ETV Bharat / bharat

ಕೋವಿಡ್ ಮಧ್ಯೆ ಕೇರಳದಲ್ಲಿ ಅ.25ರಿಂದ ಚಿತ್ರಮಂದಿರ ಒಪನ್, ನ.1ರಿಂದ ಶಾಲೆ ಆರಂಭ..

author img

By

Published : Oct 2, 2021, 10:47 PM IST

Cinema Halls In Kerala
Cinema Halls In Kerala

ಉಳಿದಂತೆ ಅಕ್ಟೋಬರ್​​ 18ರಿಂದ ಕಾಲೇಜ್​ಗಳು ಪುನಾರಂಭಗೊಳ್ಳಲು ಅವಕಾಶ ನೀಡಲಾಗಿದೆ. ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಎರಡೂ ಡೋಸ್‌ ಕೋವಿಡ್ ವ್ಯಾಕ್ಸಿನ್​ ಪಡೆದಿರಬೇಕು..

ತಿರುವನಂತಪುರಂ(ಕೇರಳ) : ದೇವರ ನಾಡು ಕೇರಳದಲ್ಲಿ 2ನೇ ಹಂತದ ಕೋವಿಡ್​ ಅಬ್ಬರ ಕಡಿಮೆಯಾಗಿಲ್ಲ. ಇದರ ಮಧ್ಯೆ ಕೂಡ ಕೆಲ ಸಡಿಲಿಕೆ ನೀಡಿ ಅಲ್ಲಿನ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

  • Kerala Government permits the reopening of cinema theatres and indoor auditoriums from October 25 with restrictions.

    "Entry will be for those who are fully vaccinated including employees. Theatres & auditoriums will function with 50% seating capacity," says CM Pinarayi Vijayan pic.twitter.com/K65aIK9Tkw

    — ANI (@ANI) October 2, 2021 " class="align-text-top noRightClick twitterSection" data=" ">

ಅಕ್ಟೋಬರ್​​ 25ರಿಂದ ಚಿತ್ರಮಂದಿರ ಹಾಗೂ ಒಳಾಂಗಣ ಕ್ರೀಡಾಂಗಣಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿದೆ. ಶೇ.50ರಷ್ಟು ಆಸನದೊಂದಿಗೆ ಸಿನಿಮಾ ಹಾಲ್​ ಕಾರ್ಯನಿರ್ವಹಿಸಲಿವೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಕೋವಿಡ್ ಪರಿಶೀಲನಾ ಸಭೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನರಿಗೆ ಮತ್ತಷ್ಟು ಸಡಲಿಕೆ ನೀಡಲಾಗಿದೆ.

ಚಿತ್ರಮಂದಿರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ವೀಕ್ಷಕರು ಕೋವಿಡ್ ಲಸಿಕೆಯ ಎರಡು ಡೋಸ್​ ಪಡೆಯುವುದು ಕಡ್ಡಾಯವಾಗಿದೆ. ಶೇ.50ರಷ್ಟು ಆಸನದೊಂದಿಗೆ ಒಪನ್ ಮಾಡಲು ಗ್ರೀನ್ ಸಿಗ್ನಲ್ ನೀಡಲಾಗಿದೆ.

ಇದನ್ನೂ ಓದಿರಿ: IPL​ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ ಯಂಗ್ ಪ್ಲೇಯರ್ ಗಾಯಕ್ವಾಡ್​​

ಉಳಿದಂತೆ ಅಕ್ಟೋಬರ್​​ 18ರಿಂದ ಕಾಲೇಜ್​ಗಳು ಪುನಾರಂಭಗೊಳ್ಳಲು ಅವಕಾಶ ನೀಡಲಾಗಿದೆ. ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಎರಡೂ ಡೋಸ್‌ ಕೋವಿಡ್ ವ್ಯಾಕ್ಸಿನ್​ ಪಡೆದಿರಬೇಕು.

ಇದರ ಮಧ್ಯೆ ನವೆಂಬರ್​​ 1ರಿಂದ ಶಾಲೆಗಳು ಪುನಾರಂಭಕ್ಕೆ ಅನುಮತಿ ನೀಡಲಾಗಿದೆ. ಕರ್ನಾಟಕ, ತಮಿಳುನಾಡು ಸೇರಿ ಅನೇಕ ರಾಜ್ಯಗಳಲ್ಲಿ ಈಗಾಗಲೇ ಶೇ. 100ರಷ್ಟು ಆಸನದೊಂದಿಗೆ ಚಿತ್ರಮಂದಿರ ರೀ ಒಪನ್​ಗೆ ಅವಕಾಶ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.