ETV Bharat / bharat

ಸರ್ವರ್ ಡೌನ್ ಸಮಸ್ಯೆ ನಿವಾರಣೆ: ಗೂಗಲ್‌ ಜಿಮೇಲ್ ಸೇವೆ ಮರುಸ್ಥಾಪನೆ

author img

By

Published : Dec 11, 2022, 9:13 AM IST

Updated : Dec 11, 2022, 9:21 AM IST

ಸರ್ವರ್​​ ಡೌನ್​ ಆಗಿದ್ದ ಜಗತ್ತಿನ ಅತಿ ದೊಡ್ಡ ಸಂಪರ್ಕ ಜಾಲ ಜಿಮೇಲ್ ಸೇವೆಯನ್ನು ಮರುಸ್ಥಾಪಿಸಲಾಗಿದೆ.

google
ಜಿಮೇಲ್

ನವ ದೆಹಲಿ: ಭಾರತ ಸೇರಿದಂತೆ ಜಾಗತಿಕವಾಗಿ ಮಿಲಿಯನ್​ಗಟ್ಟಲೆ ಬಳಕೆದಾರರು ಶನಿವಾರ ಸರ್ಚ್ ಎಂಜಿನ್ ಗೂಗಲ್​ನ ಜಿಮೇಲ್ ಸೇವೆಯಲ್ಲಿ ಸಮಸ್ಯೆ ಅನುಭವಿಸಿದ್ದು, ಕೆಲ ಗಂಟೆಗಳ ಬಳಿಕ ಮತ್ತೆ ಸೇವೆಯನ್ನು ಪುನಃಸ್ಥಾಪಿಸಲಾಗಿದೆ. ಇಮೇಲ್​​ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಪ್ರಪಂಚದಾದ್ಯಂತ ಮೊಬೈಲ್ ಅಪ್ಲಿಕೇಶನ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಗಳೆರಡರ ಮೇಲೂ ಪರಿಣಾಮ ಬೀರುತ್ತಿದೆ ಎಂದು ಬಳಕೆದಾರರು ದೂರು ಸಲ್ಲಿಸಿದ್ದರು. ಅಷ್ಟೇ ಅಲ್ಲದೇ, ಟ್ವಿಟರ್​ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡು ಗೂಗಲ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Facebook​, WhatsApp​ ಬೆನ್ನಲ್ಲೇ Gmail ಸರದಿ... ಭಾರತ ಸೇರಿ ಅನೇಕ ದೇಶಗಳಲ್ಲಿ ಸೇವೆ ಸ್ಥಗಿತ

'ಜಿಮೇಲ್‌ ಸಮಸ್ಯೆಯನ್ನು ಈಗ ಸಂಪೂರ್ಣವಾಗಿ ನಿವಾರಿಸಲಾಗಿದ್ದು, ಸಹಜ ಸ್ಥಿತಿಗೆ ಮರಳಿದೆ. ಈ ಸಮಸ್ಯೆ ಪರಿಹರಿಸುವವರೆಗೂ ಸಹಕರಿಸಿದ್ದಕ್ಕೆ ಧನ್ಯವಾದಗಳು' ಎಂದು Google Workspace ಅಪ್‌ಡೇಟ್‌ನಲ್ಲಿ ತಿಳಿಸಿದೆ. ಕಂಪನಿಯು ನಮ್ಮ ವ್ಯವಸ್ಥೆಯನ್ನು ಉತ್ತಮಗೊಳಿಸಲು ನಿರಂತರ ಸುಧಾರಣೆಗಳನ್ನು ಮಾಡುತ್ತಿರುತ್ತದೆ. ಇಮೇಲ್ ಸೇವೆಯಲ್ಲಿ ಇನ್ನು ಮುಂದೆ ದೋಷಗಳು ಕಂಡುಬರುವುದಿಲ್ಲ ಎಂದು ಹೇಳಿದೆ. ಆದಾಗ್ಯೂ, ಎಷ್ಟು ಬಳಕೆದಾರರಿಗೆ ತೊಂದರೆ ಎದುರಾಗಿದೆ ಎಂಬುದರ ಬಗ್ಗೆ ವಿವರವನ್ನು ಗೂಗಲ್ ಬಹಿರಂಗಪಡಿಸಿಲ್ಲ. ಹಾಗೆಯೇ ಅಡಚಣೆಯ ಹಿಂದಿನ ನಿಖರ ಕಾರಣವನ್ನು ತಿಳಿಸಿಲ್ಲ.

ಇದನ್ನೂ ಓದಿ: ಗೂಗಲ್​​ನಲ್ಲಿ ಉದ್ಯೋಗ ಕಡಿತ: ಕಳಪೆ ಕಾರ್ಯಕ್ಷಮತೆಯ ನೌಕರರನ್ನು ಹೊರಹಾಕಲು ಸಿದ್ಧತೆ

Last Updated :Dec 11, 2022, 9:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.