ETV Bharat / bharat

ಮಾ.7ಕ್ಕೆ ಅಯೋಧ್ಯೆಗೆ ಠಾಕ್ರೆ ಭೇಟಿ: ಜೊತೆಗೆ ರಾಹುಲ್‌ ಕರೆದೊಯ್ಯಿರಿ ಎಂದ ಬಿಜೆಪಿಗೆ ರಾವತ್ ಟಾಂಗ್

author img

By

Published : Jan 25, 2020, 12:22 PM IST

Uddhav Thackeray visit Ayodhya,ಅಯೋಧ್ಯೆಗೆ ಭೇಟಿ ನೀಡಲಿರುವ ಉದ್ಧವ್ ಠಾಕ್ರೆ
ಸಂಜಯ್ ರಾವತ್

ಮಹಾರಾಷ್ಟ್ರ ಮೈತ್ರಿ ಸರ್ಕಾರ 100 ದಿನಗಳ ಅಧಿಕಾರಾವಧಿ ಪುರ್ಣಗೊಳಿಸಿದ ನಂತರ ಸಿಎಂ ಉದ್ಧವ್ ಠಾಕ್ರೆ ಮಾರ್ಚ್ 7 ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾರ್ಚ್ 7ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಶಿವಸೇನೆ ಪಕ್ಷದ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

  • Sanjay Raut, Shiv Sena on 'BJP asking Maharashtra CM Uddhav Thackeray to take Rahul Gandhi to Ayodhya with him': Will BJP leaders take former Jammu and Kashmir CM Mehbooba Mufti with them on their visit to Ayodhya? https://t.co/l9Wg2u7ay7

    — ANI (@ANI) January 25, 2020 " class="align-text-top noRightClick twitterSection" data=" ">

ಉದ್ಧವ್ ಠಾಕ್ರೆ ಅಯೋಧ್ಯೆಗೆ ತೆರಳುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನೂ ಜೊತೆಗೆ ಕರೆದುಕೊಂಡು ಹೋಗುವಂತೆ ಬಿಜೆಪಿ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾವತ್, ಬಿಜೆಪಿ ನಾಯಕರು ಜಮ್ಮುಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿಯನ್ನು ಅಯೋಧ್ಯೆಗೆ ಕರೆದುಕೊಂಡು ಹೋಗುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದ ಮೈತ್ರಿ ಸರ್ಕಾರ ಶತದಿನ ಪೂರೈಸಿದ ನಂತರ ಉದ್ಧವ್ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮನಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ಶಿವಸೇನೆ ಈ ಹಿಂದೆ ಘೋಷಿಸಿತ್ತು. ಅದರಂತೆ ಮಾರ್ಚ್ 7 ರಂದು ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದಿದ್ದಾರೆ. ಈ ವೇಳೆ ಠಾಕ್ರೆ ಜೊತೆಯಲ್ಲಿ ಕಾಂಗ್ರೆಸ್ ಮತ್ತು ಎನ್​ಸಿಪಿ ನಾಯಕರು ಇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.