ETV Bharat / bharat

ರಾಜ್ಯಸಭಾ ಸಭಾಪತಿಯ ಅಣಕ: ರಾಷ್ಟ್ರಪತಿ ದಿಗ್ಭ್ರಮೆ, 20 ವರ್ಷದಿಂದ ಅವಮಾನ ಅನುಭವಿಸಿದ್ದೇನೆ ಎಂದ ಪ್ರಧಾನಿ

author img

By ETV Bharat Karnataka Team

Published : Dec 20, 2023, 10:32 PM IST

Dhankhar mimicry row takes centrestage: President Murmu, PM Modi, others express dismay
ರಾಜ್ಯಸಭಾ ಸಭಾಪತಿಯ ಅಣಕ ಬಗ್ಗೆ ರಾಷ್ಟ್ರಪತಿ ದಿಗ್ಭ್ರಮೆ: 20 ವರ್ಷದಿಂದ ನಾನು ಅವಮಾನ ಅನುಭವಿಸಿದ್ದೇನೆ ಎಂದ ಪ್ರಧಾನಿ

Dhankhar mimicry row: ರಾಜ್ಯಸಭಾ ಸಭಾಪತಿ ಜಗದೀಪ್​ ಧನಕರ್​ ಅವರನ್ನು ಅಣಕ ಮಾಡಿರುವ ಘಟನೆ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಉಪರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ ಜಗದೀಪ್​ ಧನಕರ್​ ಅವರನ್ನು ಟಿಎಂಸಿ ಸಂಸದ ಕಲ್ಯಾಣ್​ ಬ್ಯಾನರ್ಜಿ ಸಂಸತ್ತಿನ ಹೊರಗಡೆ ಅಣಕವಾಡಿರುವ ಘಟನೆಯ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಆಡಳಿತ ಪಕ್ಷದ ಸದಸ್ಯರು, ಸಚಿವರಾದ ರಾಜನಾಥ್​ ಸಿಂಗ್, ನಿತಿನ್​ ಗಡ್ಕರಿ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್​ ಸೇರಿದಂತೆ ಹಲವರು ಅವರಿಗೆ ಧನಕರ್‌ಗೆ ಬೆಂಬಲ ಸೂಚಿಸಿ, ಪ್ರತಿಪಕ್ಷದ ಸದಸ್ಯರ ನಡೆಯನ್ನು ಖಂಡಿಸಿದ್ದಾರೆ.

  • I was dismayed to see the manner in which our respected Vice President was humiliated in the Parliament complex. Elected representatives must be free to express themselves, but their expression should be within the norms of dignity and courtesy. That has been the Parliamentary…

    — President of India (@rashtrapatibhvn) December 20, 2023 " class="align-text-top noRightClick twitterSection" data=" ">

ಸಂಸತ್ತಿನಲ್ಲಿ ಡಿ.13ರಂದು ಉಂಟಾದ ಭದ್ರತಾ ಲೋಪದ ಘಟನೆ ಬಗ್ಗೆ ಸದನದಲ್ಲಿ ಪ್ರಧಾನಿ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕೆಂದು ಪ್ರತಿಪಕ್ಷಗಳು ಪ್ರತಿಭಟನೆ ಕೈಗೊಂಡಿವೆ. ಇದೇ ವಿಷಯವಾಗಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಸಿ ಕಾರಣಕ್ಕಾಗಿ ಪ್ರತಿಪಕ್ಷಗಳ 141 ಸದಸ್ಯರನ್ನು ಅಮಾನತು ಮಾಡಲಾಗಿದೆ. ಇದನ್ನು ಖಂಡಿಸಿ ಮಂಗಳವಾರ ಹೊಸ ಸಂಸತ್ ಭವನದ ಮುಂದೆ ಪ್ರತಿಭಟನೆ ವೇಳೆ, ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಸಭಾಪತಿ ಜಗದೀಪ್ ಧನಕರ್ ಅವರಂತೆ ಅಣಕವಾಡಿದ್ದರು.

ಇದನ್ನೂ ಓದಿ: ರಾಜ್ಯಸಭಾ ಸಭಾಪತಿಯಂತೆ ಅಣಕ ಪ್ರದರ್ಶನ ಮಾಡಿದ ಟಿಎಂಸಿ ಸದಸ್ಯ: ಸ್ವೀಕಾರಾರ್ಹವಲ್ಲ ಎಂದ ಧನಕರ್

ಇದು ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದು ರಾಷ್ಟ್ರಪತಿ, ಪ್ರಧಾನಿ ಅವರಿಂದ ಹಿಡಿದು ಹಲವು ಖಂಡಿಸಿದ್ದಾರೆ. ''ನಮ್ಮ ಗೌರವಾನ್ವಿತ ಉಪರಾಷ್ಟ್ರಪತಿಗಳನ್ನು ಸಂಸತ್ತಿನ ಸಂಕೀರ್ಣದಲ್ಲಿ ಅವಮಾನಿಸಿದ ರೀತಿಯನ್ನು ಕಂಡು ನಾನು ದಿಗ್ಭ್ರಮೆಗೊಂಡೆ. ಚುನಾಯಿತ ಪ್ರತಿನಿಧಿಗಳು ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳಲು ಮುಕ್ತವಾಗಿರಬೇಕು. ಆದರೆ, ಅವರ ಅಭಿವ್ಯಕ್ತಿ ಘನತೆ ಮತ್ತು ಸೌಜನ್ಯದ ಮಾನದಂಡಗಳೊಳಗೆ ಇರಬೇಕು. ಇದೇ ನಾವು ಹೆಮ್ಮೆಪಡುವ ಸಂಸದೀಯ ಸಂಪ್ರದಾಯ ಮತ್ತು ಭಾರತದ ಜನತೆ ಕೂಡ ಇದನ್ನು ಎತ್ತಿಹಿಡಿಯುವುದನ್ನೇ ನಿರೀಕ್ಷಿಸುತ್ತಾರೆ'' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಮಾಜಿಕ ಜಾಲತಾಣ 'ಎಕ್ಸ್​ನಲ್ಲಿ' ಪೋಸ್ಟ್​​ ಮಾಡಿದ್ದಾರೆ.

ರಾಷ್ಟ್ರಪತಿಗಳ ಸ್ಪಂದನೆಗೆ ಪ್ರತಿಕ್ರಿಯಿಸಿರುವ ಉಪರಾಷ್ಟ್ರಪತಿ ಧನಕರ್​, ''ನಿಮ್ಮ ರೀತಿಯ ಮಾತು ಮತ್ತು ಮೂಲಭೂತ ಸೌಜನ್ಯ ಯಾವಾಗಲೂ ಉಳಿಯಬೇಕು ಎಂಬ ಸಮಯೋಚಿತ ಜ್ಞಾಪನೆಗಾಗಿ ರಾಷ್ಟ್ರಪತಿ ಅವರಿಗೆ ಧನ್ಯವಾದಗಳು. ನನ್ನ ಕೊನೆಯ ಉಸಿರು ಇರುವವರೆಗೂ ಸಂವಿಧಾನದ ತತ್ವಗಳನ್ನು ಎತ್ತಿಹಿಡಿಯಲು ನಾನು ಬದ್ಧ. ಇದನ್ನು ತಡೆಯಲು ಯಾವುದೇ ಅವಮಾನಗಳಿಗೆ ಸಾಧ್ಯವಿಲ್ಲ'' ಎಂದು ಮರು ಪೋಸ್ಟ್​ ಮಾಡಿದ್ದಾರೆ.

  • Thank you Rashtrapati Ji for your kind words and the timely reminder that basic courtesies must always remain.

    I am committed to upholding Constitutional principles till my last breath. No insults can prevent me from doing so. @rashtrapatibhvn https://t.co/Ta7O5Hx8eV

    — Vice President of India (@VPIndia) December 20, 2023 " class="align-text-top noRightClick twitterSection" data=" ">

ಪ್ರಧಾನಿಯಿಂದ ದೂರವಾಣಿ ಕರೆ: ಮತ್ತೊಂದೆಡೆ, ಈ ಘಟನೆಯ ವಿಷಯವಾಗಿ ಪ್ರಧಾನಿ ನರೇಂದ್ರ ಅವರಿಂದ ದೂರವಾಣಿ ಕರೆ ಸ್ವೀಕರಿಸಲಾಗಿದೆ ಎಂದು ಉಪರಾಷ್ಟ್ರಪತಿಗಳ ಕಚೇರಿ ತಿಳಿಸಿದೆ. ''ನಿನ್ನೆ ಪವಿತ್ರ ಸಂಸತ್ತಿನ ಸಂಕೀರ್ಣದಲ್ಲಿ ಕೆಲವು ಗೌರವಾನ್ವಿತ ಸಂಸದರ ಹೀನಾಯ ನಾಟಕಗಳ ಬಗ್ಗೆ ಪ್ರಧಾನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಾನು 20 ವರ್ಷಗಳಿಂದ ಇಂತಹ ಅವಮಾನಗಳನ್ನು ಅನುಭವಿಸಿದ್ದೇನೆ. ಆದರೆ, ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಕಚೇರಿಗೆ ಇಂತಹ ಅಪಮಾನ ಸಂಭವಿಸಿದ್ದು ಮತ್ತು ಅದು ಕೂಡ ಸಂಸತ್ತಿನಲ್ಲಿ ದುರದೃಷ್ಟಕರವಾಗಿದೆ ಎಂಬುದಾಗಿ ಅವರು ತಿಳಿಸಿದರು'' ಎಂದು ಉಪರಾಷ್ಟ್ರಪತಿಗಳ ಸಚಿವಾಲಯ ಪೋಸ್ಟ್​ ಮಾಡಿದೆ.

ಇದನ್ನೂ ಓದಿ: ದಲಿತ ಎಂಬ ಕಾರಣಕ್ಕೆ ನನಗೆ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎನ್ನಬೇಕೇ?: ಮಲ್ಲಿಕಾರ್ಜುನ್ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.