ETV Bharat / bharat

ದೇಶದಲ್ಲಿ 605 ಹೊಸ ಕೋವಿಡ್​ ಪ್ರಕರಣ ಪತ್ತೆ; ನಾಲ್ಕು ಬಲಿ

author img

By ETV Bharat Karnataka Team

Published : Jan 10, 2024, 4:50 PM IST

india latest Covid updates on January 10
india latest Covid updates on January 10

ದೇಶದಲ್ಲಿ ಕೋವಿಡ್​ ಪ್ರಕರಣಗಳ ದಾಖಲಾತಿ ಕುರಿತು ಬುಧವಾರ ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ

ನವದೆಹಲಿ​: ಭಾರತದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 605 ಹೊಸ ಕೋವಿಡ್​ ಪ್ರಕರಣಗಳು ದಾಖಲಾಗಿದೆ. ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಸೋಮವಾರಕ್ಕೆ ಹೋಲಿಕೆ ಮಾಡಿದರೆ ಕೊಂಚ ಇಳಿಕೆ ಕಂಡಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ನಾಲ್ಕು ಸಾವು ಸಂಭವಿಸಿದೆ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ಬುಧವಾರ ಬೆಳಗ್ಗೆ ಮಾಹಿತಿ ಹಂಚಿಕೊಂಡಿದೆ.

ಬುಧವಾರ ಬೆಳಗ್ಗೆ 8ಕ್ಕೆ ಪ್ರಕಟವಾದ ಆರೋಗ್ಯ ಸಚಿವಾಲಯದ ಮಾಹಿತಿಯಂತೆ, ಕರ್ನಾಟಕ ಮತ್ತು ಕೇರಳದಲ್ಲಿ ತಲಾ ಎರಡು ಸಾವು ಸಂಭವಿಸಿದೆ. ಮಂಗಳವಾರ ದೇಶದಲ್ಲಿ ಒಟ್ಟು ಆರು ಸಾವಿನ ಪ್ರಕರಣ ದಾಖಲಾಗಿತ್ತು. ಸೋಮವಾರ ದೇಶದಲ್ಲಿ ಒಟ್ಟಾರೆ ಸಕ್ರಿಯ ಸೋಂಕಿನ ಸಂಖ್ಯೆ 3,919 ದಾಖಲಾಗಿದ್ದು, ಬುಧವಾರ 3,643 ದಾಖಲಾಗಿದ್ದು, ಅಲ್ಪಮಟ್ಟದ ಕುಸಿತ ಕಂಡಿದೆ.

ದೇಶದಲ್ಲಿ ಕೊರೋನಾ ವೈರಸ್​ನ ಮೊದಲ ಪ್ರಕರಣ ದಾಖಲು ಆದಗಿನಿಂದ ಅಂದರೆ 2020ರ ಜನವರಿಯಿಂದ ಇಲ್ಲಿಯವರೆಗೆ ಒಟ್ಟಾರೆ 4,50,19,819 ಸೋಂಕು ದೃಢಪಟ್ಟಿದ್ದು, ಸಾವಿನ ಸಂಖ್ಯೆ 5,33,406 ಆಗಿದೆ.

ಈ ಬಾರಿ ಅಂದರೆ 2023 ರ ಚಳಿಗಾಲದಲ್ಲಿ ಕೋವಿಡ್​ ಪ್ರಕರಣಗಳ ಏರಿಕೆಗೆ ಓಮ್ರಿಕಾನ್​ ಉಪತಳಿ ಬಿಎ.2.86 ಅಥವಾ ಪಿರೋಲ್​ ತಳಿಯಾಗಿರುವ ಜೆಎನ್​.1 ಕಾರಣವಾಗಿದೆ. ದೇಶದಲ್ಲಿ ಮೊದಲ ಜೆಎನ್​.1 ಪ್ರಕರಣ ಕೇರಳದಲ್ಲಿ ವರದಿಯಾಗಿತ್ತು. ಅತ್ಯಂತ ವೇಗವಾಗಿ ಹರಡುವ ಈ ಜೆಎನ್​.1 ಸೋಂಕು ಇದೀಗ ಮಹಾರಾಷ್ಟ್ರದಲ್ಲಿ ಪ್ರಾಬಲ್ಯ ಮೆರೆಯುತ್ತಿದೆ. ದೇಶದಲ್ಲಿ 12 ರಾಜ್ಯದಲ್ಲಿ ಜೆಎನ್​.1 ಸಕ್ರಿಯ ಪ್ರಕರಣ 682 ದಾಖಲಾಗಿದೆ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್​​, ಬಿಹಾರ್​, ಪಂಜಾಬ್​, ಅಸ್ಸಾಂ, ಹಿಮಾಚಲ ಪ್ರದೇಶ ಮತ್ತು ತ್ರಿಪುರಾದಲ್ಲಿ ಹೊಸ ಕೋವಿಡ್​ ಪ್ರಕರಣಗಳು ದಾಖಲಾಗಿದೆ. ಕೇರಳ ಈ ಕೋವಿಡ್​ ಪ್ರಕರಣಗಳು ಇಳಿಕೆ ಕಂಡಿದೆ.

ಕರ್ನಾಟಕದಲ್ಲಿ ಕೋವಿಡ್​: ಸದ್ಯ ಅತಿ ಹೆಚ್ಚು ಕೋವಿಡ್​ ಪ್ರಕರಣಗಳು ವರದಿಯಾಗಿರುವ ರಾಜ್ಯ ಕರ್ನಾಟಕವಾಗಿದೆ. ಜನವರಿ 9ರ ಆರೋಗ್ಯ ಸಚಿವಾಲಯದ ಮಾಹಿತಿ ಅನುಸಾರ ರಾಜ್ಯದಲ್ಲಿ ಸಕ್ರಿಯವಾಗಿರುವ ಕೋವಿಡ್​ ಪ್ರಕರಣ 1,222 ಆಗಿದೆ.

2023ರ ಡಿಸೆಂಬರ್​ 5ರವರೆಗೆ ಈ ಕೋವಿಡ್​ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದ್ದವು. ತಂಪು ಹವಾಮಾನ ಮತ್ತು ಹೊಸ ಕೋವಿಡ್​ ಜೆಎನ್​.1 ಪತ್ತೆಯಾದ ಬಳಿಕ ಮತ್ತೆ ಕೋವಿಡ್​ ಪ್ರಕರಣಗಳು ಏರಿಕೆ ಕಂಡಿದೆ. ಡಿಸೆಂಬರ್​ 5ರಿಂದ ಡಿಸೆಂಬರ್​ 31ರವರೆಗೆ ಕೋವಿಡ್​ ಪ್ರಕರಣದಲ್ಲಿ 0.2ರಷ್ಟು ಏರಿಕೆ ಕಂಡಿತು.

ಇದನ್ನೂ ಓದಿ: 35 ತಳಿಯ ಬ್ಯಾಕ್ಟೀರಿಯಾ ಪತ್ತೆ; ಇವುಗಳಿಂದ ಮಾನವರಿಗೂ ತಗುಲಬಹುದು ಸೋಂಕು: ವಿಜ್ಞಾನಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.