ETV Bharat / bharat

ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹನ 100ನೇ ಜನ್ಮದಿನಕ್ಕೆ ಗೂಗಲ್​ ಡೂಡಲ್

author img

By

Published : Aug 12, 2019, 6:29 AM IST

Google Doodle Honours

ಖ್ಯಾತ ವಿಜ್ಞಾನಿ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ ವಿಕ್ರಮ್ ಸಾರಾಭಾಯಿ​​ ಅವರ 100ನೇ ಜನ್ಮದಿನಕ್ಕೆ ಸೋಮವಾರ ಗೂಗಲ್​ ಡೂಡಲ್​ ಗೌರವ ಸಲ್ಲಿಸಿದೆ.

ನವದೆಹಲಿ: ಖ್ಯಾತ ವಿಜ್ಞಾನಿ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ ವಿಕ್ರಮ್ ಸಾರಾಭಾಯಿ​​ ಅವರ 100ನೇ ಜನ್ಮದಿನಕ್ಕೆ ಸೋಮವಾರ ಗೂಗಲ್​ ಡೂಡಲ್​ ಗೌರವ ಸಲ್ಲಿಸಿದೆ.

ವಿಶ್ವ ಕಿರಣಗಳ ತೀಕ್ಷ್ಣತೆಯಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಸಂಶೋಧನೆ ನಡೆಸಿದರು. ಹಾಗೂ ಅವುಗಳ ಕಾಲ ತೀಕ್ಷ್ಣತೆ ದಿನಕ್ಕೆ 2 ಬಾರಿ ಬದಲಾಗುವುದನ್ನು ಕಂಡುಹಿಡಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಜಗತ್ತಿನ ಹಲವು ರಾಷ್ಟ್ರಗಳ ಉಪಗ್ರಹವನ್ನು ಇಸ್ರೊ ಕಕ್ಷೆಗೆ ಸೇರಿಸುತ್ತಿದೆ. ಈ ಸಾಧನೆಗಳಿಗೆ ಮೂಲ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಕಾರಣ.

Google Doodle Honours ISRO Founder Vikram Sarabhai's 100th Birthday
ವಿಕ್ರಮ್ ಸಾರಾಭಾಯಿ​​

ಸಾರಾಭಾಯಿ ಅವರು ಸ್ವಂತ ಹಣ ಖರ್ಚು ಮಾಡಿ ತಿರುವನಂತಪುರದಲ್ಲಿ ಬಾಹ್ಯಾಕಾಶ ಕುರಿತು ಸ್ವತಂತ್ರವಾಗಿ ಸಂಶೋಧನಾ ಸಂಸ್ಥೆ ಆರಂಭಿಸಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಅಂದಿನ ಪ್ರಯತ್ನವೇ ಇಂದಿನ ಬೆಳವಣಿಗೆಗೆ ಮೈಲಿಗಲ್ಲಾಗಿದೆ. ಅಹಮದಾಬಾದ್​ನಲ್ಲಿ ಸ್ಪೇಸ್ ಅಪ್ಲಿಕೇಶನ್ ಸೆಂಟರ್, ಐಐಎಮ್ ಸ್ಥಾಪನೆ, ಇಸ್ರೊ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ಸೇರಿದಂತೆ ಹತ್ತು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.

ವಿಕ್ರಮ್ ಸಾರಾಭಾಯಿ ಅವರು 1919ರ ಆಗಸ್ಟ್ 12 ಜನಿಸಿದರು. ತಂದೆ ಅಂಬಾಲಾ ಸಾರಾಭಾಯಿ, ತಾಯಿ

: ಸರಳಾ ದೇವಿ. ಇವರು 1971ರ ಡಿಸೆಂಬರ್ 30ರಲ್ಲಿ ಮೃತಪಟ್ಟರು.

ಪ್ರಶಸ್ತಿಗಳು ಈ ಕೆಳಗಿನಂತಿವೆ.

  1. 1962 -ಭಾರತ ಸರ್ಕಾರದ ಭಾಟ್ನಾಗರ್ ಸ್ಮಾರಕ ಪಾರಿತೋಷಕ
  2. 1966 - ಪದ್ಮಭೂಷಣ
  3. 1972 -(ಮರಣೋತ್ತರ)ಪದ್ಮವಿಭೂಷಣ
Intro:Body:

cricket


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.