ETV Bharat / bharat

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ.. ಬಲವಂತವಾಗಿ ಮತಾಂತರ ಆರೋಪ: ಪ್ರಕರಣ ದಾಖಲು

author img

By ETV Bharat Karnataka Team

Published : Nov 29, 2023, 4:32 PM IST

ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ
ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ

ಹರಿಯಾಣದ ಫರಿದಾಬಾದ್‌ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ದುರುಳನೊಬ್ಬ ತನ್ನ ಹೆಸರನ್ನು ಬದಲಾಯಿಸಿಕೊಂಡು ಅಪ್ರಾಪ್ತೆ ಜೊತೆ ಸ್ನೇಹ ಬೆಳೆಸಿದ್ದಾನೆ. ಬಳಿಕ ಅಪ್ರಾಪ್ತೆಯನ್ನು ಒತ್ತೆಯಾಳಾಗಿ ಇರಿಸಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಅವಳು ವಯಸ್ಕಳಾದ ನಂತರ ಬಲವಂತವಾಗಿ ಮತಾಂತರಗೊಳಿಸಿ ವಿವಾಹವಾಗಿದ್ದಾನೆ ಎಂದು ಆರೋಪಿಸಲಾಗಿದೆ. ಇದೀಗ ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫರಿದಾಬಾದ್ (ಹರಿಯಾಣ) : ಕೇರಳ ಸ್ಟೋರಿ ಚಿತ್ರದ ಮಾದರಿಯ ಪ್ರಕರಣವೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಮೊದಲು ತನ್ನ ಹೆಸರನ್ನು ಬದಲಾಯಿಸಿ ಅಪ್ರಾಪ್ತೆಯೊಂದಿಗೆ ಸ್ನೇಹ ಬೆಳೆಸಿದ್ದಾನೆ ಎನ್ನಲಾಗಿದೆ. ನಂತರ ಆಕೆಗೆ ಅಮಲು ಪದಾರ್ಥ ನೀಡಿ ಅಶ್ಲೀಲ ವಿಡಿಯೋ ಮಾಡಿದ್ದಾನೆ. ಇದಾದ ಬಳಿಕ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿ, ಸುಮಾರು ಒಂದು ವರ್ಷ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದಾದ ನಂತರ ಬಾಲಕಿ ವಯಸ್ಕಳಾದಾಗ ಬಲವಂತವಾಗಿ ಮತಾಂತರಗೊಳಿಸಿ ಅವಳನ್ನು ಮದುವೆ ಮಾಡಿಕೊಂಡಿದ್ದಾನೆ ಎಂಬ ದೂರಲಾಗಿದೆ.

ಸಂಬಂಧಿಕರಿಂದ ಸಾಮೂಹಿಕ ಅತ್ಯಾಚಾರ ಆರೋಪ : ಸಂತ್ರಸ್ತೆಯನ್ನು ಬಲವಂತವಾಗಿ ಮತಾಂತರಗೊಳಿಸಿ ಸಹೋದರರು ಮತ್ತು ಆಕೆಯ ಸಂಬಂಧಿಕರು ಸಾಮೂಹಿಕವಾಗಿ ಅತ್ಯಾಚಾರವೆಸಗಿ ತಮ್ಮ ನಿಜವಾದ ಮುಖವನ್ನು ತೋರಿಸಿದ್ದಾರೆ. ಈ ಅವಧಿಯಲ್ಲಿ ಆರೋಪಿಯ ಕುಟುಂಬಸ್ಥರು ಸಂತ್ರಸ್ತೆಗೆ ಸಾಕಷ್ಟು ಚಿತ್ರಹಿಂಸೆ ನೀಡಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾಳೆ.

ಇಷ್ಟೇ ಅಲ್ಲದೆ ಆರೋಪಿಗಳು ಸಂತ್ರಸ್ತೆಯನ್ನು ಹಿಮಾಚಲದ ಮನಾಲಿಗೆ ಕರೆದೊಯ್ದು ಪರ್ವತಗಳಿಂದ ಎಸೆಯಲು ಸಂಚು ರೂಪಿಸಿದ್ದರು. ಇದನ್ನು ಅರಿತ ಸಂತ್ರಸ್ತೆ ತನ್ನ ಕುಟುಂಬವನ್ನು ಅಲ್ಲಿಗೆ ಕರೆಸಿಕೊಂಡಿದ್ದಾಳೆ. ಅಲ್ಲದೇ, ಪೊಲೀಸರ ಭಯದಿಂದ ಆರೋಪಿಗಳಿಗೆ ಅಪರಾಧ ಎಸಗಲು ಸಾಧ್ಯವಾಗಿಲ್ಲ ಎಂಬುದು ತಿಳಿದುಬಂದಿದೆ.

ಆರೋಪಿಯ ಕ್ರಿಮಿನಲ್ ಜಾತಕದ ಬಗ್ಗೆ ಪೊಲೀಸರಿಂದ ತನಿಖೆ : ಆರೋಪಿಯು ಈಗಾಗಲೇ ಮದುವೆಯಾಗಿದ್ದು, ಆತನ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸಂತ್ರಸ್ತೆ ಮಾಡಿರುವ ಆರೋಪಗಳು ಗಂಭೀರವಾಗಿದ್ದು, ಈಗ ಪೊಲೀಸರು ಆರೋಪಿಯ ಹಳೆಯ ಪ್ರಕರಣಗಳ ಬಗ್ಗೆ ಸಹ ತನಿಖೆ ಆರಂಭಿಸಿದ್ದಾರೆ.

ಈ ಬಗ್ಗೆ ಪೊಲೀಸರು ಹೇಳಿದ್ದಿಷ್ಟು: ''ಈ ಪ್ರಕರಣದಲ್ಲಿ 14 ಜನರ ವಿರುದ್ಧ ಧಾರ್ಮಿಕ ಮತಾಂತರ, ಸಾಮೂಹಿಕ ಅತ್ಯಾಚಾರ ಮತ್ತು ಅಪಹರಣದಂತಹ ಗಂಭೀರ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ವಿಷಯವು ಅತ್ಯಂತ ಗಂಭೀರವಾಗಿದೆ. ಈ ವಿಚಾರದಲ್ಲಿ ಪ್ರತಿಯೊಂದು ಅಂಶವನ್ನು ನಾವು ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸದ್ಯ ಪೊಲೀಸ್ ತಂಡ ಮುಂದಿನ ತನಿಖೆಯಲ್ಲಿ ನಿರತವಾಗಿದೆ. ಈ ವಿಷಯವನ್ನು ಆದಷ್ಟು ಬೇಗ ಬಹಿರಂಗಪಡಿಸಲಾಗುವುದು'' ಎಂದು ಫರಿದಾಬಾದ್ ಸೆಕ್ಟರ್- 16ರ ಎಸ್​ಹೆಚ್​ಒ ಇಂದುಬಾಲಾ ತಿಳಿಸಿದ್ದಾರೆ.

5ನೇ ತರಗತಿ ವಿದ್ಯಾರ್ಥಿನಿ ಅತ್ಯಾಚಾರ (ಪ್ರತ್ಯೇಕ ಘಟನೆ) : ಮಧ್ಯಪ್ರದೇಶ ಜಿಲ್ಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು (ಅಕ್ಟೋಬರ್ 16-2023) ಬಂಧಿಸಿದ್ದರು. ಆದರೆ, ಗ್ರಾಮದ ಜನರು ಪೊಲೀಸ್ ಠಾಣೆಗೆ ನುಗ್ಗಿ ಆರೋಪಿಯನ್ನು ಒಪ್ಪಿಸುವಂತೆ ಒತ್ತಾಯಿಸಿದ್ದರು.

ಇದನ್ನೂ ಓದಿ : 5ನೇ ತರಗತಿ ವಿದ್ಯಾರ್ಥಿನಿ ಅತ್ಯಾಚಾರ.. ಆರೋಪಿಯನ್ನು ಒಪ್ಪಿಸುವಂತೆ ಆಗ್ರಹಿಸಿ ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.