ETV Bharat / bharat

ಏರ್‌ ಇಂಡಿಯಾ ಸಿಇಒ, ಎಂಡಿ ಆಗಿ ಕ್ಯಾಂಪ್‌ಬೆಲ್‌ ವಿಲ್ಸನ್‌ ನೇಮಕ

author img

By

Published : May 13, 2022, 7:43 AM IST

ಟಾಟಾ ಸನ್ಸ್ ಸಂಸ್ಥೆಯು ಕ್ಯಾಂಪ್‌ಬೆಲ್ ವಿಲ್ಸನ್ ಅವರನ್ನು ಏರ್ ಇಂಡಿಯಾದ ಎಂಡಿ ಮತ್ತು ಸಿಇಒ ಆಗಿ ನೇಮಕ ಮಾಡಿದೆ.

Campbell Wilson
ಕ್ಯಾಂಪ್‌ಬೆಲ್‌ ವಿಲ್ಸನ್‌

ನವದೆಹಲಿ: ಕ್ಯಾಂಪ್‌ಬೆಲ್‌ ವಿಲ್ಸನ್‌ ಅವರು ಏರ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ(ಎಂಡಿ) ನೇಮಕವಾಗಿದ್ದಾರೆ. ಟಾಟಾ ಸನ್ಸ್‌ ಒಡೆತನದ ಏರ್‌ ಇಂಡಿಯಾ ಬೋರ್ಡ್‌ ನೇಮಕಾತಿ ಬಗ್ಗೆ ಘೋಷಣೆ ಮಾಡಿದೆ.

ವಿಲ್ಸನ್‌ (50) ಪ್ರಸ್ತುತ ಸಿಂಗಾಪುರ್‌ ಏರ್‌ಲೈನ್ಸ್‌ ಒಡೆತನದ ಅಂಗಸಂಸ್ಥೆಯಾದ ಸ್ಕೂಟ್‌ನ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ವಾಯುಯಾನ ಉದ್ಯಮದಲ್ಲಿ ಸುಮಾರು 26 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. ಫೆಬ್ರವರಿಯಲ್ಲಿ ಟರ್ಕಿಶ್‌ ಏರ್‌ಲೈನ್ಸ್‌ನ ಇಲ್ಕರ್‌ ಐಸಿ ಅವರನ್ನು ಏರ್‌ ಇಂಡಿಯಾದ ಸಿಇಒ ಹಾಗೂ ಎಂಡಿಯಾಗಿ ಟಾಟಾ ಸನ್ಸ್‌ ಘೋಷಣೆ ಮಾಡಿತ್ತು. ಆದರೆ ಭಾರತಕ್ಕೆ ಸಂಬಂಧಿಸಿದಂತೆ ಅವರ ಅಭಿಪ್ರಾಯಗಳು ವಿವಾದವೆಬ್ಬಿಸಿದ ಕಾರಣ ಹುದ್ದೆ ಸ್ವೀಕರಿಸಲು ನಿರಾಕರಿಸಿದ್ದರು.

'ಕ್ಯಾಂಪ್‌ಬೆಲ್‌ ಅವರನ್ನು ಏರ್ ಇಂಡಿಯಾಕ್ಕೆ ಸ್ವಾಗತಿಸಲು ನಾನು ಸಂತೋಷಪಡುತ್ತೇನೆ. ಅವರು ಪ್ರಮುಖ ಜಾಗತಿಕ ಮಾರುಕಟ್ಟೆಗಳಲ್ಲಿ ಹಲವಾರು ಕಾರ್ಯಗಳಲ್ಲಿ ಕೆಲಸ ಮಾಡಿದ ಉದ್ಯಮದ ಅನುಭವಿ. ಇದಲ್ಲದೆ, ಏರ್ ಇಂಡಿಯಾ ಅವರ ಹೆಚ್ಚುವರಿ ಅನುಭವದಿಂದ ಪ್ರಯೋಜನ ಪಡೆಯುತ್ತದೆ. ಏಷ್ಯಾದಲ್ಲಿ ವಿಶ್ವ ದರ್ಜೆಯ ವಿಮಾನಯಾನ ಸಂಸ್ಥೆಯನ್ನು ನಿರ್ಮಿಸುವಲ್ಲಿ ಅವರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ' ಎಂದು ಏರ್ ಇಂಡಿಯಾದ ಅಧ್ಯಕ್ಷ ಎನ್. ಚಂದ್ರಶೇಖರನ್ ಹೇಳಿದ್ದಾರೆ.

ಇದನ್ನೂ ಓದಿ: Air India ಉಳಿಕೆ ಆಸ್ತಿ, ಹೊಣೆಗಾರಿಕೆ ಕಂಪನಿಗೆ ₹62 ಸಾವಿರ ಕೋಟಿ; ಸಂಸತ್‌ ಅನುಮನೋದನೆ ಕೋರಿದ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.