ETV Bharat / bharat

ಭಾರತೀಯ ಸೇನೆ ಸೇರಲು ಇನ್ನು ಆನ್​ಲೈನ್​ ಪರೀಕ್ಷೆ : ಹೊಸ ನಿಯಮ ಜಾರಿಗೆ

author img

By

Published : Feb 25, 2023, 7:41 PM IST

ಸೇನಾ ನೇಮಕಾತಿಗೆ ಆನ್​ಲೈನ್​ ಪರೀಕ್ಷೆ - ಕರ್ನಲ್​ ಕೆ ಸಂದೀಪ್​ ಕುಮಾರ್ ಮಾಹಿತಿ - ಆನ್​ಲೈನ್​ ಪರೀಕ್ಷೆ ಬಳಿಕ ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ

Etv Bharat
Etv Bharat

ಭಾರತೀಯ ಸೇನೆ ಸೇರಲು ಇನ್ನು ಆನ್​ಲೈನ್​ ಪರೀಕ್ಷೆ : ಹೊಸ ನಿಯಮ ಜಾರಿಗೆ

ಡಾರ್ಜಲಿಂಗ್ : ಭಾರತೀಯ ಸೇನೆಗೆ ಸೇರಲು ಇನ್ಮುಂದೆ ಎಲ್ಲಾ ಅಭ್ಯರ್ಥಿಗಳು ಕಂಪ್ಯೂಟರ್​ ಆಧಾರಿತ ಆನ್​ಲೈನ್​ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಎಂದು ಭಾರತೀಯ ಸೇನೆಯ ನೇಮಕಾತಿ ವಿಭಾಗದ ಮಹಾನಿರ್ದೇಶಕ ಕರ್ನಲ್​ ಕೆ ಸಂದೀಪ್​ ಕುಮಾರ್​ ಹೇಳಿದ್ದಾರೆ. ಇವತ್ತಿನಿಂದ ಈ ಪ್ರಕ್ರಿಯೆಯು ಜಾರಿಗೆ ಬಂದಿದೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.

ಸೇನಾ ನೇಮಕಾತಿಗೆ ಆನ್​ಲೈನ್​ ಪರೀಕ್ಷೆ : ಉತ್ತರ ಬಂಗಾಳದ ಭಾರತೀಯ ಸೇನೆಯ ಸೇವಕ್​ ಮಿಲಿಟರಿ ಸ್ಟೇಷನ್​ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಯಾರು ಸೇನೆ ಸೇರಲು ಬಯಸುತ್ತಾರೋ ಅವರು ಮೊದಲು ಕಂಪ್ಯೂಟರ್ ಆಧಾರಿತ ಆನ್​ಲೈನ್​ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : ದೇಶದಲ್ಲೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಅಗ್ನಿವೀರ್ ವಾಯು ಸೇನೆ ಅಭ್ಯರ್ಥಿಗಳಿಗೆ ತರಬೇತಿ ಪ್ರಾರಂಭ

ಸದ್ಯದ ಪರಿಸ್ಥಿತಿಯಲ್ಲಿ ತಂತ್ರಜ್ಞಾನವು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಈ ಮೊದಲು ಸೇನಾ ನೇಮಕಾತಿ ಸಮಯದಲ್ಲಿ ದೈಹಿಕ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಇದೀಗ ಇದನ್ನು ಬದಲಾಯಿಸಲಾಗಿದೆ. ಇನ್ಮುಂದೆ ಸೇನಾ ನೇಮಕಾತಿಯ ಮೊದಲ ಹಂತವಾಗಿ ಆನ್‌ಲೈನ್ ಪರೀಕ್ಷೆ ನಡೆಯುತ್ತದೆ. ಈ ಆನ್​ಲೈನ್​ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ. ಅರ್ಜಿದಾರರು ಆನ್​ಲೈನ್​ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ 250 ರೂಪಾಯಿ ಶುಲ್ಕವನ್ನು ಪಾವತಿಸಬೇಕು. ಬಳಿಕ ದೈಹಿಕ ಪರೀಕ್ಷೆ ನಡೆಯಲಿದೆ ಎಂದು ವಿವರಿಸಿದರು.

ಈ ಹಿಂದೆ ಸೇನಾ ನೇಮಕಾತಿಗೆ ವಿವಿಧೆಡೆ ಸೇನಾ ನೇಮಕಾತಿ ರ‍್ಯಾಲಿಗಳನ್ನು ನಡೆಸಲಾಗುತ್ತಿತ್ತು. ಇನ್ನು ಆನ್​ಲೈನ್​ ಪರೀಕ್ಷೆಗಳನ್ನು ಮಾಡುವುದರಿಂದ ಈ ರ‍್ಯಾಲಿಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಕರ್ನಲ್​ ಸಂದೀಪ್​ ಕುಮಾರ್​​ ಮಾಹಿತಿ ನೀಡಿದರು.

ಅಗ್ನಿವೀರ್​ಗೆ ಅರ್ಜಿ ಸಲ್ಲಿಸಲು ಅವಕಾಶ :​ ಅಗ್ನಿಪಥ್​ ಯೋಜನೆಯಡಿಯಲ್ಲಿ ಫೆಬ್ರವರಿ 16 ರಿಂದ ಮಾರ್ಚ್ 15 ರವರೆಗೆ ಭಾರತೀಯ ಸೇನೆಯಲ್ಲಿ ಅಗ್ನಿವೀರ್​ಗೆ ಆನ್‌ಲೈನ್ ಅರ್ಜಿಗಳನ್ನು ಕರೆಯಲಾಗಿದೆ. ಇದಕ್ಕೆ ಸೇನಾ ಆಕಾಂಕ್ಷಿಗಳು www.joinindianarmy.nic.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ದೇಶದ ವಿವಿಧೆಡೆ ಆನ್​ಲೈನ್​ ಪರೀಕ್ಷೆ : ಅರ್ಜಿದಾರರ ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆಯನ್ನು ಭಾರತದ ವಿವಿಧ ಭಾಗಗಳಲ್ಲಿ ನಡೆಸಲಾಗುತ್ತದೆ. ಉತ್ತರ ಬಂಗಾಳದ ಆನ್‌ಲೈನ್ ಆಧಾರಿತ ಕಂಪ್ಯೂಟರ್ ಪರೀಕ್ಷೆಯು ಸಿಲಿಗುರಿ ಸೇನಾ ಶಿಬಿರದಲ್ಲಿ ನಡೆಯಲಿದೆ. ಸಿಕ್ಕೀಂನ ಗ್ಯಾಂಗ್ಟಕ್ ನಲ್ಲಿ ಆನ್​ಲೈನ್​ ಪರೀಕ್ಷಾ ಕೇಂದ್ರ ಇರಲಿದೆ.

ಈ ಆನ್‌ಲೈನ್ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು ಮಾತ್ರ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಕರೆಯಲಾಗುವುದು. ಅಲ್ಲದೇ ಯುವಕ-ಯುವತಿಯರನ್ನು ಸೇನೆಗೆ ಸೇರುವಂತೆ ಪ್ರೋತ್ಸಾಹಿಸಲು ವಿವಿಧ ಶಾಲಾ-ಕಾಲೇಜುಗಳಲ್ಲಿ ಅಭಿಯಾನ ಆರಂಭಿಸಲಾಗಿದೆ. ಈ ಉದ್ದೇಶಕ್ಕಾಗಿ ಹೆಲ್ಪ್ ಡೆಸ್ಕ್ ಸಂಖ್ಯೆಯನ್ನು ಪ್ರಾರಂಭಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಬೆಳ್ಳಂಬೆಳಗ್ಗೆ ನಕ್ಸಲರು - ಭದ್ರತಾ ಪಡೆ ಮಧ್ಯೆ ಗುಂಡಿನ ದಾಳಿ.. ಮೂವರ ಯೋಧರು ಹುತಾತ್ಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.