ETV Bharat / bharat

ಅಂತಾರಾಷ್ಟ್ರೀಯ ಗಡಿ ದಾಟಿದ ಪಾಕಿಸ್ತಾನಿ ಪ್ರಜೆ: ಅಮೃತಸರದಲ್ಲಿ ಬಿಎಸ್ಎಫ್ ಸಿಬ್ಬಂದಿಯಿಂದ ಬಂಧನ

author img

By

Published : Jul 15, 2023, 6:43 PM IST

ಪಂಜಾಬ್‌ನಲ್ಲಿ ಪಾಕಿಸ್ತಾನದ ಗಡಿಯಲ್ಲಿರುವ ಹಳ್ಳಿಗಳಲ್ಲಿ, ಜನರು ಕೆಲವೊಮ್ಮೆ ಗೊತ್ತಿಲ್ಲದೇ ಗಡಿ ದಾಟುತ್ತಾರೆ. ಅಮೃತಸರ (ಗ್ರಾಮೀಣ) ಜಿಲ್ಲೆಯ ಕಮೀರ್‌ಪುರ ಗ್ರಾಮದ ಬಳಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ.

BSF arrested a Pakistani citizen in Amritsar
ಅಂತಾರಾಷ್ಟ್ರೀಯ ಗಡಿ ದಾಟಿದ ಪಾಕಿಸ್ತಾನಿ ಪ್ರಜೆ

ಅಮೃತಸರ: ಅರಿವಿಲ್ಲದೇ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಭಾರತದ ಪ್ರದೇಶವನ್ನು ಪ್ರವೇಶಿಸಿರುವ ಪಾಕಿಸ್ತಾನಿ ಪ್ರಜೆಯೊಬ್ಬನನ್ನು ಪಂಜಾಬ್‌ನ ಅಮೃತಸರ (ಗ್ರಾಮೀಣ) ಜಿಲ್ಲೆಯ ಕಮೀರ್‌ಪುರ ಗ್ರಾಮದ ಬಳಿ ಬಿಎಸ್‌ಎಫ್ ಸಿಬ್ಬಂದಿ ಶುಕ್ರವಾರ ಬಂಧಿಸಿದೆ.

ಈಗಾಗಲೇ ಭಾರತ ಪಾಕಿಸ್ತಾನ ಗಡಿ ಭಾಗದಲ್ಲಿ ನಿಯೋಜಿಸಲಾಗಿರುವ ಬಿಎಸ್ಎಫ್ ಸಿಬ್ಬಂದಿಗೆ ಜುಲೈ 14 ರಂದು ಗಡಿ ಬೇಲಿಯ ಮುಂದೆ ಒಬ್ಬ ಪಾಕಿಸ್ತಾನಿ ಪ್ರಜೆ ಸಿಕ್ಕಿಬಿದ್ದಿದ್ದಾನೆ ಎಂದು ಬಿಎಸ್ಎಫ್ ಹೇಳಿದೆ. ಆ ಪಾಕಿಸ್ತಾನಿ ಪ್ರಜೆ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಅಮೃತಸರ ಜಿಲ್ಲೆಯ ಕಮೀರ್ಪುರ ಗ್ರಾಮದ ಬಳಿಯ ಪ್ರದೇಶದಲ್ಲಿ ಭಾರತದ ಪ್ರದೇಶವನ್ನು ಪ್ರವೇಶಿಸಿದ್ದಾನೆ. ವಶಕ್ಕೆ ಪಡೆದ ಗಡಿ ಭದ್ರತಾ ಪಡೆ ನಂತರ ಆತನನ್ನು ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಪಾಕಿಸ್ತಾನ ರೇಂಜರ್ಸ್‌ಗೆ ಹಸ್ತಾಂತರಿಸಿದ್ದಾರೆ.

ಪಾಕಿಸ್ತಾನದ ರೇಂಜರ್​ಗಳ ಜೊತೆ ಸಂಪರ್ಕ: ವಿಚಾರಣೆ ವೇಳೆ ಬಂಧಿತ ಪಾಕಿಸ್ತಾನಿ ಪ್ರಜೆ ಭಾರತೀಯ ಪ್ರದೇಶಕ್ಕೆ ಅರಿವಿಲ್ಲದೇ ಪ್ರವೇಶಿಸಿರುವುದು ಬೆಳಕಿಗೆ ಬಂದಿದೆ. ಆತನಿಂದ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ ಎಂದು ಬಿಎಸ್‌ಎಫ್ ತಿಳಿಸಿದೆ. ಇದಾದ ನಂತರ, ಗಡಿ ಭದ್ರತಾ ಪಡೆ ಪಾಕಿಸ್ತಾನದ ರೇಂಜರ್‌ಗಳನ್ನು ಸಂಪರ್ಕಿಸಿದ್ದು, ಈ ವಿಷಯದ ಬಗ್ಗೆ ಪ್ರತಿಭಟನೆ ದಾಖಲಿಸಿದೆ. ಏಪ್ರಿಲ್ 14 ರಂದು ಸಂಜೆ 7 ರ ಸುಮಾರಿಗೆ, ಉದ್ದೇಶಪೂರ್ವಕವಲ್ಲದೇ ಗಡಿ ದಾಟಿದಾಗ ಸಿಕ್ಕಿಬಿದ್ದ ಪಾಕಿಸ್ತಾನಿ ಪ್ರಜೆಯನ್ನು ಮಾನವೀಯ ಆಧಾರದ ಮೇಲೆ ಪಾಕಿಸ್ತಾನ ರೇಂಜರ್‌ಗಳಿಗೆ ಹಸ್ತಾಂತರಿಸಲಾಯಿತು. ಅರಿವಿಲ್ಲದೇ ಗಡಿ ದಾಟುವ ಜನರೊಂದಿಗೆ ವ್ಯವಹರಿಸುವಾಗ, ಬಿಎಸ್ಎಫ್ ಯಾವಾಗಲೂ ಮಾನವೀಯ ಮನೋಭಾವವನ್ನು ಅನುಸರಿಸುತ್ತದೆ ಎಂದು ಬಿಎಸ್ಎಫ್ ಹೇಳಿದೆ.

ಜೂನ್‌ ತಿಂಗಳಲ್ಲಿಯೂ ಇದೇ ರೀತಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಾಕಿಸ್ತಾನಿ ಪ್ರಜೆಯೊಬ್ಬನನ್ನು ಬಂಧಿಸಿತ್ತು. ಆತ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ದಾಟುತ್ತಿದ್ದಾಗ ಬಂದಿಸಿತ್ತು. ಪಂಜಾಬ್ ಫ್ರಾಂಟಿಯರ್ ಪಬ್ಲಿಕ್ ರಿಲೇಶನ್ ಆಫೀಸರ್ (PRO) ನೀಡಿದ್ದ ಮಾಹಿತಿ ಪ್ರಕಾರ, ಪಾಕಿಸ್ತಾನಿ ಪ್ರಜೆಯು ಫಿರೋಜ್‌ಪುರ ಜಿಲ್ಲೆಯ ಹಜಾರಾ ಸಿಂಗ್ ವಾಲಾ ಗ್ರಾಮದ ಬಳಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಭಾರತದ ಪ್ರದೇಶವನ್ನು ಪ್ರವೇಶಿಸುತ್ತಿದ್ದಾಗ BSF ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದನು.

ತನಿಖೆ ವೇಳೆ ಬಂಧಿತ ಪಾಕಿಸ್ತಾನಿ ಪ್ರಜೆ ಭಾರತೀಯ ಪ್ರದೇಶಕ್ಕೆ ಅರಿವಿಲ್ಲದೇ ಪ್ರವೇಶಿಸಿರುವುದು ಬೆಳಕಿಗೆ ಬಂದಿತ್ತು. ಪಾಕಿಸ್ತಾನಿ ಪ್ರಜೆ ತಿಳಿಯದೆ ಗಡಿ ದಾಟಿದ್ದನು ಎಂದು ಪಿಆರ್‌ಒ ತಿಳಿಸಿದ್ದರು. ಆತನಿಂದ ಆಕ್ಷೇಪಾರ್ಹವಾದ ಯಾವುದನ್ನೂ ವಶಪಡಿಸಿಕೊಂಡಿರಲಿಲ್ಲ. ನಂತರ, ಬಿಎಸ್ಎಫ್ ಸಿಬ್ಬಂದಿ ಪಾಕಿಸ್ತಾನದ ರೇಂಜರ್‌ಗಳನ್ನು ಸಂಪರ್ಕಿಸಿ ಈ ವಿಷಯದ ಬಗ್ಗೆ ಆಕ್ಷೇಪಣೆ ದಾಖಲಿಸಿತ್ತು. ತರುವಾಯ, ಜೂನ್ 27ರಂದು ಸಂಜೆ 5.10ಕ್ಕೆ, ಅರಿವಿಲ್ಲದೇ ಗಡಿಯನ್ನು ದಾಟಿದ ಬಂಧಿತ ಪಾಕಿಸ್ತಾನಿ ಪ್ರಜೆಯನ್ನು ಮಾನವೀಯ ಆಧಾರದ ಮೇಲೆ ಪಾಕಿಸ್ತಾನದ ರೇಂಜರ್‌ಗಳಿಗೆ ಹಸ್ತಾಂತರಿಸಲಾಗಿತ್ತು.

ಇದನ್ನೂ ಓದಿ: ಪಾಕಿಸ್ತಾನದಿಂದ ಹೆರಾಯಿನ್ ಸಾಗಿಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಬಿಎಸ್​ಎಫ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.