ETV Bharat / sports

IPL​ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ ಯಂಗ್ ಪ್ಲೇಯರ್ ಗಾಯಕ್ವಾಡ್​​

author img

By

Published : Oct 2, 2021, 9:47 PM IST

Updated : Oct 2, 2021, 10:55 PM IST

ರಾಜಸ್ಥಾನ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಂಗ್ ಪ್ಲೇಯರ್​ ಋತುರಾಜ್​ ಗಾಯಕ್ವಾಡ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಜೊತೆಗೆ ಐಪಿಎಲ್​ನಲ್ಲಿ ಚೊಚ್ಚಲ ಶತಕ ಸಿಡಿಸಿರುವ ಸಾಧನೆ ಮಾಡಿದ್ದಾರೆ.

Ruturaj Gaikwad
Ruturaj Gaikwad

ಅಬುದಾಭಿ: ಇಂಡಿಯನ್​ ಪ್ರೀಮಿಯರ್ ಲೀಗ್​ನ ರಾಜಸ್ಥಾನ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್​ ಶತಕ ಸಿಡಿಸಿ ಮಿಂಚಿದ್ದಾರೆ.

Ruturaj Gaikwad
ಚೊಚ್ಚಲ ಶತಕ ಸಿಡಿಸಿ ಮಿಂಚಿದ ಗಾಯಕ್ವಾಡ

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಚೆನ್ನೈ ಆರಂಭದಿಂದಲೂ ಸ್ಪೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿತು. ಡುಪ್ಲೆಸಿಸ್ ಜೊತೆ ಸೇರಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಋತುರಾಜ್ ಗಾಯಕ್ವಾಡ್​, ತಾವು ಎದುರಿಸಿದ 60 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್​​ ಸೇರಿದಂತೆ ಅಜೇಯ 101ರನ್​ಗಳಿಕೆ ಮಾಡಿದರು. 95ರನ್​ಗಳಿಕೆ ಮಾಡಿದ್ದ ಗಾಯಕ್ವಾಡ್​ 20ನೇ ಓವರ್​ನ ಕೊನೆ ಎಸತದಲ್ಲಿ ಭರ್ಜರಿಯಾಗಿ ಸಿಕ್ಸರ್​ ಸಿಡಿಸುವ ಮೂಲಕ ಈ ಸಾಧನೆಗೈದರು.

ಕೇವಲ 24 ವರ್ಷದ ಗಾಯಕ್ವಾಡ್​ ಸಿಎಸ್​ಕೆ ಪರ ಶತಕ ಸಿಡಿಸಿರುವ ಅತಿ ಕಿರಿಯ ಬ್ಯಾಟರ್ ಎಂಬ ಸಾಧನೆಗೆ ಪಾತ್ರರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುರುಳಿ ವಿಜಯ್​(2010) ತದನಂತರ ಶೇನ್ ವ್ಯಾಟ್ಸನ್​​(2018) ರಾಜಸ್ಥಾನ ರಾಯಲ್ಸ್​ ವಿರುದ್ಧ ಶತಕ ಸಿಡಿಸಿ ಮಿಂಚಿದ್ದರು. ಇದಾದ ಬಳಿಕ ಗಾಯಕ್ವಾಡ್ ಶತಕ ಸಾಧನೆ ಮಾಡಿದ್ದಾರೆ.

14ನೇ ಆವೃತ್ತಿ ಇಂಡಿಯನ್​​ ಪ್ರೀಮಿಯರ್ ಲೀಗ್​ನಲ್ಲಿ ಈಗಾಗಲೇ ರಾಜಸ್ಥಾನ ರಾಯಲ್ಸ್​ ತಂಡದ ಸಂಜು ಸ್ಯಾಮನ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ದೇವದತ್​ ಪಡಿಕ್ಕಲ್ ಶತಕ ಸಿಡಿಸಿ ಮಿಂಚಿದ್ದಾರೆ. ಸಿಎಸ್​​ಕೆ ತಂಡದ ಪರ ಋತುರಾಜ್​ ಗಾಯಕ್ವಾಡ್ ಶತಕ ಸಿಡಿಸಿರುವ 9ನೇ ಪ್ಲೇಯರ್​​ ಆಗಿದ್ದು, ರಾಜಸ್ಥಾನ ರಾಯಲ್ಸ್​ ವಿರುದ್ಧ ಮೂಡಿ ಬಂದಿರುವ 7ನೇ ಸೆಂಚುರಿ ಇದಾಗಿದೆ. ಐಪಿಎಲ್​ನಲ್ಲಿ ಮೂಡಿ ಬಂದಿರುವ 66ನೇ ಶತಕ ಇದಾಗಿದ್ದು, ಭಾರತೀಯನಿಂದ ಸಿಡಿದಿರುವ 24ನೇ ಸೆಂಚುರಿಯಾಗಿದೆ.

Last Updated : Oct 2, 2021, 10:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.