ETV Bharat / state

ಪಾಲಿಸಿದಾರರಿಗೆ 15 ಲಕ್ಷ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶ - Dharwad Dist Consumer Commission

author img

By ETV Bharat Karnataka Team

Published : May 18, 2024, 10:21 PM IST

ಲೋಂಬಾರ್ಡ ಕಂಪನಿಗೆ ವಿಮೆ ಪರಿಹಾರ ಪಾವತಿಸುವಂತೆ ಮನವಿ ಮಾಡಿದರೂ, ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿ ಪಾಲಿಸಿದಾರನ ಕುಟುಂಬ 2023 ರಲ್ಲಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

DHARWAD DIST CONSUMER COMMISSION
ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ (ETV Bharat)

ಧಾರವಾಡ: ಅಪಘಾತದಲ್ಲಿ ಸಾವಿಗೀಡಾಗಿದ್ದ ಪಾಲಿಸಿದಾರನ ಕುಟುಂಬಕ್ಕೆ ವಿಮಾ ಹಣ 15 ರೂ ಲಕ್ಷ ಬಡ್ಡಿ ಸಮೇತ ನೀಡುವಂತೆ ಲೋಂಬಾರ್ಡ್​ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗವು ಆದೇಶಿಸಿದೆ.

ಧಾರವಾಡ ಸರಸ್ವತಪುರದ ನಿವಾಸಿಗಳಾದ ಪ್ರೀತಿ ಮತ್ತು ಅವರ ಮಗಳಾದ ಪೂರ್ವಿ ಅವರು ತಮ್ಮ ತಂದೆ ಪ್ರಶಾಂತ ಶಾನಬಾಗ್ ಅವರು ಆಯ್.ಸಿ.ಆಯ್.ಸಿ.ಆಯ್ ಲೋಂಬಾರ್ಡ ಅವರಲ್ಲಿ ರೂ.1489 ಪ್ರೀಮಿಯಮ್ ಮತ್ತು ಅದರ ಜೊತೆ ಪಿಎ ಕವರೇಜ್ ಮಾಲೀಕ ಮತ್ತು ಡ್ರೈವರ್​ಗೆ ಹೆಚ್ಚಿನ ಮೊತ್ತ ರೂ.375 ಪಾವತಿಸಿ ವಿಮೆಯನ್ನು ಮಾಡಿಸಿದ್ದರು.

2022 ರಲ್ಲಿ ಪ್ರಶಾಂತ ಶಾನಬಾಗ ರಸ್ತೆಯ ಅಪಘಾತದಲ್ಲಿ ಮರಣ ಹೊಂದಿದರು. ದೂರುದಾರರು ತಮ್ಮ ಗಂಡ/ತಂದೆಯ ವಿಮಾ ಹಣವನ್ನು ಕೊಡುವಂತೆ ಕಂಪನಿಗೆ ದಾಖಲೆಗಳೊಂದಿಗೆ ಬೇಡಿಕೆಯನ್ನು ಇಟ್ಟಿದ್ದರು. ಕಂಪನಿಯು ಇವರ ಕ್ಲೇಮ್​​ನ್ನು ನಿರಾಕರಿಸಿ ಪ್ರಶಾಂತ ಶಾನಬಾಗ ಇವರು ಅಪಘಾತದ ಸಮಯದಲ್ಲಿ ಲೈಸನ್ಸ್ ಹೊಂದಿಲ್ಲ. ಆದ ಕಾರಣ ದೂರುದಾರರು ವಿಮಾ ಹಣವನ್ನು ಪಡೆಯಲು ಅರ್ಹರಲ್ಲವೆಂದು ಅವರ ಬೇಡಿಕೆಯನ್ನು ನಿರಾಕರಿಸಿದ್ದರು.

ವಿಮಾ ಕಂಪನಿಗೆ ಹಲವು ಬಾರಿ ವಿಮೆ ಹಣವನ್ನು ಪಾವತಿಸಲು ಕೇಳಿಕೊಂಡರು ಎದುರುದಾರರು ತಮಗೆ ವಿಮಾ ಹಣ ಅಥವಾ ಪರಿಹಾರ ಕೊಟ್ಟಿಲ್ಲ ಅಂತಹ ವಿಮಾ ಕಂಪನಿಯವರ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು 2023 ರಲ್ಲಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರಿನ ಬಗ್ಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ಕೂಲಂಕಷವಾಗಿ ವಿಚಾರಣೆ ನಡೆಸಿದರು. ಪ್ರಶಾಂತ ಅವರು ಹೊಂದಿದ ಡ್ರೈವಿಂಗ್ ಲೈಸನ್ಸ್ ಅವಧಿಯು 03/04/2022 ರ ವರೆಗೆ ಇದ್ದು ಅವರ ಮರಣವು 11/10/2022ರಲ್ಲಿ ಆಗಿದ್ದು, ಎದುರದಾರ ಕಂಪನಿಯು ಅವರು ವಿಮಾ ಹಣವನ್ನು ಪಡೆಯಲು ಅರ್ಹರಲ್ಲರೆಂದು ಹೇಳಿತು.

ದೂರುದಾರರ ವಕೀಲರು ಸಲ್ಲಿಸಿದ ದಾಖಲೆಗಳನ್ನು ಪರಿಗಣಿಸಿದಾಗ ಮೋಟರ್ ವಾಹನ ಕಾಯ್ದೆಯ ಕಲಂ ಪ್ರಕಾರ ಪ್ರಶಾಂತ ಶಾನಬಾಗ ಅವರ ಲೈಸ್ಸನ್ಸ್ ಮುಂದಿನ 10 ವರ್ಷದ ವರೆಗೆ ಅನ್ವಯವಾಗುವ ಅಂಶಗಳನ್ನು ಸಾಬೀತುಪಡಿಸಿದಾಗ ದೂರುದಾರರು ತಾವು ಕೇಳಿದಂತಹ ವಿಮಾ ಹಣವನ್ನು ಪಡೆಯಲು ಅರ್ಹರಿದ್ದಾರೆಂದು ಆಯೋಗವು ಅಭಿಪ್ರಾಯಪಟ್ಟಿತು.

ಆಯೋಗವು ದೂರುದಾರರಿಗೆ 15 ಲಕ್ಷ ರೂ ನೀಡುವ ಜೊತೆಗೆ ಅವರು ಅನುಭವಿಸಿದ ಮಾನಸಿಕ ಹಿಂಸೆ ಹಾಗೂ ಅನಾನುಕೂಲತೆಗೆ ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಆಯ್.ಸಿ.ಆಯ್.ಸಿ.ಆಯ್ ಲೋಂಬಾರ್ಡ ಕಂಪನಿಗೆ ಆಯೋಗ ಆದೇಶಿಸಿದೆ.

ಇದನ್ನೂಓದಿ:ಕೇಜ್ರಿವಾಲ್, ಸೊರೆನ್: ಎರಡು ಜಾಮೀನು ಅರ್ಜಿಗಳ ತೀರ್ಪು ಭಿನ್ನವೇಕೆ? - TWO CMS AND BAIL PLEA IN COURT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.