ETV Bharat / bharat

ಕೇರಳದಲ್ಲೇ ದೇಶದ ಮೂರನೇ ಮಂಕಿಪಾಕ್ಸ್ ಪ್ರಕರಣ ಪತ್ತೆ: ಹೆಚ್ಚಿದ ಆತಂಕ

author img

By

Published : Jul 22, 2022, 8:23 PM IST

ಕರ್ನಾಟಕದ ನೆರೆ ರಾಜ್ಯವಾದ ಕೇರಳದಲ್ಲೇ ದೇಶದ ಮೂರನೇ ಮಂಕಿಪಾಕ್ಸ್ ಸೋಂಕಿನ ಪ್ರಕರಣ ಪತ್ತೆಯಾಗಿದ್ದು, ಗಡಿ ಭಾಗದ ಜನರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ.

India's third Monkeypox case confirmed in Kerala
ಕೇರಳದಲ್ಲೇ ದೇಶದ ಮೂರನೇ ಮಂಕಿಪಾಕ್ಸ್ ಪ್ರಕರಣ ಪತ್ತೆ: ಹೆಚ್ಚಿದ ಆತಂಕ

ಮಲಪ್ಪುರಂ(ಕೇರಳ): ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದ್ದು, ಈ ಮೂಲಕ ದೇಶದಲ್ಲೇ ಮೂರನೇ ಪ್ರಕರಣ ದಾಖಲಾಗಿದೆ. ಆಘಾತಕಾರಿ ಅಂಶ ಎಂದರೆ ಈ ಹೊಸ ಸೋಂಕಿನ ಮೂರು ಪ್ರಕರಣಗಳೂ ಕೂಡ ಕೇರಳದಲ್ಲಿ ವರದಿಯಾಗಿವೆ.

ಮಲಪ್ಪುರಂದ ಮೂಲದ 35 ವರ್ಷದ ವ್ಯಕ್ತಿ ಜುಲೈ 6ರಂದು ಯುಎಇಯಿಂದ ವಾಪಸ್​ ಆಗಿದ್ದರು. 13ರಂದು ಆ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿತ್ತು. 15ರಂದು ದೇಹದಲ್ಲಿ ಚರ್ಮದ ಮಚ್ಚೆಗಳು ಪತ್ತೆಯಾಗಿದ್ದವು. ಹೀಗಾಗಿ ಮಂಕಿಪಾಕ್ಸ್ ಸೋಂಕಿನ ಶಂಕೆ ಮೇರೆಗೆ ವೈದಕೀಯ ಮಾದರಿಗಳನ್ನು ಪುಣೆ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿತ್ತು. ಪ್ರಯೋಗಾಲಯದ ವರದಿಯಲ್ಲಿ ಮಂಕಿಪಾಕ್ಸ್ ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಸದ್ಯ ಈ ರೋಗಿಯು ಮಂಚೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಯೊಂದಿಗೆ ನಿಕಟ ಸಂಪರ್ಕಕ್ಕೆ ಬಂದವರ ಮೇಲೂ ನಿಗಾ ಇರಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಯುಎಇಯಿಂದ ಮರಳಿದ ಕೇರಳದ ಇಬ್ಬರಿಗೂ ಮಂಕಿಪಾಕ್ಸ್ ಇರುವುದು ದೃಢಪಟ್ಟಿತ್ತು. ಈಗ ಸೋಂಕಿತರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೊಹಾಲಿಯಲ್ಲಿ ವದಂತಿ: ಪಂಜಾಬ್​ನ ಮೊಹಾಲಿಯಲ್ಲಿ ಒಬ್ಬ ಶಾಲಾ ವಿದ್ಯಾರ್ಥಿಗೆ ಮಂಕಿಪಾಕ್ಸ್ ದೃಢಪಟ್ಟಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದು ಕೇವಲ ವದಂತಿ. ಮಂಕಿಪಾಕ್ಸ್ ಕುರಿತ ವರದಿಗಳು ಆಧಾರ ರಹಿತವಾಗಿದೆ ಎಂದು ಮೊಹಾಲಿ ಜಿಲ್ಲಾ ಆರೋಗ್ಯ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಜಿಲ್ಲೆಯಲ್ಲಿ ಇದುವರೆಗೂ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿದೆ. ಆದರೆ, ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೈ - ಕಾಲು ಮತ್ತು ಬಾಯಿ ರೋಗದ ಕೆಲವು ಲಕ್ಷಣಗಳಿದ್ದು, ಅವರ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಒಬ್ಬ ವಿದ್ಯಾರ್ಥಿಗೆ ಬಾಯಿ ರೋಗ ದೃಢಪಟ್ಟಿದ್ದು, ಇನ್ನೆರಡು ಮಾದರಿಗಳ ವರದಿ ಶೀಘ್ರದಲ್ಲೇ ಬರಲಿದೆ. ಆದರೆ, ಇದು ಮಂಕಿಪಾಕ್ಸ್ ಸೋಂಕು ಅಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆದರ್ಶಪಾಲ್ ಕೌರ್ ಮತ್ತು ಸಾಂಕ್ರಾಮಿಕ ರೋಗ ತಜ್ಞ ಡಾ.ಹರ್ಮನ್‌ದೀಪ್ ಕೌರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮೊಬೈಲ್​ ಟಾರ್ಚ್‌ಲೈಟ್​ ಬಳಸಿ ಚಿಕಿತ್ಸೆ..ವೈದ್ಯಕೀಯ ಕಾಲೇಜ್​​ನ ಐಸಿಯು ವಿಭಾಗದಲ್ಲಿ ಇದೆಂಥಾ ದುಃಸ್ಥಿತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.