ETV Bharat / bharat

ಗುರುವಾರದ ರಾಶಿ ಭವಿಷ್ಯ: ವಿರೋಧಿಗಳಿಂದಲೂ ನಿಮಗೆ ಸಿಗಲಿದೆ ಸೆಲ್ಯೂಟ್!

author img

By

Published : Feb 2, 2023, 5:01 AM IST

Etv bharat horoscope today
ಗುರುವಾರದ ಭವಿಷ್ಯ : ಇಂದು ನಿಮ್ಮ ವಿರೋಧಿಗಳೂ ನಿಮಗೆ ಸಲ್ಯೂಟ್ ಮಾಡಲಿದ್ದಾರೆ

ಇಂದಿನ ರಾಶಿ ಭವಿಷ್ಯ ಹೀಗಿದೆ..

ಮೇಷ : ಪವಿತ್ರ ಕಾರ್ಯ ನಿಮ್ಮೊಂದಿಗೆ ಪ್ರಾರಂಭವಾಗಬೇಕು.ಬೇರೆಯವರಿಗೆ ನೆರವಾಗುವ ಮೊದಲು ನಿಮ್ಮ ಗುರಿಯನ್ನು ಮೊದಲು ಪೂರ್ಣಗೊಳಿಸಿ. ಸಂಜೆಯನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರಣಯದಲ್ಲಿ ಕಳೆಯುತ್ತೀರಿ. ಇದು ನಿಮ್ಮ ಮನಸ್ಸು ಹಗುರಗೊಳಿಸಿ ಅಪಾರ ಆನಂದ ನೀಡುತ್ತದೆ.

ವೃಷಭ : ನೀವು ನಿಮ್ಮದೇ ರೀತಿಯಲ್ಲಿ ಮೀಡಿಯಾ ಮೊಗಲ್ ಆಗಲು ಬಯಸಿದ್ದೀರಿ. ನಿಮ್ಮ ಸುತ್ತಲಿನ ಜನರು ನಿಮ್ಮ ಕೌಶಲ್ಯ ಮತ್ತು ಪ್ರತಿಭೆಗಳನ್ನು ಪ್ರಶಂಸೆ ಮಾಡುತ್ತಾರೆ. ಆದರೆ, ನೀವು ಬಯಸಿದ್ದು ಪಡೆಯಲು ಹೆಚ್ಚು ಹಣ ತೆರಬೇಕು. ಅಸಾಧಾರಣ ಬಂಧ ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು ಒಗ್ಗೂಡಿಸಿದ್ದು ಹಿಂದೆಂದಿಗಿಂತ ಹತ್ತಿರವಾಗಿಸಿದೆ.

ಮಿಥುನ : ಇಂದು ನೀವು ತೆಗೆದುಕೊಳ್ಳುವ ನಿರ್ಧಾರಗಳ ಸಾಧ್ಯಾಸಾಧ್ಯತೆಗಳನ್ನು ಅಳೆದು ತೂಗಬೇಕು. ಎಲ್ಲ ವಿಷಯಗಳಲ್ಲೂ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ನೀವು ಇಂದು ಎಲ್ಲ ವಿಷಯಗಳನ್ನೂ ಬಹಳ ಹಗುರವಾಗಿ ತೆಗೆದುಕೊಳ್ಳುತ್ತೀರಿ. ನೀವು ದಿನದ ನಂತರದಲ್ಲಿ ನಿಮ್ಮದೇ ಆದ ಆಸಕ್ತಿಗಳ ಕುರಿತು ಹೆಚ್ಚು ಚಿಂತೆ ಮಾಡುತ್ತೀರಿ. ನೀವು ಇತರರ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಿಮ್ಮದೇ ಹಿತಾಸಕ್ತಿ ಕಾಯ್ದುಕೊಳ್ಳಬೇಕು.

ಕರ್ಕಾಟಕ : ಭಾವನೆಗಳು ಸದಾ ಅಡೆತಡೆಗಳನ್ನು ಒಡ್ಡುತ್ತವೆ. ವಿಷಯಗಳು ದಾರಿ ತಪ್ಪಿದಾಗ, ಜೀವನ ಸ್ಫೂರ್ತಿ ಕಳೆದುಕೊಳ್ಳುತ್ತದೆ. ಆದರೆ, ನೀವು ವಿಷಯಗಳ ಸಕಾರಾತ್ಮಕ ಭಾಗವನ್ನು ನೋಡಬೇಕು, ಡೈನಿಂಗ್ ಟೇಬಲ್ ಮೇಲಿರುವ ಆಹಾರ, ನೀವು ಧರಿಸುವ ಬಟ್ಟೆಗಳನ್ನು ನೋಡಿ ಸಂತೃಪ್ತಗೊಳ್ಳಬೇಕು. ಈ ಮೂಲಕ ಆ ದೇವರಿಗೆ ಕೃತಜ್ಞತೆ ಸಲ್ಲಿಸಬೇಕು.

ಸಿಂಹ : ಸಂಕಟಗಳಿಂದ ಮುಕ್ತರಾಗಬೇಕು ಎನ್ನುವ ಭಯಕೆ ಇಂದು ಫಲ ನೀಡುತ್ತದೆ. ನೀವು ಸೂಕ್ಷ್ಮ ಮತ್ತು ರಕ್ಷಣೆಯಿಂದ ಕೂಡಿರುತ್ತೀರಿ. ಕೆಲಸದಲ್ಲಿ ನೀವು ಉದ್ದೇಶದ ಭಾವನೆ ಹೊಂದಿದ್ದೀರಿ ಮತ್ತು ಸದೃಢವಾಗಿದ್ದೀರಿ. ಆದರೆ ಸಂಜೆ, ನೀವು ಭರವಸೆ ನೀಡಿದಂತೆ ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಕುರಿತು ಗಮನ ನೀಡಬೇಕು. ಒಂದು ಆಕರ್ಷಕ ಟ್ರಿಪ್ ಅಥವಾ ನೈಟ್ ಔಟ್ ಸಮಯಕ್ಕೆ ಒಳ್ಳೆಯ ದಿನ.

ಕನ್ಯಾ: ನಿಮ್ಮ ಗಮನದ ಮಟ್ಟ ಇಂದು ಅತ್ಯುನ್ನತ ಸ್ಥಾಲದಲ್ಲಿದೆ. ನಿಮ್ಮ ಕೆಲಸಗಳನ್ನು ವೇಗವಾಗಿ ಮತ್ತು ಸಮರ್ಥವಾಗಿ ಮುಗಿಸುತ್ತೀರಿ. ಕಥೆಯಲ್ಲಿ ತಿರುವು ಬರಬಹುದು; ಚಿಂತೆ ಬೇಡ, ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದು ನಿಮ್ಮ ಪ್ರೇಮ ಪ್ರಕರಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ.

ತುಲಾ : ನಿಮ್ಮ ಯಶಸ್ಸಿನ ನಕ್ಷೆಯನ್ನು ಇತರರೊಂದಿಗೆ ಇಂದು ಹಂಚಿಕೊಳ್ಳಿ. ನೀವು ಮಧ್ಯಾಹ್ನ ಕೆಲಸದಲ್ಲಿ ವಿಧೇಯ ಮತ್ತು ಸಹಕಾರದಲ್ಲಿರುತ್ತೀರಿ; ಇದರ ಫಲಿತಾಂಶದಿಂದ ನಿಮ್ಮ ಸಾಮಾಜಿಕ ಸಂಪರ್ಕಗಳು ಗಮನಾರ್ಹವಾಗಿ ಸಂಜೆ ಹೆಚ್ಚಾಗುತ್ತವೆ. ಎರಡರ ನಡುವೆ ಸಮಾನವಾಗಿ ಸಮಯ ಹಂಚುವುದು ಮುಖ್ಯ.

ವೃಶ್ಚಿಕ : ಎಲ್ಲ ಸಾಧ್ಯತೆಗಳಲ್ಲಿ ನೀವು ಯಶಸ್ವಿಯಾಗಿ ಹೊಸ ಆವಿಷ್ಕಾರದೊಂದಿಗೆ ಎಲ್ಲ ಸಂಪ್ರದಾಯಗಳಿಗೂ ಸವಾಲೆಸೆಯುತ್ತೀರಿ. ಮಧ್ಯಾಹ್ನ ನೀವು ನಿಮ್ಮ ಬಾಸ್ ನ ಕಾಲಬೆರಳು ತುಳಿಯಬಹುದು, ಎಚ್ಚರ ವಹಿಸಿ. ಸಂಜೆಯಲ್ಲಿ ನಿಮ್ಮ ದೌರ್ಬಲ್ಯಗಳನ್ನು ಸಾಮರ್ಥ್ಯಗಳನ್ನಾಗಿ ಬದಲಾಯಿಸುವ ಪರಿಸರ ನಿರ್ಮಾಣ ಆಗುತ್ತದೆ.

ಧನು : ವ್ಯಾಪಾರ ಸಂಬಂಧಿತ ಕೆಲಸದಲ್ಲಿ ಚಲನೆಯಲ್ಲಿರುವುದನ್ನು ನಿರೀಕ್ಷಿಸಿ. ಹಣಕಾಸಿನ ವಿಷಯಗಳು ಪ್ರಮುಖ ಸಮಸ್ಯೆಯಾಗುತ್ತದೆ. ತಂಡದ ನಾಯಕರಾಗಿರಿ. ಸಂಜೆಯ ವೇಳೆಗೆ ರೊಮ್ಯಾಂಟಿಕ್ ಬಯಕೆಯಲ್ಲಿ ಉತ್ಸಾಹದಲ್ಲಿರಿ.

ಮಕರ: ನಿಮ್ಮ ಸಂಗಾತಿ ನಿಮಗೆ ಹಲವು ಬಾರಿ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಿ ತಮ್ಮ ಕುರಿತು ಕಾಳಜಿ ವಹಿಸುತ್ತಿಲ್ಲ ಎಂದು ದೂರುತ್ತಿರುತ್ತಾರೆ. ಇಂದು ಆತ/ಆಕೆ ಸಂತೋಷದಿಂದ ಇರುತ್ತಾರೆ, ಏಕೆಂದರೆ ನೀವು ನಿಮ್ಮ ಪ್ರಿಯತಮೆಯನ್ನು ಡಿನ್ನರ್​​ಗೆ ಕರೆದೊಯ್ಯುತ್ತೀರಿ. ಕೆಲಸದಲ್ಲಿ ವಿಜೇತರಾಗಿರಿ, ನಿಮ್ಮ ಪ್ರತಿ ಸ್ಪರ್ಧಿಗಳನ್ನು ಮೀರುತ್ತೀರಿ ಮತ್ತು ನಿಮ್ಮ ಬಾಸ್ ನಿಮ್ಮನ್ನು ಹೊಗಳುತ್ತಾರೆ.

ಕುಂಭ : ನೀವು ಅಂತಿಮವಾಗಿ ನಿಮ್ಮ ಹಳೆಯ ಮಿತ್ರರೊಂದಿಗೆ ಸಂಪರ್ಕ ಸಾಧಿಸುತ್ತೀರಿ. ಕೆಲಸದಲ್ಲಿ ನಿಮ್ಮ ಸಾರ್ವಜನಿಕ ಸಂಪರ್ಕ ಕೌಶಲ್ಯಗಳು ದಿಢೀರ್ ಎಂದು ಹೆಚ್ಚಾಗುತ್ತವೆ ಮತ್ತು ನಿಮ್ಮ ವಿರೋಧಿಗಳೂ ನಿಮಗೆ ಸಲ್ಯೂಟ್ ಮಾಡುತ್ತಾರೆ! ಸಹಜವಾಗಿ ಅತ್ಯಂತ ಸಂತೋಷ ಹೊಂದಿರುವುದು ನಿಮ್ಮ ಪ್ರೀತಿಪಾತ್ರರು. ಅವರು ನೀವು ಹೇಳಿದ ಎಲ್ಲವನ್ನೂ ಶ್ಲಾಘಿಸುತ್ತಾರೆ. ಕೊನೆಯಾಗುವ ಮೊದಲು ಆನಂದಿಸಿ.

ಮೀನ : ಈ ದಿನ ಕೆಲಸದ ದೃಷ್ಟಿಯಿಂದ ಸಾಕಷ್ಟು ಒತ್ತಡ ಇರಲಿದೆ, ನೀವು ನಿಮ್ಮ ಅದ್ಭುತ ಬುದ್ಧಿಶಕ್ತಿಯಿಂದ ಮತ್ತು ಮನ ಒಲಿಸುವ ಶಕ್ತಿಯಿಂದ ಸ್ಪರ್ಧಿಗಳಿಗಿಂತ ಮುಂದಿರುತ್ತೀರಿ. ನೀವು ಇಂದು ಪ್ರಾಜೆಕ್ಟ್ ಗಳನ್ನು ನಿಭಾಯಿಸುವ ರೀತಿಗೆ ಹಲವು ಪುರಸ್ಕಾರಗಳನ್ನು ಪಡೆಯುತ್ತೀರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.