ETV Bharat / bharat

3 ಗಂಟೆ ಅಂತರದಲ್ಲಿ 2 ರಾಜ್ಯಗಳಲ್ಲಿ ಭಾರಿ ಭೂಕಂಪ...!

author img

By

Published : Jul 21, 2021, 7:46 AM IST

Earthquake in Rajasthan Bikaner, Earthquake in  Meghalaya West Garo Hills, Earthquake, Earthquake news, Earthquake latest news, ರಾಜಸ್ಥಾನದ ಬಿಕಾನೇರ್​ದಲ್ಲಿ ಭೂಕಂಪ, ಮೇಘಾಲಯದ ಪಶ್ಚಿಮ ಗಾರೊ ಹಿಲ್ಸ್​ನಲ್ಲಿ ಭೂಕಂಪ, ಭೂಕಂಪ ಸುದ್ದಿ, ಭೂಕಂಪನ,
3 ಗಂಟೆಯ ಅಂತರದಲ್ಲಿ 2 ರಾಜ್ಯಗಳಲ್ಲಿ ಭಾರೀ ಭೂಕಂಪ

ದೇಶದ ಎರಡು ರಾಜ್ಯಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಾಜಸ್ಥಾನದಲ್ಲಿ 5.3 ತೀವ್ರತೆ ದಾಖಲಾಗಿದೆ.

ನವದೆಹಲಿ: ಎರಡು ರಾಜ್ಯಗಳಲ್ಲಿ ಮೂರು ಗಂಟೆಯ ಅಂತರದಲ್ಲಿ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿದ್ದಾರೆ. ರಾಜಸ್ಥಾನದ ಬಿಕಾನೇರ್​ ಮತ್ತು ಮೇಘಾಲಯದ ಪಶ್ಚಿಮ ಗಾರೊ ಹಿಲ್ಸ್ ಜಿಲ್ಲೆಯಲ್ಲಿ ಭೂಮಿ ಕಂಪಿಸಿದೆ.

ಮೇಘಾಲಯದಲ್ಲಿ ನಡುಗಿದ ಭೂಮಿ: ಇಲ್ಲಿನ ಪಶ್ಚಿಮ ಗಾರೊ ಹಿಲ್ಸ್ ಜಿಲ್ಲೆಯಲ್ಲಿ ಇಂದು ನಸುಕಿನ ಜಾವ 2:10 ಗಂಟೆಗೆ ಭೂಮಿ ಕಂಪಿಸಿದೆ. ರಿಕ್ಟರ್​ ಮಾಪಕದಲ್ಲಿ 4.1 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (NCS​) ಮಾಹಿತಿ ನೀಡಿದೆ.

ರಾಜಸ್ಥಾನದಲ್ಲಿ ಭಾರೀ ಭೂಕಂಪ: ಇಲ್ಲಿನ ಬಿಕಾನೇರ್​ದಲ್ಲಿ ಭಾರಿ ಭೂಕಂಪನ ಸಂಭವಿಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ನಷ್ಟವಾಗಿರಬಹುದಾಗಿದೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಪ್ರಕಾರ, ಇಂದು ಬೆಳ್ಳಂಬೆಳಗ್ಗೆ 5:24 ಗಂಟೆಗೆ ಭೂಮಿ ಕಂಪಿಸಿದ್ದು, ರಿಕ್ಟರ್​ ಮಾಪಕದಲ್ಲಿ 5.3 ರಷ್ಟು ತೀವ್ರತೆ ದಾಖಲಾಗಿದೆ ಎಂದು ಹೇಳಿದೆ.

  • Earthquake of Magnitude:5.3, Occurred on 21-07-2021, 05:24:29 IST, Lat: 29.19 & Long: 70.05, Depth: 110 Km ,Location: 343km WNW of Bikaner, Rajasthan, India for more information download the BhooKamp App https://t.co/P7YBFyp3Sb pic.twitter.com/vPNJV8erui

    — National Center for Seismology (@NCS_Earthquake) July 21, 2021 " class="align-text-top noRightClick twitterSection" data=" ">

ಒಟ್ಟಿನಲ್ಲಿ ಮೂರು ಗಂಟೆಗಳ ಅಂತರದಲ್ಲಿ ದೇಶದ ಎರಡು ರಾಜ್ಯದಲ್ಲಿ ಭೂಕಂಪನ ಸಂಭವಿಸಿದ್ದು, ಜನರು ಭಯಭೀತರಾಗಿದ್ದಾರೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.