ETV Bharat / bharat

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಖರ್ಗೆ, ಶಶಿ ತರೂರ್, ಸೋನಿಯಾರಿಂದ​ ಮತದಾನ

author img

By

Published : Oct 17, 2022, 11:49 AM IST

ಕಾಂಗ್ರೆಸ್​ ಪಕ್ಷದ ಅಧ್ಯಕ್ಷರ ಆಯ್ಕೆಯಾಗಿ ಮತದಾನ ನಡೆಯುತ್ತಿದ್ದು, ಅಭ್ಯರ್ಥಿಗಳಾದ ಮಲ್ಲಿಕಾರ್ಜುನ್​ ಖರ್ಗೆ ಮತ್ತು ಶಶಿ ತರೂರ್​ ಅವರು ಮತದಾನ ಮಾಡಿದರು.

congress-presidential-candidate-election
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ

ಬೆಂಗಳೂರು/ನವದೆಹಲಿ: 24 ವರ್ಷಗಳ ಬಳಿಕ ಕಾಂಗ್ರೆಸ್​ ಅಧ್ಯಕ್ಷರ ಚುನಾವಣೆ ನಡೆಯುತ್ತಿದ್ದು, ಗಾಂಧಿಯೇತರ ಕುಟುಂಬದ ವ್ಯಕ್ತಿಯೊಬ್ಬರ ಪಟ್ಟಾಭಿಷೇಕಕ್ಕೆ ಮತದಾನ ನಡೆಯುತ್ತಿದೆ. ಅಧ್ಯಕ್ಷ ಸ್ಥಾನದ ರೇಸ್​ನಲ್ಲಿರುವ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ್​​ ಖರ್ಗೆ ಅವರು ಇಂದು ಬೆಂಗಳೂರಿನಲ್ಲಿ ಮತದಾನ ಮಾಡಿದರು.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ.. ಮಲ್ಲಿಕಾರ್ಜುನ್​ ಖರ್ಗೆ
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ.. ಮಲ್ಲಿಕಾರ್ಜುನ್​ ಖರ್ಗೆ

ಮತದಾನಕ್ಕೂ ಮೊದಲು ಮಾತನಾಡಿದ ಮಲ್ಲಿಕಾರ್ಜುನ್​ ಖರ್ಗೆ ಅವರು, ಇದು ನಮ್ಮ ಆಂತರಿಕ ಚುನಾವಣೆಯ ಒಂದು ಭಾಗವಾಗಿದೆ. ನಾವು ಒಬ್ಬರಿಗೊಬ್ಬರು ಏನೇ ಹೇಳಿದರೂ ಅದು ಸ್ನೇಹಪೂರ್ವಕವಾಗಿರುತ್ತದೆ. ಎಲ್ಲರೂ ಸೇರಿ ಪಕ್ಷ ಕಟ್ಟಬೇಕು. ತರೂರ್ ನನಗೆ ದೂರವಾಣಿ ಕರೆ ಮಾಡಿ ಶುಭ ಹಾರೈಸಿದರು. ನಾನು ಕೂಡ ಅವರಿಗೆ ಶುಭ ಕೋರಿದ್ದೇನೆ ಎಂದರು.

ಕೇರಳದಲ್ಲಿ ಶಶಿ ತರೂರ್​ಗೆ ತಿಲಕ ಇಟ್ಟ ಬೆಂಬಲಿಗರು
ಕೇರಳದಲ್ಲಿ ಶಶಿ ತರೂರ್​ಗೆ ತಿಲಕ ಇಟ್ಟ ಬೆಂಬಲಿಗರು

ಪಕ್ಷ ಪುಟಿದೇಳುವುದು ಪಕ್ಕಾ: ಇನ್ನು, ಕೇರಳದ ಪಕ್ಷದ ಕಚೇರಿಯಲ್ಲಿ ಮತದಾನ ಮಾಡಿದ ಇನ್ನೋರ್ವ ಸ್ಪರ್ಧಿ ಶಶಿ ತರೂರ್, ಕಾಂಗ್ರೆಸ್​ನ ಪುನರುಜ್ಜೀವನ ಆರಂಭವಾಗಿದೆ ಎಂಬುದನ್ನು ಚುನಾವಣೆ ತೋರಿಸುತ್ತದೆ. ಪಕ್ಷದ ಭವಿಷ್ಯ ಪಕ್ಷದ ಕಾರ್ಯಕರ್ತರ ಕೈಯಲ್ಲಿದೆ. ಪಕ್ಷದ ನಾಯಕರು ಮತ್ತು ಹೈಕಮಾಂಡ್​ ಖರ್ಗೆ ಅವರಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ನನಗೆ ಸಂಪೂರ್ಣ ವಿಶ್ವಾಸವಿದೆ. ಪಕ್ಷ ಮತ್ತೆ ಪುಟಿದೇಳುವುದು ಖಂಡಿತ. ಮಲ್ಲಿಕಾರ್ಜುನ್​ ಖರ್ಗೆ ಅವರೊಂದಿಗೆ ಮಾತನಾಡಿದ್ದೇನೆ. ಅಧ್ಯಕ್ಷದ ಚುಣಾವಣೆಗೆ ಸ್ಪರ್ಧಿಸಿದರೂ ನಾವು ಸಹೋದ್ಯೋಗಿಗಳು, ಸ್ನೇಹಿತರಾಗಿದ್ದೇವೆ ಎಂದು ತರೂರ್ ಹೇಳಿದರು.

ಐತಿಹಾಸಿಕ ದಿನವಾಗಿದೆ: ಇಂದು ಐತಿಹಾಸಿಕ ದಿನವಾಗಿದೆ. 24 ವರ್ಷಗಳ ನಂತರ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಯುತ್ತಿದೆ. ಪಕ್ಷದಲ್ಲಿ ಆಂತರಿಕ ಸಾಮರಸ್ಯದ ಸಂದೇಶವನ್ನು ಈ ಚುನಾವಣೆ ನೀಡಿದೆ. ಅಕ್ಟೋಬರ್ 19 ರ ಫಲಿತಾಂಶ ಘೋಷಣೆ ನಂತರವೂ ಗಾಂಧಿ ಕುಟುಂಬದೊಂದಿಗಿನ ನನ್ನ ಸಂಬಂಧ ಹೀಗೇ ಮುಂದುವರಿಯುತ್ತದೆ ಎಂದು ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದರು.

ಹಂಗಾಮಿ ಅಧ್ಯಕ್ಷೆ ಸೋನಿಯಾರಿಂದ ಮತದಾನ
ಹಂಗಾಮಿ ಅಧ್ಯಕ್ಷೆ ಸೋನಿಯಾರಿಂದ ಮತದಾನ

ಗಾಂಧಿ ಕುಟುಂಬದಿಂದ ಮತ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದೆಹಲಿಯ ಎಐಸಿಸಿ ಕಚೇರಿಯಲ್ಲಿ ಪಕ್ಷದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಮತ ಚಲಾಯಿಸಿದರು.

  • #WATCH | Congress interim president Sonia Gandhi & party leader Priyanka Gandhi Vadra cast their vote to elect the new party president, at the AICC office in Delhi pic.twitter.com/aErRUpRVv0

    — ANI (@ANI) October 17, 2022 " class="align-text-top noRightClick twitterSection" data=" ">
ಮತದಾನ ಮಾಡಿದ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​
ಮತದಾನ ಮಾಡಿದ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​

ಮತದಾನ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸೋನಿಯಾ ಗಾಂಧಿ ಅವರು, "ನಾನು ಇದಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದ. ಅದೀಗ ನಡೆಯುತ್ತಿದೆ" ಎಂದು ಹೇಳಿದರು.

ದೆಹಲಿ ಕಚೇರಿಯಲಲ್ಲಿ ಮತ ಹಾಕಿದ ಪ್ರಿಯಾಂಕಾ ಗಾಂಧಿ
ದೆಹಲಿ ಕಚೇರಿಯಲಲ್ಲಿ ಮತ ಹಾಕಿದ ಪ್ರಿಯಾಂಕಾ ಗಾಂಧಿ

ಓದಿ: 137 ವರ್ಷಗಳ ಕಾಂಗ್ರೆಸ್​​ ಇತಿಹಾಸದಲ್ಲಿ ಆರನೇ ಅಧ್ಯಕ್ಷೀಯ ಚುನಾವಣೆ: ಇಂದು ಮತದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.