ETV Bharat / bharat

ತೆಲಂಗಾಣ ಸಿಎಂ ಪುತ್ರಿ ಕವಿತಾ ಇಡಿ ವಿಚಾರಣೆ: ಬಿಆರ್‌ಎಸ್-ಬಿಜೆಪಿ ಪೋಸ್ಟರ್ ವಾರ್

author img

By

Published : Mar 16, 2023, 8:16 AM IST

Updated : Mar 16, 2023, 4:55 PM IST

ತೆಲಂಗಾಣ ಸಿಎಂ ಕೆಸಿಆರ್ ಅವರ​ ಪುತ್ರಿ ಕವಿತಾ ಅವರನ್ನು ಎರಡನೇ ಬಾರಿಗೆ ಇಡಿ ವಿಚಾರಣೆಗೆ ಕರೆದಿದೆ. ಇದಕ್ಕೆ ತೀವ್ರ ಅಸಮಾಧಾನಗೊಂಡಿರುವ ಬಿಆರ್​ಎಸ್​ ಪಕ್ಷದ ಕಾರ್ಯಕರ್ತರು ಬಿಜೆಪಿ ನಾಯಕರ ವಿರುದ್ಧ ಪೋಸ್ಟರ್​ ವಾರ್​ ಆರಂಭಿಸಿದ್ದಾರೆ.

ಬಿಆರ್‌ಎಸ್ ಬಿಜೆಪಿ ಪೋಸ್ಟರ್ ವಾರ್
ಬಿಆರ್‌ಎಸ್ ಬಿಜೆಪಿ ಪೋಸ್ಟರ್ ವಾರ್

ಹೈದರಾಬಾದ್ (ತೆಲಂಗಾಣ): ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ರಾವ್​ ಅವರ ಪುತ್ರಿ, ಎಂಎಲ್​ಸಿ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸುತ್ತಿರುವುದು ಬಿಆರ್​ಎಸ್​ ಮತ್ತು ಬಿಜೆಪಿ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಬಿಆರ್​ಎಸ್​ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರನ್ನು ಗುರಿಯಾಗಿಸಿ ಪೋಸ್ಟರ್​ ವಾರ್​ ಆರಂಭಿಸಿದ್ದಾರೆ.

ಅಮಿತ್​ ಶಾ ಭೇಟಿ ವೇಳೆ ಹಾಕಲಾಗಿದ್ದ ಪೋಸ್ಟರ್
ಅಮಿತ್​ ಶಾ ಭೇಟಿ ವೇಳೆ ಹಾಕಲಾಗಿದ್ದ ಪೋಸ್ಟರ್

ಹೈದರಾಬಾದ್‌ನ ಎರಡು ಸ್ಥಳಗಳಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಚಿತ್ರವುಳ್ಳ ಪೋಸ್ಟರ್‌ಗಳನ್ನು ಅಂಟಿಸಿದ್ದು, 'ಕಾಣೆಯಾಗಿದ್ದಾರೆ' ಎಂದು ತಲೆಬರಹ ನೀಡಲಾಗಿದೆ. ಅಲ್ಲದೆ, "ಶಾಸಕರನ್ನು ಖರೀದಿ ಮಾಡುವಲ್ಲಿ ಈತ ಸಿದ್ಧಹಸ್ತ. ಈತನನ್ನು ಹುಡುಕಿಕೊಟ್ಟಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 15 ಲಕ್ಷ ರೂಪಾಯಿ ಭರವಸೆ ನೀಡಿದ್ದಾರೆ" ಎಂದು ಗೇಲಿ ಮಾಡಲಾಗಿದೆ.

ಪ್ರಧಾನಿ ಮೋದಿ ವಿರುದ್ಧದ ಬ್ಯಾನರ್​
ಪ್ರಧಾನಿ ಮೋದಿ ವಿರುದ್ಧದ ಬ್ಯಾನರ್​

ಇದನ್ನು ಓದಿ: ದೆಹಲಿ ಮದ್ಯ ನೀತಿ ಹಗರಣ: ಇಂದು ಇಡಿ ವಿಚಾರಣೆಗೆ ಹಾಜರಾಗದ ಕೆಸಿಆರ್​ ಪುತ್ರಿ ಕವಿತಾ

ಅಮಿತ್​ ಶಾಗೂ ಗೇಲಿ ಪೋಸ್ಟರ್​: ಕೆಲವು ದಿನಗಳ ಹಿಂದೆ, ಸಿಐಎಸ್‌ಎಫ್ ಸಂಸ್ಥಾಪನಾ ದಿನದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೈದರಾಬಾದ್‌ಗೆ ಭೇಟಿ ನೀಡುವ ಮೊದಲು, ಬಿಆರ್‌ಎಸ್ ಕಾರ್ಯಕರ್ತರು ವ್ಯಂಗ್ಯ ಪೋಸ್ಟರ್​ ಮೂಲಕ ಸ್ವಾಗತ ಬ್ಯಾನರ್ ಹಾಕಿದ್ದರು. ಬೇರೆ ಬೇರೆ ಪಕ್ಷಗಳಿಂದ ಬಿಜೆಪಿ ಸೇರ್ಪಡೆಗೊಂಡ ನಾಯಕರು, ವಿವಿಧ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ನಾಯಕರ ಫೋಟೋವನ್ನು ಡಿಟರ್ಜೆಂಟ್ ಪೌಡರ್ ಬ್ರಾಂಡ್ ಆದ ನಿರ್ಮಾ ಹುಡುಗಿಯ ಮುಖಕ್ಕೆ ಅಂಟಿಸಿ ಗೇಲಿ ಮಾಡಿದ್ದರು.

ನಿರ್ಮಾ ಜಾಹೀರಾತಿನ ಹುಡುಗಿಯ ಮುಖಕ್ಕೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಅಸ್ಸೋಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ, ನಾರಾಯಣ ರಾಣೆ, ಸುಜನಾ ಚೌಧರಿ, ಕರ್ನಾಟಕದ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಸೇರಿದಂತೆ ವಿವಿಧ ನಾಯಕರ ಫೋಟೋಗಳನ್ನು ಅಂಟಿಸಲಾಗಿತ್ತು. ಈ ಡಿಟರ್ಜೆಂಟ್ ಪೋಸ್ಟರ್‌ಗಳು ಹೈದರಾಬಾದ್‌ನಾದ್ಯಂತ ಕಂಡುಬಂದಿದ್ದವು. ಡಿಟರ್ಜೆಂಟ್ ಬಳಸಿದ ನಂತರ ನಾಯಕರ ಕೊಳಕು ಬಿಳಿ ಟಿ ಶರ್ಟ್‌ಗಳಿಗೆ ಕೇಸರಿ ಬಣ್ಣ ಅಂಟಿದೆ ಎಂದು ಅಡಿ ಬರಹ ನೀಡಲಾಗಿತ್ತು.

ದೆಹಲಿ ಮದ್ಯ ನೀತಿ ಹಗರಣದಲ್ಲಿ ತೆಲಂಗಾಣ ಸಿಎಂ ಕೆಸಿಆರ್​ ಪುತ್ರಿ ಕವಿತಾ ಅವರನ್ನು ಇಡಿ ಎರಡನೇ ಬಾರಿಗೆ ವಿಚಾರಣೆಗೆ ಕರೆದಿದೆ. ಪ್ರಕರಣದ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಕವಿತಾ ಅವರ ಹೆಸರು ಉಲ್ಲೇಖವಾಗಿಲ್ಲ. ಆದರೆ ಪ್ರಕರಣದಲ್ಲಿ ಭಾಗಿಯಾದ ಕೆಲವು ವ್ಯಕ್ತಿಗಳ ಹೇಳಿಕೆಗಳ ಆಧಾರದ ಮೇಲೆ ಕವಿತಾ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಇಡಿ ವಿಚಾರಣೆಯನ್ನು ಪ್ರಶ್ನಿಸಿ ಎಂಎಲ್​ಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅದು ಕೋರ್ಟ್​ನಲ್ಲಿ ತಿರಸ್ಕೃತಗೊಂಡಿದೆ.

ಇದನ್ನೂ ಓದಿ: "ಮುಝೇ ಚಲ್ತೆ ಜಾನಾ ಹೈ..": ಬಿಜೆಪಿಯಿಂದ ಮೋದಿ ರಾಜಕೀಯ ಪಯಣದ ವಿಶೇಷ ವಿಡಿಯೋ

ಇದನ್ನೂ ಓದಿ: ಸ್ನೂಪಿಂಗ್ ಕೇಸ್: ಮನೀಶ್ ಸಿಸೋಡಿಯಾಗೆ ಮತ್ತೊಂದು ಸಂಕಷ್ಟ, ಎಫ್‌ಐಆರ್ ದಾಖಲಿಸಿದ ಸಿಬಿಐ

Last Updated : Mar 16, 2023, 4:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.