ETV Bharat / bharat

ಒಮಿಕ್ರಾನ್​ ಭೀತಿಗೆ ತೆಲಂಗಾಣದ ಗ್ರಾಮ 10 ದಿನ ಸ್ವಯಂ ಲಾಕ್​ಡೌನ್​!

author img

By

Published : Dec 24, 2021, 10:42 AM IST

ಲಾಕ್​ಡೌನ್​ ನಿಯಮದಂತೆ ಬೆಳಗ್ಗೆ ಮಾತ್ರ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಗ್ರಾಮದಲ್ಲಿ ವಿನಾಕಾರಣ ಯಾರೂ ಹೊರಗೆ ಸುತ್ತಾಡುವಂತಿಲ್ಲ..

Omicron Case
ಲಾಕ್​ಡೌನ್

ಹೈದರಾಬಾದ್​(ತೆಲಂಗಾಣ) : ಕೊರೊನಾ ರೂಪಾಂತರಿ ಒಮಿಕ್ರಾನ್​ ಜನರನ್ನು ಎಷ್ಟು ಭೀತಿಗೊಳಿಸಿದೆ ಎಂದರೆ, ತೆಲಂಗಾಣದ ಗ್ರಾಮವೊಂದರ ವ್ಯಕ್ತಿಯೊಬ್ಬನಲ್ಲಿ ಒಮಿಕ್ರಾನ್​ ಪತ್ತೆಯಾದ ಬಳಿಕ ಇಡೀ ಗ್ರಾಮವನ್ನು 10 ದಿನಗಳವರೆಗೆ ಲಾಕ್​ಡೌನ್​ಗೆ ಒಳಪಡಿಸಲಾಗಿದೆ.

ರಾಜಣ್ಣ ಸಿರ್ಸಿಲಾ ಜಿಲ್ಲೆಯ ಮುಸ್ತಾಬಾದ್​ ವಲಯದ ಗೂಡಂ ಗ್ರಾಮ ಒಮಿಕ್ರಾನ್​ನಿಂದ ತಪ್ಪಿಸಿಕೊಳ್ಳಲು ಸ್ವಯಂ ಲಾಕ್​ಡೌನ್​ ವಿಧಿಸಿಕೊಂಡಿದೆ. ಈ ಗ್ರಾಮದ ವ್ಯಕ್ತಿಯೊಬ್ಬರು ಇತ್ತೀಚೆಗಷ್ಟೇ ಗಲ್ಫ್​ ರಾಷ್ಟ್ರದಿಂದ ಬಂದಿದ್ದರು. ಬಳಿಕ ಕೊರೊನಾ ಟೆಸ್ಟ್​ ವೇಳೆ ಒಮಿಕ್ರಾನ್​ ಪತ್ತೆಯಾಗಿದೆ.

ಇದಲ್ಲದೇ ಅವರ ಕುಟುಂಬದ ಇಬ್ಬರಲ್ಲಿಯೂ ಕೊರೊನಾ ದೃಢಪಟ್ಟಿದೆ. ಇದರಿಂದ ಇನ್ನಷ್ಟು ಜನರಿಗೆ ಒಮಿಕ್ರಾನ್ ವ್ಯಾಪಿಸದಿರಲು ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ಗ್ರಾಮವನ್ನು ಲಾಕ್​ಡೌನ್​ ಮಾಡಲಾಗಿದೆ.

ಲಾಕ್​ಡೌನ್​ ನಿಯಮದಂತೆ ಬೆಳಗ್ಗೆ ಮಾತ್ರ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಗ್ರಾಮದಲ್ಲಿ ವಿನಾಕಾರಣ ಯಾರೂ ಹೊರಗೆ ಸುತ್ತಾಡುವಂತಿಲ್ಲ.

ಮಾಸ್ಕ್​, ಸಾಮಾಜಿಕ ಅಂತರ ಕಡ್ಡಾಯ ಪಾಲಿಸಬೇಕು ಎಂದು ಊರಿನ ಮುಖಂಡರು ಸೂಚಿಸಿದ್ದಾರೆ. ಈ ಮೂಲಕ ಒಮಿಕ್ರಾನ್​ ಪ್ರಸರಣವನ್ನು ತಡೆಗಟ್ಟಬಹುದು ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಅಸ್ಸೋಂನಲ್ಲಿ ಜಾನುವಾರುಗಳ ಸಂರಕ್ಷಣೆ ಮಸೂದೆಗೆ ಇನ್ನಷ್ಟು ಬಲ.. ತಿದ್ದುಪಡಿ ಬಿಲ್‌ ವಿಧಾನಸಭೆಯಲ್ಲಿ ಪಾಸ್​..

ಇದಲ್ಲದೇ, ಗಲ್ಫ್​ ರಾಷ್ಟ್ರದಿಂದ ಬಂದಿದ್ದ ಒಮಿಕ್ರಾನ್​ ಸೋಂಕಿತ ವ್ಯಕ್ತಿ ಯಲ್ಲರೆಡ್ಡಿಪೇಟ ವಲಯದ ನಾರಾಯಣಪುರಂ ಗ್ರಾಮದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ.

ಇದರಿಂದಾಗಿ ಸೋಂಕಿತನ ಸಂಪರ್ಕಕ್ಕೆ ಬಂದ 53 ಜನರ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್​ಗೆ ಕಳುಹಿಸಲಾಗಿದೆ. ಅಲ್ಲದೇ ಅವರನ್ನು ಮನೆಯಲ್ಲಿಯೇ ಕ್ವಾರಂಟೈನ್​ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.