ETV Bharat / bharat

ವಿಶಾಖಪಟ್ಟಣಕ್ಕೆ ನೌಕಾಪಡೆಯ ಮುಖ್ಯಸ್ಥರ ಭೇಟಿ: ನೌಕಾಬಲದ ಪರಿಶೀಲನೆ

author img

By

Published : Feb 20, 2022, 7:57 PM IST

ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಕೂಡ ಆಗಿರುವ ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಅಧ್ಯಕ್ಷೀಯ ನೌಕೆ INS ಸುಮಿತ್ರಾ ಸೆರಿದಂತೆ 60ಕ್ಕೂ ಹೆಚ್ಚು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳು, 55 ವಿಮಾನಗಳನ್ನು ಒಳಗೊಂಡಿರುವ ಭಾರತೀಯ ನೌಕಾ ಪಡೆಯನ್ನು ಪರಿಶೀಲಿಸಲಿದ್ದಾರೆ.
ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆ
ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆ

ನವದೆಹಲಿ: ನೌಕಾಪಡೆಯ ಮುಖ್ಯಸ್ಥ (CNS) ಅಡ್ಮಿರಲ್ ಆರ್ ಹರಿ ಕುಮಾರ್ ವಿಶಾಖಪಟ್ಟಣಕ್ಕೆ ಆಗಮಿಸಿದ್ದಾರೆ. ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಅಂಗವಾಗಿ ಫೆ. 21 ರಂದು ವಿಶಾಖಪಟ್ಟಣದಲ್ಲಿ PFR ನ 12 ನೇ ಆವೃತ್ತಿಯನ್ನು 'ಆಜಾದಿ ಕಾ ಅಮೃತ್ ಮಹೋತ್ಸವ' ಎಂದು ಆಚರಿಸುವ ಉದ್ದೇಶದಿಂದ ಸಿದ್ಧತೆಗಳನ್ನು ಅವರು ಪರಿಶೀಲಿಸಿದ್ದಾರೆ.

ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಕೂಡ ಆಗಿರುವ ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಅಧ್ಯಕ್ಷೀಯ ನೌಕೆ INS ಸುಮಿತ್ರಾ ಸೆರಿದಂತೆ 60 ಕ್ಕೂ ಹೆಚ್ಚು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳು , 55 ವಿಮಾನಗಳನ್ನು ಒಳಗೊಂಡಿರುವ ಭಾರತೀಯ ನೌಕಾ ಪಡೆಯನ್ನು ಪರಿಶೀಲಿಸಲಿದ್ದಾರೆ.

ವಿಶಾಖಪಟ್ಟಣಕ್ಕೆ  ನೌಕಾಪಡೆಯ ಮುಖ್ಯಸ್ಥರ ಭೇಟಿ
ವಿಶಾಖಪಟ್ಟಣಕ್ಕೆ ನೌಕಾಪಡೆಯ ಮುಖ್ಯಸ್ಥರ ಭೇಟಿ

ಇದನ್ನೂ ಓದಿ: ಯುವತಿಯ ಖಾಸಗಿ ಫೋಟೋಗಳನ್ನು ಆಕೆಯ ತಂದೆಗೆ ಕಳುಹಿಸಿ ಬೆದರಿಕೆ: ರೌಡಿಶೀಟರ್ ಅರೆಸ್ಟ್

ಎಲ್ಲಾ ನೌಕಾ ಕಮಾಂಡ್‌ಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ನ ಹಡಗುಗಳನ್ನು ನಾಲ್ಕು ಕಾಲಮ್‌ಗಳಲ್ಲಿ ಲಂಗರು ಹಾಕಲಾಗಿದೆ. ಅಧ್ಯಕ್ಷೀಯ ವಿಹಾರ ನೌಕೆಯು ನಾಲ್ಕು ಲೇನ್‌ಗಳಲ್ಲಿ 44 ಹಡಗುಗಳ ಹಿಂದೆ ಸಾಗಲಿದೆ ಮತ್ತು ಒಂದೊಂದಾಗಿ ವಿಧ್ಯುಕ್ತ ಗೌರವವನ್ನು ಸಲ್ಲಿಸಲಿವೆ.

ಕೋಸ್ಟ್ ಗಾರ್ಡ್, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಭೂ ವಿಜ್ಞಾನ ಸಚಿವಾಲಯದ ಹಡಗುಗಳು ಸಹ ಇದರಲ್ಲಿ ಭಾಗವಹಿಸುತ್ತಿವೆ. ಭಾಗವಹಿಸುವ 60 ಹಡಗುಗಳಲ್ಲಿ 47 ಮತ್ತು ಹಡಗುಗಳನ್ನು ಭಾರತೀಯ ಹಡಗುಕಟ್ಟೆಗಳಲ್ಲಿಯೇ ನಿರ್ಮಿಸಲಾಗಿದೆ ಎಂಬುದು ಉಲ್ಲೇಖಾರ್ಹ.

ನಾಳೆ ನೌಕಾಪಡೆಯಿಂದ ರಾಷ್ಟ್ರಪತಿ ಅವರು ಗೌರವ ವಂದನೆ ಸ್ವೀಕರಿಸಿದ ಬಳಿಕ ಹಡಗುಗಳನ್ನು ಪರಿಶೀಲನೆ ನಡೆಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.