ETV Bharat / bharat

ಬೆಟ್ಟಗಳಲ್ಲಿ ಅಶಾಂತಿ ಉಂಟುಮಾಡಲು ಅವಕಾಶ ನೀಡುವುದಿಲ್ಲ: ಬಿಜೆಪಿಗೆ ಮಮತಾ ಎಚ್ಚರಿಕೆ

author img

By

Published : Jul 12, 2022, 5:06 PM IST

Updated : Jul 12, 2022, 6:00 PM IST

ಕಳೆದ ಹತ್ತು ವರ್ಷಗಳಲ್ಲಿ ನಾನು ಇಲ್ಲಿನ ಅಭಿವೃದ್ಧಿಗಾಗಿ 7,000 ಕೋಟಿ ರೂ. ನೀಡಿದ್ದೇನೆ. ಆದರೆ, ಯಾವುದೇ ಕೆಲಸ ಸರಿಯಾಗಿ ಆಗಿಲ್ಲ. ಬೆಟ್ಟಗಳಲ್ಲಿ ನಾನು ಅಶಾಂತಿ ಉಂಟಾಗಲು ಬಿಡುವುದಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಬೆಟ್ಟಗಳಲ್ಲಿ ಅಶಾಂತಿ ಉಂಟುಮಾಡಲು ಅವಕಾಶ ನೀಡುವುದಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ
ಬೆಟ್ಟಗಳಲ್ಲಿ ಅಶಾಂತಿ ಉಂಟುಮಾಡಲು ಅವಕಾಶ ನೀಡುವುದಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

ಡಾರ್ಜಿಲಿಂಗ್(ಬಂಗಾಳ): ಯಾವುದೇ ದುರಾಸೆಯ ನಾಯಕರಿಗೆ ಬೆಟ್ಟಗಳಲ್ಲಿ ಅಶಾಂತಿ ಉಂಟುಮಾಡಲು ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯನ್ನು ದೂಷಿಸಿದ್ದಾರೆ.

ಜಿಟಿಎ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಮಲೆನಾಡಿನ ಜನತೆಗೆ ಈ ಸಂದೇಶ ರವಾನಿಸಿದ್ದಾರೆ. ಬೆಟ್ಟವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿದರೂ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ದೂರಿದ್ದಾರೆ. ಮಲೆನಾಡಿನಲ್ಲಿ ಇಷ್ಟು ಶಾಂತಿಯುತ ನಡೆದ ಚುನಾವಣೆಯನ್ನು ನಾನು ಎಲ್ಲೂ ನೋಡಿಲ್ಲ. ಗುಡ್ಡಗಾಡು ಜನರು ಏನು ಮಾಡಬಹುದು ಎಂಬುದನ್ನು ಎಲ್ಲರಿಗೂ ತೋರಿಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು ಮತ್ತು ಶುಭಾಶಯಗಳು ಎಂದಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ನಾನು ಇಲ್ಲಿನ ಅಭಿವೃದ್ಧಿಗಾಗಿ 7,000 ಕೋಟಿ ರೂ. ನೀಡಿದ್ದೇನೆ. ಆದರೆ, ಯಾವುದೇ ಕೆಲಸ ಸರಿಯಾಗಿ ಆಗಿಲ್ಲ. ಕಳೆದ ಜಿಟಿಎ ಚುನಾವಣೆ 10 ವರ್ಷಗಳ ಹಿಂದೆ ಜರುಗಿತ್ತು. ನಂತರ ಗೂರ್ಖಾ ಜನಮುಕ್ತಿ ಮೋರ್ಚಾದ ಬಿಮಲ್ ಗುರುಂಗ್ ವಿಜೇತರಾಗಿ ಹೊರಹೊಮ್ಮಿದ್ದರು.

ಬೆಟ್ಟಗಳಲ್ಲಿ ಅಶಾಂತಿ ಉಂಟುಮಾಡಲು ಅವಕಾಶ ನೀಡುವುದಿಲ್ಲ: ಬಿಜೆಪಿಗೆ ಮಮತಾ ಎಚ್ಚರಿಕೆ

ಅವರ ನಾಯಕತ್ವದಲ್ಲಿ ಮೋರ್ಚಾವು ಜಿಟಿಎಯಲ್ಲಿ ಮಂಡಳಿಯನ್ನು ರಚಿಸಿತ್ತು ಮತ್ತು ಬಿಮಲ್ ಗುರುಂಗ್ ರಾಜ್ಯದೊಂದಿಗೆ ಸ್ನೇಹ ಸಂಬಂಧವನ್ನು ಉಳಿಸಿಕೊಂಡಿದ್ದರು. ಆದರೆ, ನಂತರದ ದಿನಗಳಲ್ಲಿ ಅಂದರೆ 2017 ರಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆಯ ಸಶಸ್ತ್ರ ಚಳವಳಿ ಪ್ರದೇಶದಾದ್ಯಂತ ಅಶಾಂತಿ ಹರಡಿದೆ.

ಹತ್ತು ವರ್ಷಗಳಲ್ಲಿ ರಾಜ್ಯವು ಜಿಟಿಎಗೆ ನೀಡಿದ 7,000 ಕೋಟಿ ರೂ.ಗಳ ಬಳಕೆಯಾಗಿಲ್ಲ. ರಾಜ್ಯಪಾಲ ಜಗದೀಪ್ ಧಂಕರ್ ಕೂಡ ಲೆಕ್ಕಪರಿಶೋಧನೆ ಮುಂದುವರಿಸಿದ್ದಾರೆ. ಮಲೆನಾಡಿನ ಸಮಸ್ಯೆಗಳ ಹಿಂದೆ ದುರಾಸೆಯ ನಾಯಕರ ಕೈವಾಡವಿದೆ ಎಂದು ದೂರಿದ್ದಾರೆ.

ನಾನು ಇಲ್ಲಿಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದೆ. ಆದರೆ, ಕೆಲಸ ಮಾಡಲು ಬಿಡಲಿಲ್ಲ. ನನಗೆ ಜಗಳ ಬೇಡ, ಏನನ್ನೂ ಪಡೆದುಕೊಳ್ಳಲು ನಾನು ಮಲೆನಾಡಿನತ್ತ ಬರುವುದಿಲ್ಲ, ಬದಲಾಗಿ ಅವರಿಗೆ ಕೊಡಲು ಬರುತ್ತೇನೆ ಎಂದರು.

ಮನ್ ಘಿಸಿಂಗ್ ಅವರು ಬಿಮಲ್ ಗುರುಂಗ್ ಅವರೊಂದಿಗೆ ಜಿಟಿಎ ಮೂಲಕ ಬೆಟ್ಟಗಳಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸಿದ್ದರು. ಆದರೆ, ಬಿಮಲ್ ಗುರುಂಗ್ ಬಿಜೆಪಿಯೊಂದಿಗೆ ಕೈಜೋಡಿಸಿದ ನಂತರ ಅಶಾಂತಿ ಪ್ರಾರಂಭವಾಯಿತು. ಈ ಇತಿಹಾಸ ಮರುಕಳಿಸುವುದನ್ನು ಬಯಸುವುದಿಲ್ಲ. ಮಲೆನಾಡಿನಲ್ಲಿ ಶಾಂತಿ ಕಾಪಾಡಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.

ಇದನ್ನೂ ಓದಿ: ಸಾಲದ ಆ್ಯಪ್​ ಕಿರುಕುಳ: ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಮಹಿಳೆ

Last Updated :Jul 12, 2022, 6:00 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.