ETV Bharat / bharat

ಪ್ರಾಣಿ ಸಂಗ್ರಹಾಲಯಗಳಿಗೆ ಆಹಾರ ಪೂರೈಕೆ: ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್​​

author img

By

Published : Apr 21, 2020, 8:01 PM IST

SC
ಸುಪ್ರೀಂ

ದೇಶದ್ಯಾಂತ ಕೊರೊನಾ ವೈರಸ್​​ ನಿಯಂತ್ರಣಕ್ಕೆ ತರುವ ಸದುದ್ದೇಶದಿಂದ ಲಾಕ್​ಡೌನ್​ ಘೋಷಣೆ ಮಾಡಲಾಗಿದ್ದು, ಇದರಿಂದಾಗಿ ಪ್ರಾಣಿಸಂಗ್ರಹಾಲಯದಲ್ಲಿನ ಪ್ರಾಣಿಗಳಿಗೆ ಆಹಾರ ದೊರೆಯದಂತಾಗಿದೆ. ಪ್ರಾಣಿಗಳಿಗೆ ಆಹಾರ ಪೂರೈಸಬೇಕು ಎಂಬ ನಿಟ್ಟಿನಲ್ಲಿ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಪೀಠ ತಳ್ಳಿಹಾಕಿದೆ.

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಪ್ರಾಣಿಸಂಗ್ರಹಾಲಯಗಳಲ್ಲಿರುವ ಪ್ರಾಣಿಗಳಿಗೆ ಸರಿಯಾದ ಆಹಾರ ದೊರೆಯದ ಹಿನ್ನೆಲೆ, ಪ್ರಾಣಿಗಳಿಗೆ ಅವಶ್ಯವಿರುವ ಆಹಾರಗಳನ್ನು ಪೂರೈಸಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದೆ.

ಸಾಮಾಜಿಕ ಕಾರ್ಯಕರ್ತೆ ಸಂಗೀತ ದೋಗ್ರಾ, ಈ ಅರ್ಜಿ ಸಲ್ಲಿಸಿದ್ದು, ಕೊರೊನಾ ವೈರಸ್​ ಹಾಗೂ ಲಾಕ್​ಡೌನ್​ನಿಂದಾಗಿ ಪ್ರಾಣಿಗಳಿಗೆ ಸರಿಯಾಗಿ ಆಹಾರ ದೊರೆಯುತ್ತಿಲ್ಲ. ಈ ಹಿನ್ನೆಲೆ ಪ್ರಸ್ತುತ ಮೃಗಾಲಯದಲ್ಲಿರುವ ಪ್ರಾಣಿಗಳಿಗೆ ನಾನು ಪ್ರತಿನಿತ್ಯ ಮಾಂಸವನ್ನು ನೀಡುತ್ತಿದ್ದೇನೆ ಎಂದು ಅರ್ಜಿಯಲ್ಲಿ ನಮೂದಿಸಿದ್ದರು.

ನ್ಯಾಯಮೂರ್ತಿ ಎಸ್.ಕೆ.ಕೌಲ್, ಈ ಅರ್ಜಿ ವಿಚಾರಣೆ ನಡೆಸಿ, ಮಾನವ ಜೀವಗಳಿಗೆ ಈ ಕೊರೊನಾ ವೈರಸ್​​ನಿಂದಾಗಿ ತೊಂದರೆಯುಂಟಾಗಿ ಕಷ್ಟಪಡುತ್ತಿದ್ದಾರೆ. ಈ ವೇಳೆ ಮನುಷ್ಯರು ಹಾಗೂ ಮೃಗಾಲಯದ ಪ್ರಾಣಿಗಳನ್ನು ಸಹ ನೋಡಿಕೊಳ್ಳಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾದಿಂದಾಗಿ ಮಾನವನಿಗೆ ಹೆಚ್ಚು ಸಮಸ್ಯೆ ಉಂಟಾಗಿದ್ದು, ಪ್ರಾಣಿಗಳಿಗೂ ತೀವ್ರ ಸಮಸ್ಯೆಯಾದರೆ ಸರ್ಕಾರ ಈ ಬಗ್ಗೆ ಗಮನಹರಿಸಿ ಪ್ರಾಣಿಗಳನ್ನು ನೋಡಿಕೊಳ್ಳುತ್ತದೆ ಎಂದು ಉಲ್ಲೇಖಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.