ETV Bharat / bharat

ಟೋಕಿಯೋ ಒಲಿಂಪಿಕ್​ನಲ್ಲಿ ಚಿನ್ನ ಗೆದ್ದವರಿಗೆ 2 ಕೋಟಿ ರೂ. ಘೋಷಿಸಿದ ಸಿಎಂ

author img

By

Published : Jul 4, 2021, 9:20 PM IST

CM Hemant Soren
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ನಿನ್ನೆ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿ ಪದಕ ಗೆಲ್ಲುವಂತೆ ಪ್ರೇರೇಪಿಸಿದರು. ಈ ವೇಳೆ ಚಿನ್ನದ ಪದಕ ಗೆಲ್ಲುವ ಆಟಗಾರರಿಗೆ 2 ಕೋಟಿ ರೂ., ಬೆಳ್ಳಿ ಪದಕ ಗೆಲ್ಲುವವರಿಗೆ 1 ಕೋಟಿ, ಕಂಚಿನ ಪದಕ ಗೆಲ್ಲುವವರಿಗೆ 75 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಜಾರ್ಖಂಡ್: ದೇಶಕ್ಕೆ ಕೀರ್ತಿ ತಂದುಕೊಡಲು ಟೋಕಿಯೋ ಒಲಿಂಪಿಕ್​ಗೆ ತೆರಳಲಿರುವ ಎಲ್ಲ ಕ್ರೀಡಾಪಟುಗಳಿಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ಸಿಎಂ ಹೇಮಂತ್ ಸೊರೆನ್ ಅವರು ನಿನ್ನೆ ಬಿಲ್ಲುಗಾರ್ತಿ ದೀಪಿಕಾ ಕುಮಾರಿ, ಕೊಮೊಲಿಕಾ ಬ್ಯಾರಿ, ಅಂಕಿತಾ ಭಗತ್ ಮತ್ತು ಕೋಚ್ ಪೂರ್ಣಿಮಾ ಮಹತೋ ಮತ್ತು ಮಹಿಳಾ ಹಾಕಿ ತಂಡದ ಸದಸ್ಯೆಯರಾದ ಜಾರ್ಖಂಡ್​ನ ಸಲೀಮಾ ಟೆಟೆ ಮತ್ತು ನಿಕ್ಕಿ ಪ್ರಧಾನ್ ಅವರೊಂದಿಗೆ ಸಂವಾದ ನಡೆಸಿ ಕ್ರೀಡಾಪಟುಗಳನ್ನು ಪ್ರೇರೇಪಿಸಿದರು. ಜೊತೆಗೆ ಮಹಿಳಾ ಹಾಕಿ ಆಟಗಾರರಿಗೆ ಶುಭ ಹಾರೈಸಿದರು.

ಸಂವಾದದ ವೇಳೆ ಮುಖ್ಯಮಂತ್ರಿಗಳು ಚಿನ್ನದ ಪದಕ ಗೆಲ್ಲುವ ಆಟಗಾರರಿಗೆ 2 ಕೋಟಿ ರೂ., ಬೆಳ್ಳಿ ಪದಕ ಗೆಲ್ಲುವ ಆಟಗಾರರಿಗೆ 1 ಕೋಟಿ ಮತ್ತು ಕಂಚಿನ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ 75 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.