ETV Bharat / bharat

ಚಂಡೀಗಢದಲ್ಲಿ ಬಾಂಬ್ ಶೆಲ್ ಪತ್ತೆ: ಸೇನೆಯ ವಿಶೇಷ ತಂಡದಿಂದ ಪರಿಶೀಲನೆ

author img

By

Published : Jul 16, 2023, 7:34 PM IST

crime-a-bomb-was-found-in-sector-26-of-chandigarh
ಚಂಡೀಗಢದಲ್ಲಿ 51 ಎಂಎಂ ಬಾಂಬ್ ಶೆಲ್ ಪತ್ತೆ: ಸೇನೆಯ ವಿಶೇಷ ತಂಡದಿಂದ ಪರಿಶೀಲನೆ

ಚಂಡೀಗಢದ ಶಾಸ್ತ್ರಿ ನಗರ ಸುಖ್ನಾ ಚೌ ದಲ್ಲಿ ಬಾಂಬ್ ಶೆಲ್​ವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಂಡೀಗಢ: ಇಲ್ಲಿನ ನಗರದ ಬಾಪುಧಾಮ್ ಕಾಲೋನಿ ಸೆಕ್ಟರ್ 26 ಸಮೀಪದ ಶಾಸ್ತ್ರಿ ನಗರ ಸುಖ್ನಾ ಚೌದಲ್ಲಿ ಇಂದು ಬಾಂಬ್ ಶೆಲ್ ಪತ್ತೆಯಾಗಿದೆ. ಈ ಬಾಂಬ್ ಸುಮಾರು 51 ಎಂಎಂ ಇದೆ. ಸುಖ್ನಾ ಚೌ ಮೇಲೆ ಗುಡ್ಡಗಾಡು ಪ್ರದೇಶದಿಂದ ಈ ಬಾಂಬ್​ ನೀರಿನೊಂದಿಗೆ ಕೊಚ್ಚಿಕೊಂಡು ಬಂದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ, ಕೆಲವು ಮಕ್ಕಳು ಸುಖ್ನಾ ಚೌ ದಿಂದ ಈಜಲು ಬಂದಾಗ ಬಾಂಬ್‌ನ ಶೆಲ್ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಾಂಬ್​ ಸಿಕ್ಕ ಪ್ರದೇಶವನ್ನು ಸೀಲ್ ಮಾಡಿದ ಪೊಲೀಸರು: ಮಾಹಿತಿಯ ಪ್ರಕಾರ, ಪೊಲೀಸರು ಈ ಬಾಂಬ್ ಶೆಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಾಂಬ್​ಅನ್ನು ಮರಳಿನ ಚೀಲದಲ್ಲಿ ಇರಿಸಿ ಮುಚ್ಚಲಾಗಿದೆ. ಜೊತೆಗೆ ಬಾಂಬ್​ ಸಿಕ್ಕ ಇಡೀ ಪ್ರದೇಶವನ್ನು ಅದರಲ್ಲೂ ರಸ್ತೆಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಸದ್ಯ ಈ ಬಾಂಬ್​ಅನ್ನು ಸೇನೆಯ ವಿಶೇಷ ತಂಡ ಪರಿಶೀಲಿಸುತ್ತಿದೆ.

ಈ ಹಿಂದೆಯೂ ಪತ್ತೆಯಾಗಿತ್ತು ಬಾಂಬ್: ಜನವರಿ ತಿಂಗಳಲ್ಲಿ ಪಂಜಾಬ್ ಗಡಿಯಲ್ಲಿರುವ ಕನ್ಸಾಲ್ ಗ್ರಾಮದಲ್ಲಿ ಸಜೀವ ಬಾಂಬ್ ಪತ್ತೆಯಾಗಿತ್ತು. ಈ ಬಾಂಬ್ ಏನಾದರೂ ಸ್ಫೋಟಗೊಂಡಿದ್ದರೆ ಅದು 100 ಮೀಟರ್ ವ್ಯಾಪ್ತಿ ಪ್ರದೇಶವನ್ನು ನಾಶಪಡಿಸುತ್ತಿತ್ತು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಇಲ್ಲಿ ಭದ್ರತೆ ದೃಷ್ಟಿಯಿಂದ ಪೊಲೀಸರು ಹಾಗೂ ಸೇನೆಯಿಂದ ಸಕಲ ವ್ಯವಸ್ಥೆ ಮಾಡಲಾಗಿತ್ತು. ರಾಜೀಂದ್ರ ಪಾರ್ಕ್ ಬಳಿ ಸೇನಾ ರೋಬೋಟ್ ಬಾಂಬ್ ಅನ್ನು ಬಾಂಬ್​ ಅನ್ನು ಸ್ಥಳದಿಂದ ವಶಪಡಿಕೊಂಡಿತ್ತು ಮತ್ತು ರಕ್ಷಣಾ ಜಾಕೆಟ್​ಗಳನ್ನು ಧರಿಸಿದ ಸೇನಾ ತಂಡವು ಬಾಂಬ್​ ಸಿಕ್ಕ ಸ್ಥಳವನ್ನು ಪರಿಶೀಲನೆ ನಡೆಸಿತ್ತು.

ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಬಾಂಬ್‌ ಇಟ್ಟಿರುವ ಬಗ್ಗೆ ಬೆದರಿಕೆ ಕರೆ: ಇದೇ ವರ್ಷದ ಜನವರಿಯಲ್ಲಿ ಚಂಡೀಗಢದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಬಾಂಬ್‌ ಇಡಲಾಗಿದೆ ಎಂಬ ಬೆದರಿಕೆ ಕರೆ ಪೊಲೀಸರಿಗೆ ಬಂದಿತ್ತು. ನ್ಯಾಯಮೂರ್ತಿಗಳು, ವಕೀಲರು ಸೇರಿದಂತೆ ಸಂಕೀರ್ಣದೊಳಗಿದ್ದ ಎಲ್ಲರನ್ನೂ ಆಚೆ ಕಳುಹಿಸಲಾಗಿತ್ತು. ಬಳಿಕ ಬಾಂಬ್‌ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದವರು ಸ್ಥಳದಲ್ಲಿ 4 ಗಂಟೆಗಳ ಕಾಲ ತಪಾಸಣೆ ನಡೆಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯ ಸಂಕೀರ್ಣದ ಸುತ್ತಲೂ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ನಂತರ ಇದೊಂದು ಹುಸಿ ಬಾಂಬ್​ ಕರೆ ಎಂದು ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ: ಅಂತಾರಾಷ್ಟ್ರೀಯ ಗಡಿ ದಾಟಿದ ಪಾಕಿಸ್ತಾನಿ ಪ್ರಜೆ: ಅಮೃತಸರದಲ್ಲಿ ಬಿಎಸ್ಎಫ್ ಸಿಬ್ಬಂದಿಯಿಂದ ಬಂಧನ

ಹುಸಿ ಬಾಂಬ್ ಕರೆ ಮಾಡಿದ ಆರೋಪಿ ಸೆರೆ: ಇತ್ತೀಚಿಗೆ, ಶಿವಾಜಿ ನಗರದ ಆಜಾಂ ಮಸೀದಿಯಲ್ಲಿ ಬಾಂಬ್​ ಇರಿಸಲಾಗಿದೆ ಎಂದು ಹುಸಿ ಕರೆ ಮಾಡಿದ್ದ ಆರೋಪಿಯನ್ನು ಶಿವಾಜಿ ನಗರ ಠಾಣಾ ಪೊಲೀಸರು ತೆಲಂಗಾಣದಲ್ಲಿ ಬಂಧಿಸಿದ್ದರು. ಮಹಾರಾಷ್ಟ್ರ ಮೂಲದ ಸೈಯದ್​ ಮಹಮ್ಮದ್ ಅನ್ವರ್​ (37) ಬಂಧಿತ ಆರೋಪಿ. ರಾತ್ರಿ ಮಸೀದಿಯಲ್ಲಿ ತಂಗಲು ಆರೋಪಿ ಅವಕಾಶ ಕೇಳಿದ್ದ. ಇದಕ್ಕೆ ಮಸೀದಿ ಸಿಬ್ಬಂದಿ ಅವಕಾಶ ನೀಡರಲಿಲ್ಲ. ಇದರಿಂದ ಬೇಸರಗೊಂಡಿದ್ದ ಆರೋಪಿ ಮೆಜೆಸ್ಟಿಕ್​ಗೆ ತೆರಳಿ ಕರ್ನೂಲ್​ ಬಸ್​ ಹತ್ತಿದ್ದ. ಬಳಿಕ ಬಸ್​​ ಬೆಂಗಳೂರು ಹೊರವಲಯದ ದೇವನಹಳ್ಳಿ ದಾಟುತ್ತಿದ್ದಂತೆ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಆಜಾಂ ಮಸೀದಿಯಲ್ಲಿ ಬಾಂಬ್ ಇಟ್ಟಿದ್ದಾರೆ ಎಂದು ಹೇಳಿದ್ದ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.