ETV Bharat / bharat

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಡಾ. ಶಿವಾಜಿರಾವ್ ಪಾಟೀಲ್ ನಿಧನ

author img

By

Published : Aug 5, 2020, 9:08 AM IST

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಡಾ. ಶಿವಾಜಿರಾವ್ ಪಾಟೀಲ್ ನೀಲಂಗೇಕರ್ ಅವರು ತಮ್ಮ 91ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಕೆಲವು ದಿನಗಳ ಹಿಂದೆ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿ, ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಅವರು ಇದೀಗ ಮೂತ್ರಪಿಂಡ ವೈಫಲ್ಯದಿಂದಾಗಿ ನಿಧನ ಹೊಂದಿದ್ದಾರೆ.

shivaji rao patil
shivaraj rao patil

ಪುಣೆ( ಮಹಾರಾಷ್ಟ್ರ): ಇಲ್ಲಿನ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಡಾ. ಶಿವಾಜಿರಾವ್ ಪಾಟೀಲ್ ನೀಲಂಗೇಕರ್ ಅವರು ತಮ್ಮ 91ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.

ಕೆಲವು ದಿನಗಳ ಹಿಂದೆ ಕೊರೊನಾ ವೈರಸ್ ಸೋಂಕಿಗೆ ಒಳಗಾದ ಅವರು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚೇತರಿಸಿಕೊಂಡ ನಂತರ ಅವರನ್ನು ಇತ್ತೀಚೆಗೆ ಮನೆಗೆ ಕಳುಹಿಸಲಾಗಿತ್ತು. 91ನೇ ವಯಸ್ಸಿನಲ್ಲಿ ಕೊರೊನಾ ಸೋಲಿಸಿದ ಅವರನ್ನು ಯೋಧನೆಂದು ಪರಿಗಣಿಸಲಾಗಿತ್ತು. ಆದರೆ ಅವರು ಮುಂಜಾನೆ 2.30ಕ್ಕೆ ಕೊನೆಯುಸಿರೆಳೆದಿದ್ದಾರೆ.

Shivajirao Patil
ಡಾ. ಶಿವಾಜಿರಾವ್ ಪಾಟೀಲ್

ನೀಲಂಗ ವಿಧಾನಸಭಾ ಕ್ಷೇತ್ರದಲ್ಲಿ ಅವರು ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ನಿಲಂಗದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಗುವುದು. ಅವರು ಫೆಬ್ರವರಿ 09, 1931ರಂದು ನೀಲಂಗದಲ್ಲಿ ಜನಿಸಿದ್ದರು. ಹೈದರಾಬಾದ್ ವಿಮೋಚನಾ ಹೋರಾಟದಲ್ಲಿ ಅವರು ಪ್ರಮುಖ ಹೋರಾಟಗಾರರಾಗಿದ್ದರು.

ಎಂ.ಎ., ಎಲ್.ಎಲ್.ಬಿ. ಶಿಕ್ಷಣ ಪಡೆದ ಅವರನ್ನು ದಾದಾಸಾಹೇಬ್ ಎಂದು ಕರೆಯಲಾಗುತ್ತಿತ್ತು. ಅವರು ರಾಜ್ಯ ಸಚಿವ ಸಂಪುಟದಲ್ಲಿ ವಿವಿಧ ಖಾತೆಗಳನ್ನು ನಿಭಾಯಿಸಿದ್ದರು. ರಾಜ್ಯದ ಹತ್ತನೇ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. 1985ರ ಜೂನ್ 03ರಿಂದ 1986ರ ಮಾರ್ಚ್ 06ರವರೆಗೆ ಅಂದರೆ ಒಂಬತ್ತು ತಿಂಗಳು ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

Shivajirao Patil
ಡಾ. ಶಿವಾಜಿರಾವ್ ಪಾಟೀಲ್

ಅವರು ಬಹಳ ಶಿಸ್ತುಬದ್ಧ ರಾಜಕಾರಣಿಯಾಗಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಅವರು ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿರಲಿಲ್ಲ. ಸಂದರ್ಶನಗಳು ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಅವರು ಯಾವಾಗಲೂ ಪ್ರಬುದ್ಧ ಉತ್ತರಗಳನ್ನು ನೀಡುತ್ತಿದ್ದರು.

ತೊಂಬತ್ತನೆಯ ವಯಸ್ಸಿನಲ್ಲಿ, ಅವರು ಕರೋನಾದಂತಹ ರೋಗವನ್ನು ಜಯಿಸಿದ್ದರು. ದುರಾದೃಷ್ಟವಶಾತ್, ಮೂತ್ರಪಿಂಡದ ವೈಫಲ್ಯದಿಂದಾಗಿ ಅವರು ನಿಧನ ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.