ETV Bharat / bharat

ಮದ್ಯ ಸೇವನೆ ಪರೀಕ್ಷೆಗೆ ವೈದ್ಯಕೀಯ ಸಾಧನ ಇಲ್ಲ! ಪೇಪರ್​ ಕೋನ್​ ಬಳಸಿದ ಬಿಹಾರ​ದ ವೈದ್ಯರು

author img

By ETV Bharat Karnataka Team

Published : Nov 2, 2023, 12:52 PM IST

bihar doctor used a paper cone for liquor test video goes viral
bihar doctor used a paper cone for liquor test video goes viral

ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಜಾರಿಯಲ್ಲಿದೆ. ಹೀಗಾಗಿ, ಮದ್ಯ ಮಾರಾಟ​ ಶಿಕ್ಷಾರ್ಹ ಅಪರಾಧ.

ಪಾಟ್ನಾ: ಬಿಹಾರದಲ್ಲಿ ಮದ್ಯ ನಿಷೇಧದ ನಡುವೆಯೂ ಜನರು ಅಕ್ರಮವಾಗಿ ಸೇವನೆ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದಕ್ಕಿಂತಲೂ ಮುಖ್ಯವಾಗಿ, ವಿಡಿಯೋದಲ್ಲಿ ಮದ್ಯ ಸೇವನೆ ಮಾಡಿರುವ ಮಂದಿಯ ಪರೀಕ್ಷೆಯನ್ನು ಖಚಿತಪಡಿಸುವಿಕೆಗೆ ನಡೆಸಿರುವ ತಂತ್ರ ಇದೀಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಪೂರ್ವ ಚಂಪಾರಣ್​ನ ಉಪವಿಭಾಗೀಯ ಆಸ್ಪತ್ರೆಯ ವೈದ್ಯರು, ಆರೋಪಿಗಳು ಮದ್ಯ ಸೇವನೆ ಮಾಡಿದ್ದಾರೋ ಇಲ್ಲವೋ ಎಂಬುದರ ಪರೀಕ್ಷೆಗೆ ಪೇಪರ್​ ಕೋನ್​ ಬಳಕೆ ಮಾಡಿ ಗಮನ ಸೆಳೆದಿದ್ದಾರೆ. (ಸಾಮಗ್ರಿಗಳನ್ನು ಕಟ್ಟಲು ಬಳಕೆ ಮಾಡುವ ಪೇಪರ್​ ಆಕೃತಿ)

ಪ್ರಕರಣದ ವಿವರ: ಬಿಹಾರದ ಅಬಕಾರಿ ಕಾಯ್ದೆ ಅಡಿ 2016ರಲ್ಲಿ ರಾಜ್ಯಾದ್ಯಂತ ಮದ್ಯ ಮಾರಾಟ ಮತ್ತು ಸೇವನೆ ನಿಷೇಧಿಸಲಾಗಿದೆ. ಈ ನಡುವೆಯೂ ಕೆಲವು ಅಕ್ರಮ ಮದ್ಯ ಸಾಗಾಟ ಮತ್ತು ಸೇವನೆ ಪ್ರಕರಣಗಳು ಕಂಡುಬಂದಿದ್ದು, ಇವು ಜೈಲು ಶಿಕ್ಷೆಯ ಅಪರಾಧವಾಗಿದೆ.

ಈ ನಿಷೇಧದ ನಡುವೆಯೂ ಅಕ್ಟೋಬರ್​ 30ರಂದು 11 ಮಂದಿ ಮದ್ಯ ಸೇವನೆ ಮಾಡಿರುವ ಪ್ರಕರಣ ದಾಖಲಾಗಿದೆ. ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಮದ್ಯ ಪತ್ತೆ ಮಾಡುವ ಉಸಿರು ವಿಶ್ಲೇಷಣೆ ಸಾಧನೆ ಅಥವಾ ರಕ್ತ ಪರೀಕ್ಷೆ ಸಾಧನೆ ಇಲ್ಲದೇ ಇರುವ ಕಾರಣ ವೈದ್ಯರು, ಪೇಪರ್​ ಅನ್ನು ಕೋನ್​ ರೀತಿ ಮಾಡಿ ಅದನ್ನು ಊದುವಂತೆ ತಿಳಿಸಿದ್ದಾರೆ. ಈ ಪೇಪರ್​ನಲ್ಲಿನ ವಾಸನೆಯನುಸಾರ ಅವರು ಕುಡಿದಿದ್ದಾರಾ, ಇಲ್ಲವಾ ಎಂದು ಪರೀಕ್ಷೆಗೆ ಮುಂದಾಗಿದ್ದಾರೆ.

ಈ ಪರೀಕ್ಷೆ ಮಾದರಿಯಲ್ಲಿ 9 ಮಂದಿ ಮದ್ಯ ಸೇವನೆ ಮಾಡಿರುವುದು ಕಂಡುಬಂದಿದೆ. ವೈದ್ಯಕೀಯ ಪರೀಕ್ಷೆ ಆಧಾರದ ಮೇಲೆ ರೆಕ್ಸುಲಾ ಪೊಲೀಸರುವ ಆರೋಪಿಗಳನ್ನು ಉಪ ವಿಭಾಗೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಸಾಧನಗಳಿಲ್ಲದ ಕಾರಣ ಈ ಉಪಾಯ: ನಿಯಮಗಳ ಪ್ರಕಾರ, ಕಾನೂನು ಜಾರಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಅಪರಾಧಿಗಳ ರಕ್ತ ಪರೀಕ್ಷೆಯ ವರದಿಗಳಂತೆ ವೈಜ್ಞಾನಿಕ ಪುರಾವೆಗಳನ್ನು ಪ್ರಸ್ತುತಪಡಿಸಬೇಕು. ವೈದ್ಯಕೀಯ ವರದಿಯು ರಕ್ತದಲ್ಲಿ ಕಂಡುಬರುವ ಶೇಕಡಾವಾರು ಆಲ್ಕೋಹಾಲ್ ಪ್ರಮಾಣವನ್ನು ತಿಳಿಸಬೇಕು. ಆದರೆ, ಈ ಪ್ರಕರಣದಲ್ಲಿ ಉಸಿರು ವಿಶ್ಲೇಷಕ ವರದಿ (breath-analyser) ಅಥವಾ ರಕ್ತ ಪರೀಕ್ಷೆಯ ವರದಿಗಳಾಗಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಆಸ್ಪತ್ರೆಯ ಉಪ ಸೂಪರಿಟೆಂಡೆಂಟ್​​ ಡಾ.ರಾಜೀವ್​ ರಂಜನ್​, ನಮ್ಮ ಬಳಿ ಉಸಿರು ವಿಶ್ಲೇಷಕ ಅಥವಾ ಮದ್ಯ ಪರೀಕ್ಷೆ ನಡೆಸಲು ಇತರೆ ಸೌಲಭ್ಯಗಳು ಇರಲಿಲ್ಲ. ಹೀಗಾಗಿ ವೈದ್ಯರು ಪೇಪರ್​ ಕೋನ್​ ಬಳಕೆ ಮಾಡಿದ್ದಾರೆ ಎಂದರು.

ರೆಕ್ಸುಲಾ ಪೊಲೀಸ್​ ಠಾಣೆಯ ಎಚ್​ಎಚ್​ಒ ನೀರಜ್​ ಕುಮಾರ್ ಪ್ರತಿಕ್ರಿಯಿಸಿ​, ನಮ್ಮ ಇಲಾಖೆ ಉಸಿರು ವಿಶ್ಲೇಷಕ ಸಾಧನ ನೀಡಿತು. ಆದರೆ ಅದು ಕಾರ್ಯ ನಿರ್ವಹಣೆಯಲ್ಲಿರಲಿಲ್ಲ ಎಂದಿದ್ದಾರೆ.

ಜಿಲ್ಲಾ ಸಿವಿಲ್​ ಸರ್ಜನ್​ ಡಾ.ಅಂಜನಿ ಕುಮಾರ್​ ಸಿಂಗ್ ಮಾಹಿತಿ ನೀಡಿ​, ವೈದ್ಯರು ಮದ್ಯ ಸೇವನೆ ಮಾಡಿದ್ದಾರೆ ಎಂಬ ಆರೋಪಿಗಳನ್ನು ಪೇಪರ್​​ ಕೋನ್​ ಪರೀಕ್ಷೆ ನಡೆಸಿರುವ ವಿಡಿಯೋ ನೋಡಿದ್ದೇವೆ. ನಾವು ಈ ಸಂಬಂಧ ತನಿಖೆಗೆ ಸಮಿತಿ ರಚಿಸಬೇಕಿದೆ. ಇದಾದ ಬಳಿಕ ವರದಿ ಅನುಸಾರ ಕ್ರಮ ನಡೆಸಬೇಕು ಎಂದರು. (ಐಎಎನ್​ಎಸ್​)

ಇದನ್ನೂ ಓದಿ: ಸರಯೂ ನದಿಯಲ್ಲಿ ದೋಣಿ​ ಮಗುಚಿ ನಾಲ್ವರ ಸಾವು: 14 ಪ್ರಯಾಣಿಕರು ನಾಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.