ETV Bharat / bharat

ಹೊಸ ಸಂಸತ್ ಭವನ ನಿರ್ಮಾಣ: ಆನ್​ಲೈನ್​ ಬಿಡ್​ಗೆ ಅರ್ಹತೆ ಪಡೆದ 3 ಸಂಸ್ಥೆಗಳು

author img

By

Published : Aug 13, 2020, 12:05 PM IST

Three firms in race to build new Parliament
ಹೊಸ ಸಂಸತ್ ಭವನ ನಿರ್ಮಾಣ

ಹೊಸ ಸಂಸತ್ ಭವನ ನಿರ್ಮಾಣ ಒಪ್ಪಂದ ಪಡೆಯಲು ಲಾರ್ಸೆನ್ ಮತ್ತು ಟರ್ಬೋ( ಎಲ್ & ಟಿ), ಶಪೂರ್ಜಿ ಪಲ್ಲೊಂಜಿ & ಪ್ರೈವೇಟ್ ಲಿಮಿಟೆಡ್ ಮತ್ತು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಆನ್‌ಲೈನ್ ಬಿಡ್‌ಗಳನ್ನು ಸಲ್ಲಿಸಲು ಅರ್ಹತೆ ಪಡೆದುಕೊಂಡಿವೆ.

ನವದೆಹಲಿ: ಹೊಸ ಸಂಸತ್ ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ಪಡೆಯಲು ಸ್ಪರ್ಧೆಯಲ್ಲಿದ್ದ ಏಳು ಕಂಪನಿಗಳ ಪೈಕಿ ಮೂರು ಕಂಪನಿಗಳನ್ನು ಆನ್‌ಲೈನ್ ಹಣಕಾಸು ಬಿಡ್ ಸಲ್ಲಿಸಲು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಲೋಕೋಪಯೋಗಿ ಇಲಾಖೆ ತಿಳಿಸಿದೆ.

ಹೊಸ ಸಂಸತ್ ಭವನ ನಿರ್ಮಾಣ ಒಪ್ಪಂದ ಪಡೆಯಲು ಲಾರ್ಸೆನ್ ಮತ್ತು ಟರ್ಬೋ (ಎಲ್ & ಟಿ), ಶಪೂರ್ಜಿ ಪಲ್ಲೊಂಜಿ & ಪ್ರೈವೇಟ್ ಲಿಮಿಟೆಡ್ ಮತ್ತು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಆನ್‌ಲೈನ್ ಹಣಕಾಸು ಬಿಡ್‌ಗಳನ್ನು ಸಲ್ಲಿಸಲು ಅರ್ಹತೆ ಪಡೆದುಕೊಂಡಿವೆ. ಸಂಸತ್ತಿನ ಕಟ್ಟಡವನ್ನು ಹೊಸದಾಗಿ ಈಗಿರುವ ಸಂಸತ್ ಭವನದ 118 ನೇ ಫ್ಲಾಟ್​ನಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದನ್ನು ಕೇಂದ್ರ ವಿಸ್ಟಾ ಮರು ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಲಾಗಿದೆ.

ಆಗಸ್ಟ್ 10 ರ ಸಿಪಿಡಬ್ಲ್ಯೂಡಿಯ ಅನುಬಂಧ ಪತ್ರ ಸಂಖ್ಯೆ 23 ರ ಪ್ರಕಾರ, ಒಟ್ಟು ಏಳು ಪೂರ್ವ ಅರ್ಹತಾ ಟೆಂಡರ್‌ಗಳನ್ನು ಸ್ವೀಕರಿಸಲಾಗಿದೆ. ಇವುಗಳನ್ನು ಅರ್ಹತೆಯ ಆರಂಭಿಕ ಷರತ್ತುಗಳ ಪ್ರಕಾರ ಪರಿಶೀಲನೆ ನಡೆಸಲಾಯಿತು. ದಾಖಲೆಗಳ ಮೌಲ್ಯಮಾಪನ ಮತ್ತು ಪರಿಶೀಲನೆಯ ಆಧಾರದ ಮೇಲೆ, ಕೇಂದ್ರ ಸಂಸ್ಥೆ ಹಣಕಾಸು ಬಿಡ್‌ಗಳನ್ನು ಸಲ್ಲಿಸಬಹುದಾದ ಮೂರು ಕಂಪನಿಗಳನ್ನು ಆಯ್ಕೆ ಮಾಡಿದೆ.

ಐಟಿಡಿ ಸಿಮೆಂಟೇಶನ್ ಇಂಡಿಯಾ ಲಿಮಿಟೆಡ್ ಮತ್ತು ಎನ್‌ಸಿಸಿ ಲಿಮಿಟೆಡ್ ಸೇರಿದಂತೆ ನಾಲ್ಕು ಸಂಸ್ಥೆಗಳು ಹೊಸ ಸಂಸತ್ ಕಟ್ಟಡ ನಿರ್ಮಾಣದ ಗುತ್ತಿಗೆ ಸ್ಪರ್ಧೆಯಿಂದ ಹಿಂದೆ ಸರಿದಿವೆ. ಸಂಸತ್ತಿನ ಪ್ರಸ್ತಾವಿತ ಹೊಸ ಕಟ್ಟಡವು ನೆಲಮಾಳಿಗೆಯೊಂದಿಗೆ ಎರಡು ಅಂತಸ್ತಿನ ಕಟ್ಟಡವಾಗಿರಲಿದೆ. ಭಾರತವು ಸ್ವಾತಂತ್ರ್ಯ ಪಡೆದು 75ನೇ ವಾರ್ಷಿಕೋತ್ಸವವನ್ನು ಆಚರಿಸುವ 2022ರ ವೇಳೆಗೆ ಹೊಸ ಸಂಸತ್ ಕಟ್ಟಡ ಸಿದ್ಧಗೊಳಿಸುವ ಯೋಜನೆಯನ್ನ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.