ETV Bharat / bharat

ಪೌರಸಂಸ್ಥೆಗಳ ನೇಮಕಾತಿ ಅಕ್ರಮ: ಬಂಗಾಳ ಬಿಜೆಪಿ ಶಾಸಕನ ಮನೆ ಮೇಲೆ ಸಿಬಿಐ ದಾಳಿ

author img

By ETV Bharat Karnataka Team

Published : Oct 9, 2023, 8:07 PM IST

now-cbi-raids-on-bjp-mla-parthsarathi-chatterjees-house-in-bengals-ranaghat
ಪೌರಸಂಸ್ಥೆಗಳ ನೇಮಕಾತಿ ಅಕ್ರಮ ಪ್ರಕರಣ : ಬಿಜೆಪಿ ಶಾಸಕ ಪಾರ್ಥ ಸಾರಥಿ ಮನೆ ಮೇಲೆ ಸಿಬಿಐ ದಾಳಿ

ಪೌರಸಂಸ್ಥೆಗಳ ನೇಮಕಾತಿಯಲ್ಲಿ ಅಕ್ರಮ ನಡೆಸಿರುವ ಆರೋಪ ಸಂಬಂಧ ಬಿಜೆಪಿ ಶಾಸಕ ಪಾರ್ಥ ಸಾರಥಿ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕೋಲ್ಕತ್ತಾ (ಪಶ್ಚಿಮ ಬಂಗಾಳ) : ಪೌರಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿದ ಆರೋಪದಲ್ಲಿ ಈಗಾಗಲೇ ಸಿಬಿಐ ಅಧಿಕಾರಿಗಳು ಪಶ್ಚಿಮ ಬಂಗಾಳ ರಾಜಕಾರಣಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದು, ಇಂದು ಬಿಜೆಪಿ ಶಾಸಕ ಪಾರ್ಥ ಸಾರಥಿ ಚಟರ್ಜಿ ಮನೆ ಮೇಲೆ ದಾಳಿ ಮಾಡಿದರು. ಬೆಳಿಗ್ಗೆ ತನಿಖಾಧಿಕಾರಿಗಳು ಐದು ಕಡೆಗಳಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ರಣಘಾಟ್​ ವಾಯುವ್ಯ ಕ್ಷೇತ್ರದ ಶಾಸಕ ಪಾರ್ಥ ಸಾರಥಿ ಚಟರ್ಜಿ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದರು.

ಇನ್ನೊಂದು ಅಧಿಕಾರಿಗಳ ತಂಡ ಹೌರಾ ಜಿಲ್ಲೆಯ ಉಲುಬೇರಿಯಾ ಗ್ರಾಮಾಂತರ ಪ್ರದೇಶದಲ್ಲಿ ದಾಳಿ ನಡೆಸಿತು. ಈ ಸಂದರ್ಭದಲ್ಲಿ ತನಿಖಾಧಿಕಾರಿಗಳು ಡೈಮಂಡ್​ ಹಾರ್ಬರ್​ ಮುನ್ಸಿಪಾಲಿಟಿಯ ಮಾಜಿ ಮೇಯರ್​ ಮೀರಾ ಹಲ್ದಾರ್​ ಮನೆ ಮೇಲೂ ದಾಳಿ ನಡೆಸಿ ಶೋಧ ಕೈಗೊಂಡರು. ಉಲುಬೇರಿಯಾ ಮುನ್ಸಿಪಾಲಿಟಿಯ ಮಾಜಿ ಅಧ್ಯಕ್ಷ ಅರ್ಜುನ್​ ಸರ್ಕಾರ್​ ಮನೆಗೂ ಸಿಬಿಐ ದಾಳಿ ಮಾಡಿತು.

ಸಿಬಿಐ ಅಧಿಕಾರಿಗಳ ಮಾಹಿತಿ ಪ್ರಕಾರ, ಬೆಳಗ್ಗೆ ಭದ್ರತಾ ಸಿಬ್ಬಂದಿಗಳೊಂದಿಗೆ ಸಿಬಿಐ, ಬಿಜೆಪಿ ಶಾಸಕ ಪಾರ್ಥ ಸಾರಥಿ ಚಟರ್ಜಿ ಮನೆಗೆ ತೆರಳಿದೆ. ಭದ್ರತಾ ಸಿಬ್ಬಂದಿ ಶಾಸಕರ ಮನೆಯನ್ನು ಸುತ್ತುವರೆದಿದ್ದರು. ದಾಳಿಗೂ ಮುನ್ನ ಭದ್ರತಾ ಸಿಬ್ಬಂದಿ ಜೊತೆ ಸಿಬಿಐ ಅಧಿಕಾರಿಗಳು ಮಾತುಕತೆ ನಡೆಸಿದ್ದರು.

ಪ್ರಕರಣದ ತನಿಖೆ ವೇಳೆ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಶಾಸಕ ಪಾರ್ಥ ಸಾರಥಿ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಕಂಡುಬಂದಿತ್ತು. ಈ ಸಂಬಂಧ ಸಿಬಿಐ ಅಧಿಕಾರಿಗಳು ಶಾಸಕ ಮನೆ ಮೇಲೆ ದಾಳಿ ನಡೆಸಿ ವಿವಿಧ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೆ ಶಾಸಕರನ್ನು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಶಾಸಕರ ಮೊಬೈಲ್ ಫೋನ್​ ಅನ್ನು ಸಿಬಿಐ ವಶಕ್ಕೆ ಪಡೆದಿದೆ. ಅಲ್ಲದೆ ವಿಚಾರಣೆ ವೇಳೆ ಅವರ ಭದ್ರತಾ ಸಿಬ್ಬಂದಿಯನ್ನು ಹೊರ ಕಳುಹಿಸಲಾಗಿತ್ತು ಎಂದು ತಿಳಿದುಬಂದಿದೆ.

ಇದಕ್ಕೂ ಮುನ್ನ, ಭಾನುವಾರ ಸಿಬಿಐ ಅಧಿಕಾರಿಗಳು ಒಟ್ಟು 12 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಕೋಲ್ಕತ್ತಾ ಮೇಯರ್​ ಫಿರ್ಹಾದ್​ ಹಕೀಮ್​ ಮತ್ತು ಶಾಸಕ ಮದನ್​ ಮಿತ್ರ ಮನೆ ಮೇಲೆ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದರು. ಮೇಯರ್ ಫಿರ್ಹಾದ್ ಮನೆಯಲ್ಲಿ ಒಟ್ಟು 9 ಗಂಟೆಗಳ ಅಧಿಕಾರಿಗಳ ಶೋಧ ಕಾರ್ಯ ನಡೆಸಿದ್ದರು.

ಇದನ್ನೂ ಓದಿ : ಹೈದರಾಬಾದ್‌-ದುಬೈ ವಿಮಾನ ಹೈಜಾಕ್ ಬೆದರಿಕೆ; ಮೂವರು ಪೊಲೀಸ್​ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.