ETV Bharat / bharat

ಯಥಾಸ್ಥಿತಿಯಲ್ಲಿ ಪೆಟ್ರೋಲ್‌, ಡೀಸೆಲ್‌; ವಿವಿಧ ನಗರಗಳ ತೈಲ ದರ ಹೀಗಿದೆ..

author img

By

Published : Aug 29, 2021, 6:59 AM IST

No changes in fuel price in India
ಬದಲಾವಣೆಯಾಗದ ತೈಲ ದರ..ವಿವಿಧ ನಗರಗಳ ತೈಲ ದರ ಇಲ್ಲದೆ..

ಕಳೆದೊಂದು ವಾರದಿಂದ ತೈಲ ದರ ಸ್ಥಿರತೆ ಕಾಯ್ದುಕೊಂಡಿದ್ದು, ಯಾವುದೇ ರೀತಿಯ ಬೆಲೆ ಏರಿಕೆಯಾಗಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.49 ರೂ., ಲೀಟರ್ ಡೀಸೆಲ್​ 88.92 ರೂಪಾಯಿ ಇದೆ.

ನವದೆಹಲಿ: ಕಳೆದ ಕೆಲವು ದಿನಗಳಿಂದ ಸ್ಥಿರವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಇಂದೂ ಕೂಡಾ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ತೈಲ ಮಾರುಕಟ್ಟೆ ಕಂಪನಿಗಳು ಬೆಲೆಯನ್ನು ಬದಲಾವಣೆ ಮಾಡದಿರಲು ನಿರ್ಧರಿಸಿವೆ.

no-changes-in-fuel-price-in-india
ವಿವಿಧ ನಗರಗಳ ತೈಲ ದರ ಹೀಗಿದೆ..

ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 70 ಡಾಲರ್ ಇದ್ದು, ಹಿಂದಿನ ಬೆಲೆಗಳಿಗಿಂತ ಕಡಿಮೆ ಇದೆ. ಇದರಿಂದಾಗಿ ಭಾರತೀಯ ತೈಲ ಮಾರಾಟ ಕಂಪನಿಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡುವ ಅನಿವಾರ್ಯತೆ ಉಂಟಾಗಿಲ್ಲ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ 101.49 ರೂಪಾಯಿ, ಲೀಟರ್ ಡೀಸೆಲ್​ 88.92 ರೂಪಾಯಿಗೆ ಮಾರಾಟವಾಗುತ್ತಿದೆ. ಇತ್ತ ಬೆಂಗಳೂರಲ್ಲಿ ಪ್ರತಿ ಲೀಟರ್ ಪೆಟ್ರೋಲ್​ಗೆ 104.98 ರೂ., ಡೀಸೆಲ್​​ 94.34 ರೂಪಾಯಿ ಆಗಿದೆ. ಅದೇ ರೀತಿ ಮುಂಬೈನಲ್ಲಿ ಕ್ರಮವಾಗಿ 107.52 ರೂ. ಮತ್ತು 96.48 ರೂಪಾಯಿಯಲ್ಲಿ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.