಅನುಚಿತ ವರ್ತನೆ.. ಎಲ್ಲೆಂದರಲ್ಲಿ ಮುಟ್ಟಿದವನ ವಿರುದ್ಧ ಕ್ರಮಕ್ಕೆ ಒತ್ತಾಯ..!

ನೋಡಲು 40ರ ಆಸುಪಾಸಿನಲ್ಲಿರುವಂತೆ ಕಾಣುತ್ತಿರುವ ವ್ಯಕ್ತಿ ಮಹಿಳೆಯ ಭುಜದ ಮೇಲೆ ಕೈ ಹಾಕುವ ಮೊದಲು "ಇಟ್ಸ್​ ಮೈ ಪ್ಲಸರ್​​’’ ಎಂದು ಹೇಳುತ್ತಿದ್ದಾನೆ. ಹಾಗೆ ಸಂತೋಷ ಎನ್ನುತ್ತಲೇ ಮತ್ತೊಂದು ಕಡೆಯಿಂದ ಮಹಿಳಾ ಪ್ರವಾಸಿಯ ಇನ್ನೊಂದು ತೋಳನ್ನು ಹಿಡಿಯುತ್ತಾನೆ. ಒಂದು ಕ್ಷಣದಲ್ಲಿ ಅವರ ಮೈ, ಕೈ ಸೇರಿ ದೇಹದ ಭಾಗಗಳನ್ನು ಸ್ಪರ್ಶಿಸುವ ಯತ್ನವನ್ನು ಸ್ಥಳೀಯ ವ್ಯಕ್ತಿ ಮಾಡಿದ್ದಾರೆ.

ವಿದೇಶಿ ಮಹಿಳಾ ಪ್ರವಾಸಿ ಜತೆ ಸ್ಥಳೀಯನೊಬ್ಬ ನಡೆದುಕೊಂಡ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಾಲತಾಣಿಗರೊಬ್ಬರು, ’’ಪಿರಿಯಡ್ ಪ್ಯಾಡ್‌ಗಳು ಅಥವಾ ಕಾಂಡೋಮ್ ಜಾಹೀರಾತುಗಳು ಕಾಣಿಸಿಕೊಂಡಾಗ, ಮನೆಯಲ್ಲಿ ಪೋಷಕರು ಟಿವಿ ಆಫ್​ ಮಾಡುತ್ತಾರೆ" ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರ, "ನಾನೇ ಆಗಿದ್ದರೆ, ಜನರಿಗೆ ಕಿರುಕುಳ ನೀಡುವುದು ಸರಿಯಲ್ಲ ಎಂದಿದ್ದು, ಕೈಗೆ ಸಿಕ್ಕರೆ ಆ ವ್ಯಕ್ತಿಯನ್ನು ಏನು ಮಾಡುತ್ತೇನೆ ನನಗೆ ಗೊತ್ತಿಲ್ಲ’’ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ವಿಡಿಯೋದಲ್ಲಿರುವ ವ್ಯಕ್ತಿಗೆ ಪೊಲೀಸರ ಹುಡುಕಾಟ: ಈ ಬಗ್ಗೆ ಯಾರಿಂದಲೂ ಔಪಚಾರಿಕ ದೂರು ದಾಖಲಾಗದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗಿರುವುದನ್ನು ಸಂಬಂಧಪಟ್ಟ ಪೊಲೀಸ್ ಠಾಣೆ ಗಮನಕ್ಕೆ ತಂದಿದೆ ಎಂದು ಮೂಲಗಳು ಈಟಿವಿ ಭಾರತ್‌ಗೆ ತಿಳಿಸಿವೆ. "ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ, ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್, ರಾಜಸ್ಥಾನದ ಮುಖ್ಯಮಂತ್ರಿ ಮತ್ತು ರಾಜಸ್ಥಾನ ಪೊಲೀಸರು ಈ ವ್ಯಕ್ತಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಮಲಿವಾಲ್, "ಈ ವ್ಯಕ್ತಿ ವಿದೇಶಿ ಪ್ರವಾಸಿಗರನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವ ವಿಡಿಯೋವನ್ನು ನೋಡಿದೆ. ಇದು ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ. ಅಶೋಕ್ ಗೆಹ್ಲೋಟ್ ಮತ್ತು ರಾಜಸ್ಥಾನ ಪೊಲೀಸರು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಟ್ವೀಟ್​ ಮಾಡಿದ್ದಾರೆ.

ವಿಡಿಯೋವನ್ನು ಹಂಚಿಕೊಂಡಾಗಿನಿಂದ, ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಈ ಬಗ್ಗೆ ಕಮೆಂಟ್​ ಮಾಡಿರುವ ಬಳಕೆದಾರರು, "ಅಸಹ್ಯಕರ ನಡವಳಿಕೆ. ಈ ವ್ಯಕ್ತಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರ "ಮಹಿಳೆಯರಿಗೆ ಸ್ವಲ್ಪ ಗೌರವವನ್ನು ತೋರಿಸು." ಎಂದು ಸಿಟ್ಟು ಹೊರ ಹಾಕಿದ್ದಾರೆ.

ಇದನ್ನು ಓದಿ:Rich farmer: 1000 ಎಕರೆ ಜಮೀನಿನ ಮೇಲ್ವಿಚಾರಣೆಗೆ 7 ಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್ ಖರೀದಿಗೆ ಮುಂದಾದ ರೈತ

Last Updated :Jul 4, 2023, 1:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.