ETV Bharat / bharat

ಅಕ್ಕಿ ಮೇಲೆ ಆಸೆ, ಪಡಿತರ ಅಂಗಡಿ ಮೇಲೆ ದಾಳಿ: ಇಡುಕ್ಕಿಯಲ್ಲಿ ಮಾಲೀಕ, ಸ್ಥಳೀಯರಿಗೆ ಸಂಕಷ್ಟ

author img

By

Published : Jan 23, 2023, 9:07 AM IST

elephant attack in ration shop  elephant attack in ration shop in Kerala  elephant attack news  ಅಕ್ಕಿ ತಿನ್ನುವ ಆನೆ  ಆಗಾಗ್ಗೆ ಪಡಿತರ ಅಂಗಡಿ ಮೇಲೆ ದಾಳಿ  ಸ್ಥಳೀಯ ಪಡಿತರ ಅಂಗಡಿ ಮೇಲೆ ಆನೆಯೊಂದು ಆಗಾಗ್ಗೆ ದಾಳಿ  ಇದರಿಂದ ಸ್ಥಳೀಯ ವಾಸಿಗಳು ಆತಂತ  ಕೇರಳದಲ್ಲಿ ಆನೆಯೊಂದು ಸ್ಥಳೀಯರಿಗೆ ತೊಂದರೆ  ಪಡಿತರ ಅಂಗಡಿ ಮೇಲೆ ಪದೇ ಪದೇ ದಾಳಿ  ಪಡಿತರ ಅಂಗಡಿ ಮೇಲೆ ಆನೆಯೊಂದು ದಾಳಿ
ಅಕ್ಕಿ ತಿನ್ನುವ ಆನೆ, ಆಗಾಗ್ಗೆ ಪಡಿತರ ಅಂಗಡಿ ಮೇಲೆ ದಾಳಿ

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಸ್ಥಳೀಯ ಪಡಿತರ ಅಂಗಡಿಯ ಮೇಲೆ ಆನೆಯೊಂದು ಆಗಾಗ್ಗೆ ದಾಳಿ ನಡೆಸಿ ಅಕ್ಕಿ ಮೂಟೆಗಳನ್ನು ತೆರೆದು ತಿನ್ನುತ್ತಿದೆ. ಸ್ಥಳೀಯ ನಿವಾಸಿಗಳು ಆತಂತಕ್ಕಿಡಾಗಿದ್ದಾರೆ.

ಇಡುಕ್ಕಿ (ಕೇರಳ): ಕೇರಳದಲ್ಲಿ ಆನೆಯೊಂದು ಸ್ಥಳೀಯರಿಗೆ ವಿಪರೀತ ನಿರಂತರ ತೊಂದರೆ ನೀಡುತ್ತಿದೆ. ಅಕ್ಕಿ, ಗೋಧಿ ಮತ್ತು ಸಕ್ಕರೆಯಂತಹ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಪಡಿತರ ಅಂಗಡಿಗೆ ನುಗ್ಗುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 10 ಬಾರಿ ದಾಳಿ ಮಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ.

elephant attack in ration shop  elephant attack in ration shop in Kerala  elephant attack news  ಅಕ್ಕಿ ತಿನ್ನುವ ಆನೆ  ಆಗಾಗ್ಗೆ ಪಡಿತರ ಅಂಗಡಿ ಮೇಲೆ ದಾಳಿ  ಸ್ಥಳೀಯ ಪಡಿತರ ಅಂಗಡಿ ಮೇಲೆ ಆನೆಯೊಂದು ಆಗಾಗ್ಗೆ ದಾಳಿ  ಇದರಿಂದ ಸ್ಥಳೀಯ ವಾಸಿಗಳು ಆತಂತ  ಕೇರಳದಲ್ಲಿ ಆನೆಯೊಂದು ಸ್ಥಳೀಯರಿಗೆ ತೊಂದರೆ  ಪಡಿತರ ಅಂಗಡಿ ಮೇಲೆ ಪದೇ ಪದೇ ದಾಳಿ  ಪಡಿತರ ಅಂಗಡಿ ಮೇಲೆ ಆನೆಯೊಂದು ದಾಳಿ
ಕೇರಳದಲ್ಲಿ ಪಡಿತರ ಅಂಗಡಿ ಮೇಲೆ ಆನೆ ದಾಳಿ

ತೊಂಡಿಮಲ ಪನ್ನಿಯಾರ್ ಎಚ್‌ಎಂಎಲ್ ಎಸ್ಟೇಟ್‌ ಒಳಗಿನ ಪಡಿತರ ಅಂಗಡಿಗೆ ಆನೆ ನುಗ್ಗಿದೆ. ನಾಲ್ಕು ದಿನಗಳ ಅಂತರದಲ್ಲಿ ಮೂರನೇ ಬಾರಿಗೆ ಅರಿಕೊಂಬನ ಎಂಬ ಆನೆ ಅಂಗಡಿಯ ಮೇಲೆರಗಿ ಧ್ವಂಸಗೊಳಿಸಿದೆ. ಎಸ್ಟೇಟ್‌ ಒಳಗಿನ ಪಡಿತರ ಅಂಗಡಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಕಾಡುಪ್ರಾಣಿಗಳ ಉಪಟಳ ಮತ್ತು ಭದ್ರತೆ ಇಲ್ಲದ ಕಟ್ಟಡದಲ್ಲಿ ಇನ್ನು ಮುಂದೆ ಪಡಿತರ ಅಂಗಡಿ ನಡೆಸಲು ಸಾಧ್ಯವಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ. ಜನಪ್ರತಿನಿಧಿಗಳು, ನಾಗರಿಕ ಸರಬರಾಜು ಅಧಿಕಾರಿಗಳು ಚರ್ಚಿಸಿ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.

elephant attack in ration shop  elephant attack in ration shop in Kerala  elephant attack news  ಅಕ್ಕಿ ತಿನ್ನುವ ಆನೆ  ಆಗಾಗ್ಗೆ ಪಡಿತರ ಅಂಗಡಿ ಮೇಲೆ ದಾಳಿ  ಸ್ಥಳೀಯ ಪಡಿತರ ಅಂಗಡಿ ಮೇಲೆ ಆನೆಯೊಂದು ಆಗಾಗ್ಗೆ ದಾಳಿ  ಇದರಿಂದ ಸ್ಥಳೀಯ ವಾಸಿಗಳು ಆತಂತ  ಕೇರಳದಲ್ಲಿ ಆನೆಯೊಂದು ಸ್ಥಳೀಯರಿಗೆ ತೊಂದರೆ  ಪಡಿತರ ಅಂಗಡಿ ಮೇಲೆ ಪದೇ ಪದೇ ದಾಳಿ  ಪಡಿತರ ಅಂಗಡಿ ಮೇಲೆ ಆನೆಯೊಂದು ದಾಳಿ
ಕೇರಳದಲ್ಲಿ ಪಡಿತರ ಅಂಗಡಿ ಮೇಲೆ ಆನೆ ದಾಳಿ

1966ರಿಂದ ಪನ್ನಿಯಾರ್‌ನಲ್ಲಿ ಪಡಿತರ ಅಂಗಡಿಯು ಖಾಸಗಿ ಕಂಪನಿ ಒಡೆತನದ ಬ್ರಿಟಿಷರ ಆಳ್ವಿಕೆಯಲ್ಲಿ ನಿರ್ಮಿಸಲಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಲ್ಲು-ಮಣ್ಣು, ತಗಡಿನ ಶೀಟ್‌ಗಳ ಕಟ್ಟಡದ ಮೇಲೆ ಒಂಟಿ ಸಲಗ ಅಟ್ಯಾಕ್‌ ಮಾಡಿ ನಾಶಪಡಿಸಿದೆ ಎನ್ನುತ್ತಾರೆ ಸ್ಥಳೀಯರು. ಅಂಗಡಿ ಮಾಲೀಕ ಪಿ.ಎಲ್.ಆಂಟನಿ ಮಾತನಾಡಿ, "ಅರಿಕೊಂಬ ಎಂಬ ಆನೆ 15 ತಿಂಗಳಲ್ಲಿ ಕನಿಷ್ಠ 10 ಬಾರಿ ಅಂಗಡಿಗೆ ನುಗ್ಗಿದೆ. ಮೇಲ್ಛಾವಣಿ, ಗೋಡೆ ಒಡೆದು ಅಕ್ಕಿ ಮೂಟೆಗಳನ್ನು ತನ್ನ ಸೊಂಡಿಲಿನಿಂದ ಎಳೆದು ತಿಂದಿದೆ. ಪ್ರತಿ ಬಾರಿ ಅಂಗಡಿ ಕೆಡವಿದಾಗ ಕಲ್ಲು, ಮಣ್ಣಿನಿಂದ ಮತ್ತೆ ಗೋಡೆ ಕಟ್ಟುವುದು ನಮಗೆ ವಾಡಿಕೆಯಾಗಿದೆ. ಪ್ರಾಣ ಪಣಕ್ಕಿಟ್ಟು ಅಂಗಡಿಯಲ್ಲಿ ಕುಳಿತುಕೊಳ್ಳುವಂತಹ ಪರಿಸ್ಥಿತಿ ಇದೆ" ಎಂದರು.

"ನನ್ನ ಪಡಿತರ ಅಂಗಡಿಗೆ 500ಕ್ಕೂ ಹೆಚ್ಚು ಫಲಾನುಭವಿಗಳು ಬರುತ್ತಾರೆ. ಈ ಆನೆ ಯಾವಾಗ ಬೇಕಾದರೂ ದಾಳಿ ಮಾಡಬಹುದು. ಇತ್ತೀಚೆಗೆ ಶನಿವಾರ ಮುಂಜಾನೆ ನುಗ್ಗಿದ್ದು, ಎರಡು ಮೂಟೆ ಅಕ್ಕಿ ತಿಂದಿದೆ" ಎಂದು ಹೇಳಿದರು.

elephant attack in ration shop  elephant attack in ration shop in Kerala  elephant attack news  ಅಕ್ಕಿ ತಿನ್ನುವ ಆನೆ  ಆಗಾಗ್ಗೆ ಪಡಿತರ ಅಂಗಡಿ ಮೇಲೆ ದಾಳಿ  ಸ್ಥಳೀಯ ಪಡಿತರ ಅಂಗಡಿ ಮೇಲೆ ಆನೆಯೊಂದು ಆಗಾಗ್ಗೆ ದಾಳಿ  ಇದರಿಂದ ಸ್ಥಳೀಯ ವಾಸಿಗಳು ಆತಂತ  ಕೇರಳದಲ್ಲಿ ಆನೆಯೊಂದು ಸ್ಥಳೀಯರಿಗೆ ತೊಂದರೆ  ಪಡಿತರ ಅಂಗಡಿ ಮೇಲೆ ಪದೇ ಪದೇ ದಾಳಿ  ಪಡಿತರ ಅಂಗಡಿ ಮೇಲೆ ಆನೆಯೊಂದು ದಾಳಿ
ಕೇರಳದಲ್ಲಿ ಪಡಿತರ ಅಂಗಡಿ ಮೇಲೆ ಆನೆ ದಾಳಿ

"ಅಂಗಡಿ ಸ್ಥಳಾಂತರಕ್ಕೆ ಕಂಪನಿ ಹಾಗೂ ಸ್ಥಳೀಯ ಸಂಘದ ಮುಖಂಡರು ಒಪ್ಪುತ್ತಿಲ್ಲ. ಇಲ್ಲಿ ಒಟ್ಟು 505 ಕಾರ್ಡ್‌ದಾರರಿದ್ದಾರೆ. ಇವರಲ್ಲಿ 170 ಮಂದಿ ಪನ್ನಿಯಾರ್‌ನಲ್ಲಿ ಮತ್ತು ಇತರರು ತೊಂಡಿಮಲ, ಬೋಡಿಮೆಟ್, ಬಿಎಲ್ ರಾಮ್, ಚೂಂಡಲ್ ಮತ್ತು ಕೊಜಿಪನಕುಡಿಯಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಪಡಿತರ ಸಂಗ್ರಹಿಸಲು ಮತ್ತು ಪಡಿತರ ನೀಡಲು ಈ ಕಟ್ಟಡವನ್ನು ಸಿದ್ಧಪಡಿಸುವ ಅವಶ್ಯಕತೆಯಿದೆ. ಆನೆ ಅಕ್ಕಿ ತಿನ್ನುವ ಕಾರಣಕ್ಕೆ ಅದಕ್ಕೆ 'ಅರಿಕೊಂಬನ್' ಎಂದು ಹೆಸರಿಡಲಾಗಿದೆ" ಎಂದು ಹೇಳುತ್ತಾರೆ ಗ್ರಾಮಸ್ಥರು.

elephant attack in ration shop  elephant attack in ration shop in Kerala  elephant attack news  ಅಕ್ಕಿ ತಿನ್ನುವ ಆನೆ  ಆಗಾಗ್ಗೆ ಪಡಿತರ ಅಂಗಡಿ ಮೇಲೆ ದಾಳಿ  ಸ್ಥಳೀಯ ಪಡಿತರ ಅಂಗಡಿ ಮೇಲೆ ಆನೆಯೊಂದು ಆಗಾಗ್ಗೆ ದಾಳಿ  ಇದರಿಂದ ಸ್ಥಳೀಯ ವಾಸಿಗಳು ಆತಂತ  ಕೇರಳದಲ್ಲಿ ಆನೆಯೊಂದು ಸ್ಥಳೀಯರಿಗೆ ತೊಂದರೆ  ಪಡಿತರ ಅಂಗಡಿ ಮೇಲೆ ಪದೇ ಪದೇ ದಾಳಿ  ಪಡಿತರ ಅಂಗಡಿ ಮೇಲೆ ಆನೆಯೊಂದು ದಾಳಿ
ಕೇರಳದಲ್ಲಿ ಪಡಿತರ ಅಂಗಡಿ ಮೇಲೆ ಆನೆ ದಾಳಿ

ಈಗಾಗಲೇ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮನೆಗಳನ್ನು ಧ್ವಂಸಗೊಳಿಸಿದೆ. ದೇವಿಕುಲಂ ವ್ಯಾಪ್ತಿಯಲ್ಲಿ ಸುಮಾರು 10 ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಎರಡು ಬಾರಿ ಅರಿಕೊಂಬನನ್ನು ಹಿಡಿಯುವ ಯತ್ನ ನಡೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬಸ್ ಮೆಟ್ಟಿಲಿನಿಂದ ಕೆಳಗೆ ಬಿದ್ದ ಮಗು.. ಪವಾಡ ಸದೃಶ್ಯ ಪಾರು - ಶಾಕಿಂಗ್ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.