ETV Bharat / bharat

BE ಪದವೀಧರರಿಗೆ ಇಸ್ರೋದಲ್ಲಿದೆ ಅವಕಾಶ! 303 ಹುದ್ದೆಗಳಿಗೆ ಅರ್ಜಿ ಆಹ್ವಾನ

author img

By

Published : May 26, 2023, 12:23 PM IST

Isro vacancy for 303 engineer scientist job
Isro vacancy for 303 engineer scientist job

ಇಸ್ರೋದಲ್ಲಿ ಖಾಲಿ ಇರುವ ಇಂಜಿನಿಯರಿಂಗ್​ ಹುದ್ದೆಗಳು, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೊ) ಕಾರ್ಯ ನಿರ್ವಹಿಸಬೇಕು ಎಂಬ ಹಂಬಲ ನಿಮಗಿದ್ದರೆ, ಇಲ್ಲಿದೆ ಸುವರ್ಣಾವಕಾಶ. ಸಂಸ್ಥೆಯ ವಿವಿಧ ತಾಂತ್ರಿಕ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕಾಗಿ ಬಿಇ ಪದವೀಧರರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಲಾಂಚ್​ ವೆಹಿಕಲ್​ ಮತ್ತು ಕಮ್ಯೂನಿಕೇಷನ್​/ ರಿಮೋಟ್​ ಸೆನ್ಸಿಂಗ್​ ಸಾಟಲೈಟ್​​ ವಿನ್ಯಾಸ ಅಭಿವೃದ್ಧಿ ಮಾಡುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ: ಸೈಂಟಿಸ್ಟ್ ​/ ಇಂಜಿನಿಯರ್​ ಸೇರಿದಂತೆ ಒಟ್ಟು 303 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಲೆಕ್ಟ್ರಾನಿಕ್ಸ್​​, ಮೆಕಾನಿಕ್​, ಕಂಪ್ಯೂಟರ್​ ಸೈನ್ಸ್​​ ಹುದ್ದೆಗಳಲ್ಲಿ ಇಂಜಿನಿಯರಿಂಗ್​ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಅಂಗೀಕೃತ ಮಂಡಳಿಗಳಿಂದ ಶೇ 55 ರಷ್ಟು ಫಲಿತಾಂಶದೊಂದಿಗೆ ಇಂಜಿನಿಯರಿಂಗ್​​ ಪದವಿ ಪೂರ್ಣಗೊಂಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 28 ವರ್ಷಗಳು ಮೀರಬಾರದು. ಇಸ್ರೋ ನಿಯಮ ಅನುಸಾರವಾಗಿ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅಧಿಕೃತ ಅಧಿಸೂಚನೆ
ಅಧಿಕೃತ ಅಧಿಸೂಚನೆ

ಅರ್ಜಿ ಸಲ್ಲಿಕೆ ವಿಧಾನ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್​ಲೈನ್​ ಮತ್ತು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ನಿಗದಿಸಿಲ್ಲ. ಉಳಿದ ಅಭ್ಯರ್ಥಿಗಳು 250 ರೂ ಅರ್ಜಿ ಶುಲ್ಕವನ್ನು ಭರಿಸಬೇಕು. 56,100 ರೂ ವೇತನ ನಿಗದಿಸಲಾಗಿದೆ. ಇದರ ಜೊತೆಗೆ ಡಿಎ, ಎಚ್​ಎ ಮತ್ತು ಇನ್ನಿತರ ಸೌಲಭ್ಯಗಳನ್ನು ನೀಡಲಾಗಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಲಿಖಿತ ಪರೀಕ್ಷೆಯನ್ನು ಬೆಂಗಳೂರು, ಭೋಪಾಲ್​, ಚೆನ್ನೈ, ಗುವಾಹಟಿ, ಹೈದ್ರಾಬಾದ್​, ಕೋಲ್ಕತ್ತಾ, ಲಕ್ನೋ, ಮುಂಬೈ, ನವದೆಹಲಿ ಮತ್ತು ತಿರುವನಂತಪುರದಲ್ಲಿ ಇಸ್ರೋ ನಡೆಸಲಿದೆ.

ಅರ್ಜಿ ಸಲ್ಲಿಕೆ ಹೀಗೆ..: ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಮುನ್ನ ಅಧಿಕೃತ ಅರ್ಜಿಯನ್ನು ಸರಿಯಾಗಿ ಪರಿಶೀಲನೆ ನಡೆಸಿ. ಆ ಬಳಿಕ ಅಗತ್ಯ ದಾಖಲಾತಿ ಮಾಹಿತಿ ಮೂಲಕ ಅರ್ಜಿ ಭರ್ತಿ ಮಾಡಿ. ನಿಗದಿತ ದಿನಾಂಕಕ್ಕೆ ಮುನ್ನ ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಕೆ ಮಾಡಬೇಕು. ಅಭ್ಯರ್ಥಿಗಳು ಮೇ 25ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಜೂನ್​ 14 ಕಡೇಯ ದಿನ ಆಗಿದೆ. ಅರ್ಜಿ ಶುಲ್ಕ ಪಾವತಿಗೆ ಜೂನ್​ 16 ಕಡೆಯ ದಿನವಾಗಿದೆ.

ಈ ಹುದ್ದೆಗಳ ಕುರಿತು ಅಧಿಕೃತ ಅಧಿಸೂಚನೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಪಡೆಯಲು ಅಭ್ಯರ್ಥಿಗಳು ಇಸ್ರೋ ಜಾಲತಾಣ isro.gov.in ಭೇಟಿ ನೀಡಬಹುದು. ಈ http://www.isro.gov.in/isro_centres.html ಜಾಲತಾಣದಲ್ಲೂ ಹೆಚ್ಚಿನ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: ಅಂಚೆ ಇಲಾಖೆಯ 12,828 ಗ್ರಾಮೀಣ ಡಾಕ್​ ಸೇವಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.