ETV Bharat / bharat

ಗಣೇಶನ ಪಾದ ಮುಟ್ಟಿದ ದಲಿತ ಬಾಲಕ: ನೀರಿನ ಬಾಟಲಿ ಮುಟ್ಟಿದ ಎಂಬ ಕಾರಣಕ್ಕೆ ತಂದೆ, ಮಗನ ಮೇಲೆ ಹಲ್ಲೆ

author img

By

Published : Sep 9, 2022, 8:13 PM IST

kannuaj dalit boy beat up
ಗಣೇಶನ ಪಾದ ಮುಟ್ಟಿದ ದಲಿತ ಬಾಲಕ

ಉತ್ತರ ಪ್ರದೇಶದ ಕನೌಜ್​​​ ಹಾಗೂ ಶ್ರಾವಸ್ತಿ ಪ್ರದೇಶಗಳಲ್ಲಿ ದಲಿತರ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆಯ ಎರಡು ಪ್ರತ್ಯೇಕ ಪ್ರಕರಣಗಳು ಬೆಳಕಿಗೆ ಬಂದಿವೆ.

ಕನೌಜ್​​/ಶ್ರಾವಸ್ತಿ(ಉತ್ತರಪ್ರದೇಶ): ಜಿಲ್ಲೆಯ ಸದರ್ ಕೊತ್ವಾಲಿ ಪ್ರದೇಶದಲ್ಲಿಟ್ಟಿದ್ದ ಗಣೇಶನ ಮೂರ್ತಿಯ ಪಾದ ಸ್ಪರ್ಶಿಸಿದ ದಲಿತ ಅಪ್ರಾಪ್ತ ಹುಡುಗನನ್ನು ಸಂಘಟನೆಯ ಜನರು ಥಳಿಸಿದ್ದು ಮಾತ್ರವಲ್ಲದೇ ಜಾತಿ ನಿಂದನೆಯ ಮಾತುಗಳನ್ನಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಬಾಲಕನ ಕುಟುಂಬ ಥಳಿಸಿದವರ ವಿರುದ್ಧ ದೂರು ದಾಖಲಿಸಿ, ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.

ಮಾಹಿತಿಯ ಪ್ರಕಾರ, ಸದರ್ ಕೊತ್ವಾಲಿಯ ಸರೈಮಿರಾ ಚೌಕಿ ಪ್ರದೇಶದ ಅಂಬೇಡ್ಕರ್ ನಗರ ಗುತ್ತಿಗೆದಾರ ಗಾಲಿ ಮೊಹಲ್ಲಾದಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಇಲ್ಲಿನ ನಿವಾಸಿ ರಾಜೇಶ್ ಗೌತಮ್ ಎಂಬುವರ ಪುತ್ರ ಸನ್ನಿ ಗೌತಮ್ ಬುಧವಾರ ರಾತ್ರಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದನು. ಆಟವಾಡುತ್ತಾ ಪಂಗಡದಲ್ಲಿ ಅಲಂಕೃತಗೊಂಡಿದ್ದ ಗಣೇಶ ಮೂರ್ತಿಯ ಪಾದ ಮುಟ್ಟಲು ಹೋಗಿದ್ದಾನೆ. ಈ ಗಣೇಶ ಪೂಜೆಯ ಆಯೋಜಕರಲ್ಲಿ ಒಬ್ಬರಾದ ಸ್ಥಳೀಯ ಬಬ್ಬನ್ ಗುಪ್ತಾ, ಸನ್ನಿ ಗಣೇಶ ಮೂರ್ತಿಯ ಪಾದಗಳನ್ನು ಸ್ಪರ್ಶಿಸುತ್ತಿರುವುದನ್ನು ಕಂಡು ಕೋಪಗೊಂಡಿದ್ದರು. ಬಬ್ಬನ್ ಗುಪ್ತಾ ಮತ್ತು ಅವರ ಮಕ್ಕಳಾದ ಪ್ರಮಿತ್ ಗುಪ್ತಾ ಮತ್ತು ಮೊಹರ್ ಸಿಂಗ್ ದಲಿತ ಅಪ್ರಾಪ್ತನನ್ನು ಥಳಿಸಿದ್ದಾರೆ.

ಗಣೇಶನ ಪಾದ ಮುಟ್ಟಿದ ದಲಿತ ಬಾಲಕ

ಸರೈಮಿರಾ ಹೊರಠಾಣೆ ಪೊಲೀಸರು ದೂರು ನೀಡಿದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತನ ಕಡೆಯವರು ಆರೋಪಿಸಿದ್ದಾರೆ. ಇದಾದ ನಂತರ ಬಾಲಕನ ತಂದೆ ಸದರ್ ಕೊತ್ವಾಲಿಯಲ್ಲಿ ಲಿಖಿತ ದೂರು ದಾಖಲಿಸಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಮಗುವಿನ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಕೊತ್ವಾಲಿ ಉಸ್ತುವಾರಿ ಅಲೋಕ್ ಕುಮಾರ್ ದುಬೆ ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇನ್ನೊಂದು ಪ್ರಕರಣ: ಶ್ರಾವಸ್ತಿಯಲ್ಲಿ ಇಂತಹದೇ ದಲಿತರ ಮೇಲೆ ಹಲ್ಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ನೀರಿನ ಬಾಟಲಿ ಮುಟ್ಟಿದ್ದಕ್ಕೆ ಸಪ್ಲೈ ಇನ್ಸ್​​ಪೆಕ್ಟರ್​​ ಮತ್ತು ಗುಮಾಸ್ತರು ದಲಿತ ತಂದೆ ಮತ್ತು ಮಗನನ್ನು ಥಳಿಸಿದ್ದಾರೆ. ಆಹಾರ ಮತ್ತು ಜಾರಿ ಇಲಾಖೆ ಕಚೇರಿಯಲ್ಲಿ ಪಡಿತರ ಚೀಟಿ ಸರಿಪಡಿಸಲು ಬಂದ ತಂದೆ ಮಗನಲ್ಲಿ ವೃದ್ಧ ತಂದೆ ಆಕಸ್ಮಿಕವಾಗಿ ಟೇಬಲ್ ಮೇಲೆ ಇಟ್ಟಿದ್ದ ಬಾಟಲಿಯಲ್ಲಿ ನೀರು ಕುಡಿಯಲು ಯತ್ನಿಸಿದ್ದಾರೆ. ನೀರಿನ ಬಾಟಲಿ ಮುಟ್ಟಿದ ಕೂಡಲೇ ಸಿಟ್ಟಿಗೆದ್ದ ಸಪ್ಲೈ ಇನ್ಸ್​​ಪೆಕ್ಟರ್​​ ಹಾಗೂ ಗುಮಾಸ್ತ ಸೇರಿ ವೃದ್ಧನಿಗೆ ಥಳಿಸಿದ್ದಾರೆ.

ಮುದುಕನನ್ನು ರಕ್ಷಿಸಲು ಆಗಮಿಸಿದ ಆತನ ಮಗನಿಗೂ ಥಳಿಸಿದ್ದಾರೆ. ಇದಾದ ನಂತರ ವಕೀಲರು ಗಾಯಾಳುಗಳ ಬೆಂಬಲಕ್ಕೆ ಬಂದಿದ್ದಾರೆ. ಈ ವೇಳೆ ಆಹಾರ ಇಲಾಖೆ ಅಧಿಕಾರಿ ಹಾಗೂ ವಕೀಲರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ನಡುವೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಿ, ಗಾಯಗೊಂಡ ತಂದೆ ಮತ್ತು ಮಗನನ್ನು ಚಿಕಿತ್ಸೆಗಾಗಿ ಸಿಎಚ್‌ಸಿಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: VIDEO: ದಲಿತ ವ್ಯಕ್ತಿ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಗ್ರಾಮ ಪಂಚಾಯ್ತಿ ಮುಖ್ಯಸ್ಥ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.