ETV Bharat / bharat

'ಕಾಂಗ್ರೆಸ್​ನಿಂದ ಪಿ.ವಿ. ನರಸಿಂಹರಾವ್​ ಮೂಲೆಗುಂಪು': ಸೋನಿಯಾ, ರಾಹುಲ್​ ಕ್ಷಮೆಗೆ ಮೊಮ್ಮಗನ ಪಟ್ಟು

author img

By

Published : Jun 28, 2019, 5:00 PM IST

ಪಿ.ವಿ. ನರಸಿಂಹರಾವ್​

ಬಿಜೆಪಿಯೊಂದಿಗೆ ಗುರ್ತಿಸಿಕೊಂಡಿರುವ ಪಿ.ವಿ. ನರಸಿಂಹರಾವ್​ ಅವರ ಮೊಮ್ಮಗ ಎನ್​.ವಿ. ಸುಭಾಷ್ , ಕಾಂಗ್ರೆಸ್ ಪಕ್ಷ ನರಸಿಂಹರಾವ್ ಅವರ ಜನ್ಮದಿನದಂದು ಗೌರವ ಸಲ್ಲಿಸಿಲ್ಲ. ಈ ತಪ್ಪಿಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಹೈದರಾಬಾದ್​: ಕಾಂಗ್ರೆಸ್​ ಪಕ್ಷವು ನೆಹರೂ - ಗಾಂಧಿ ಕುಟುಂಬವನ್ನೇ ಕೇಂದ್ರೀಕರಿಸಿ, ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್​ ಅವರನ್ನು ಮೂಲೆಗುಂಪು ಮಾಡಿತು ಎಂದು ಅವರ ಮೊಮ್ಮಗ ಎನ್​.ವಿ. ಸುಭಾಷ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯೊಂದಿಗೆ ಗುರ್ತಿಸಿಕೊಂಡಿರುವ ಅವರು, ಕಾಂಗ್ರೆಸ್ ಪಕ್ಷ ನರಸಿಂಹರಾವ್ ಅವರ ಜನ್ಮದಿನದಂದು ಗೌರವ ಸಲ್ಲಿಸಿಲ್ಲ. ಈ ತಪ್ಪಿಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದೂ ಆಗ್ರಹಿಸಿದ್ದಾರೆ.

NV Subhash
ಪಿ.ವಿ. ನರಸಿಂಹರಾವ್​ ಅವರ ಮೊಮ್ಮಗ ಎನ್​.ವಿ. ಸುಭಾಷ್

1996ರಲ್ಲಿ ಕಾಂಗ್ರೆಸ್​ ಪರಾಭವಗೊಂಡ ನಂತರ ನರಸಿಂಹರಾವ್ ಹಾಗೂ ಅವರ ಸರ್ಕಾರದ ಯೋಜನೆಗಳು ಕಡೆಗಣಿಸಲ್ಪಟ್ಟವು. ನೆಹರೂ - ಗಾಂಧಿ ಕುಟುಂಬದ ಕಡೆಗೆ ಹೆಚ್ಚಿನ ಗಮನ ಹರಿಸಿ, ಇವರನ್ನು ಮೂಲೆಗುಂಪು ಮಾಡಿತು. ಕಾಂಗ್ರೆಸ್​ನ ಎಲ್ಲ ವೈಫಲ್ಯಗಳನ್ನು ನರಸಿಂಹರಾವ್​ ಮೇಲೆ ಹಾಕಲಾಯ್ತು. ಅದೇ ಅವರ ಸಾಧನೆಗಳನ್ನು ಮುನ್ನೆಲೆಗೆ ತರಲಿಲ್ಲ ಎಂದು ಆರೋಪಿಸಿದರು.

ನರಸಿಂಹ ರಾವ್ ಅವರ 98ನೇ ಜನ್ಮದಿನದಂದು ಯಾವೊಬ್ಬ ತೆಲಂಗಾಣದ ಕಾಂಗ್ರೆಸಿಗನೂ ಅವರಿಗೆ ಗೌರವ ಸಲಿಸಲಿಲ್ಲ. ಆದರೆ ಬಿಜೆಪಿ, ಟಿಆರ್​ಎಸ್​ ಹಾಗೂ ಟಿಡಿಪಿ ಪಕ್ಷದವರು ಗೌರವ ಸಲ್ಲಿಸಿದರು. 1991ರಲ್ಲಿ ರಾಜೀವ್ ಹತ್ಯೆ ನಂತರ, ಅಂದಿನ ವಿತ್ತ ಸಚಿವ ಮನಮೋಹನ್​ ಸಿಂಗ್ ಜತೆಗೆ ನರಸಿಂಹರಾವ್ ದೇಶಕ್ಕೆ ನೀಡಿದ ಕೊಡುಗೆ ಅನನ್ಯ. ಇದನ್ನು ಪ್ರಧಾನಿ ಮೋದಿ ಸ್ಮರಿಸಿದರು. ಆದರೆ ಕಾಂಗ್ರೆಸ್​ಗೆ ಕೃತಜ್ಞತೆ ಇಲ್ಲ ಎಂದು ಹೇಳಿದರು.

_______

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.