ETV Bharat / bharat

ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಅಣ್ಣಾಮಲೈ ವಿಶ್ವಾಸ

author img

By

Published : May 12, 2023, 7:46 PM IST

Updated : May 12, 2023, 7:52 PM IST

ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಅಣ್ಣಾಮಲೈ ವಿಶ್ವಾಸ
ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಅಣ್ಣಾಮಲೈ ವಿಶ್ವಾಸ

ಬಿಜೆಪಿ ಮುಖಂಡ ಕೆ ಅಣ್ಣಾಮಲೈ ತಮ್ಮ ಪಕ್ಷವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆಗೂ ಮುನ್ನ ಚೆನ್ನೈನಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಚೆನ್ನೈ (ತಮಿಳುನಾಡು): ಮೇ 13 ರಂದು (ನಾಳೆ) ಹೊರ ಬೀಳುವ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವು ಬಿಜೆಪಿ ಪಕ್ಷದ ಪರವಾಗಿರಲಿದ್ದು ಈ ಮೂಲಕ ಹರಿದಾಡುತ್ತಿರುವ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಿದೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದರು.

  • #WATCH | I am very confident tomorrow Karnataka BJP is going to break two jinx. One, after 1985, a political party has not come back to power again twice in succession and second that BJP Karnataka has not crossed 113 on our own till now. We are very confident when BJP is… pic.twitter.com/3YwWgwQaPf

    — ANI (@ANI) May 12, 2023 " class="align-text-top noRightClick twitterSection" data=" ">

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ಇಂದು ಚೆನ್ನೈನಲ್ಲಿ ಮಾತನಾಡಿದ ಅವರು, ಕರ್ನಾಟಕ ಬಿಜೆಪಿ ಪಕ್ಷ ನಾಳೆ ಎರಡು ಗೊಂದಲಗಳಿಗೆ ತೆರೆ ಎಳೆಯಲಿದೆ. ಈ ಮೂಲಕ ಇತಿಹಾಸ ಕೂಡ ಬರೆಯಲಿದೆ ಎಂದರು. ಒಂದನೇಯದಾಗಿ 1985ರ ನಂತರ, ಯಾವುದೇ ರಾಜಕೀಯ ಪಕ್ಷವು ಸತತವಾಗಿ ಕರ್ನಾಟಕದಲ್ಲಿ ಎರಡು ಬಾರಿ ಪುನಃ ಅಧಿಕಾರಕ್ಕೆ ಬಂದ ಉದಾಹರಣೆ ಇಲ್ಲ. ಎರಡನೇಯದಾಗಿ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಇಲ್ಲಿಯವರೆಗೆ ತಮ್ಮದೇ ಆದ 113 ಸೀಟ್​ ಅನ್ನು ದಾಟಿಲ್ಲ.

ಇದನ್ನು ಓದಿ:ನಾಳೆ ಕೌಂಟಿಂಗ್​ಗೆ ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ಧತೆ: ಆರ್​ಪಿಡಿ ಕಾಲೇಜು ಸುತ್ತ ಪೊಲೀಸ್ ಸರ್ಪಗಾವಲು..

ಆದರೆ, ನಾಳೆಯ ಫಲಿತಾಂಶದಲ್ಲಿ ರಾಜ್ಯ ಬಿಜೆಪಿ ಪಕ್ಷ ಈ ಎರಡು ವಿಭಾಗದಲ್ಲಿ ಅಚ್ಚರಿಯ ಫಲಿತಾಂಶ ನೀಡಲಿದೆ. ಈವರೆಗಿದ್ದ ಜಂಜಾಟಕ್ಕೆ ನಾಳೆಯ ಫಲಿತಾಂಶ ತೆರೆ ಎಳೆಯಲಿದೆ. ಬಿಜೆಪಿ ನಮ್ಮದೇ ಆದ 113 ಸೀಟ್​ಗಳನ್ನು ದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಂಖ್ಯೆ ಬಗ್ಗೆ ನಮಗೆ ತುಂಬಾ ವಿಶ್ವಾಸವಿದೆ. ಹೀಗಾಗಿ ನಮಗೆ ಯಾರ ಬೆಂಬಲವನ್ನು ಕೇಳುವ ಪ್ರಶ್ನೆಯೇ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಮ್ಮದೇ ಸರ್ಕಾರ ರಚನೆ, ಹೈಕಮಾಂಡ್ ನಾಯಕರಿಗೆ ಮಾಹಿತಿ ನೀಡಿದ್ದೇನೆ: ಸಿಎಂ ಬೊಮ್ಮಾಯಿ

ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನಡೆ ಎನ್ನುವ ವರದಿಗಳು ಬಂದ ಹಿನ್ನೆಲೆಯಲ್ಲಿ ಕುಮಾರಪಾರ್ಕ್​ನಲ್ಲಿರುವ ಕಾವೇರಿಯಲ್ಲಿ ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಹತ್ವದ ಮಾತುಕತೆ ನಡೆಸಿದರು. ಮುಂದಿನ ರಾಜಕೀಯ ಲೆಕ್ಕಾಚಾರದ ಕುರಿತು ಇದೇ ವೇಳೆ ಚರ್ಚೆ ಸಹ ನಡೆಸಿದರು. ಶತಾಯಗತಾಯ ಅಧಿಕಾರ ಹಿಡಿಯಲೇಬೇಕು. ಅದಕ್ಕಾಗಿ ಮಾಡಬೇಕಾಗಿರುವ ತಂತ್ರಗಾರಿಕೆ ಕುರಿತು ಸಮಾಲೋಚನೆ ನಡೆಸಿದರು. ಒಂದಷ್ಟು ಕಡಿಮೆ ಸ್ಥಾನ ಬಂದರೂ ಸರ್ಕಾರ ರಚನೆ ಮಾಡಬೇಕು. ಅದಕ್ಕಾಗಿ ಏನೆಲ್ಲ ಮಾಡಬೇಕು ಎನ್ನುವ ಕುರಿತು ಮಾತುಕತೆ ನಡೆಸಿದ್ದಾರೆ.

ಮಾತುಕತೆ ಬಳಿಕ ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಮ್ಮ ಸ್ಟ್ಯಾಂಡ್ ಒಂದೇ. ನಮಗೆ ಸಂಪೂರ್ಣ ಬಹುಮತ ಸಿಗಲಿದೆ. ನಾವು ಮ್ಯಾಜಿಕ್ ನಂಬರ್ ತಲುಪುತ್ತೇವೆ. ಯಾವುದೇ ಕಾರಣಕ್ಕೂ ಮೈತ್ರಿ ಸಂದರ್ಭ ನಿರ್ಮಾಣವಾಗಲ್ಲ. ಹೈಕಮಾಂಡ್ ನಾಯಕರಿಗೆ ನಾನೇ ಫೋನ್ ಮಾಡಿ ಇಲ್ಲಿನ ವಾಸ್ತುಸ್ಥಿತಿ ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಅದೇ ಭರವಸೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: ಪಕ್ಷಕ್ಕಾಗಿ ಶ್ರಮ ಪಟ್ಟಿದ್ದೇನೆ, ಈಗ ನನಗೆ ಹಿರಿ-ಕಿರಿಯರ ಸಹಕಾರ ಸಿಗುವ ವಿಶ್ವಾಸ ಇದೆ: ಡಿಕೆಶಿ

Last Updated :May 12, 2023, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.