ETV Bharat / bharat

ಅತಿ ಹೆಚ್ಚು ಬೆಲೆಗೆ ಕೆಕೆಆರ್​​ ತಂಡ ಸೇರಿಕೊಂಡ ಕಮ್ಮಿನ್ಸ್: ಕೋಚ್​​ ಮೆಕಲಂ ಮನವಿ ಏನು?

author img

By

Published : Dec 19, 2019, 7:32 PM IST

Updated : Dec 19, 2019, 7:41 PM IST

Brendon McCullum
ಪ್ಯಾಟ್​ ಕಮ್ಮಿನ್ಸ್​ ಬಳಿ ಮನವಿ

ಅತಿ ಹೆಚ್ಚು ಬೆಲೆಗೆ ಆಸ್ಟ್ರೇಲಿಯಾದ ವೇಗದ ಬೌಲರ್​​ ಪ್ಯಾಟ್​​ ಕಮ್ಮಿನ್ಸ್​​​ ಕೋಲ್ಕತ್ತಾ ನೈಟ್​​ ರೈಡರ್ಸ್​ ತಂಡದ ಪಾಲಾಗಿದ್ದು, ಅವರ ಬಳಿ ತಂಡದ ಕೋಚ್​​ ಮೆಕಲಂ ಮನವಿ ಮಾಡಿಕೊಂಡಿದ್ದಾರೆ.

ಕೋಲ್ಕತ್ತಾ: ಇಂಡಿಯನ್​​ ಪ್ರೀಮಿಯರ್​​ ಲೀಗ್​​​ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್​​​ ಪ್ಯಾಟ್​​ ಕಮ್ಮಿನ್ಸ್​​ ಬರೋಬ್ಬರಿ 15.5 ಕೋಟಿ ರೂಗೆ ಕೋಲ್ಕತ್ತಾ ನೈಟ್​​ ರೈಡರ್ಸ್​​ ತಂಡಕ್ಕೆ ಬಿಕರಿಗೊಂಡಿದ್ದು, ಅತಿ ಹೆಚ್ಚು ಹಣಕ್ಕೆ ಸೇಲ್​​ ಆಗಿರುವ ವಿದೇಶಿ ಪ್ಲೇಯರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಹಣ ಪಡೆದುಕೊಂಡು ಕಮ್ಮಿನ್ಸ್​​ ಸೇಲ್​​ ಆಗುತ್ತಿದ್ದಂತೆ ನ್ಯೂಜಿಲ್ಯಾಂಡ್​​ನ ಮಾಜಿ ಆಟಗಾರ, ಕೆಕೆಆರ್​​ ತಂಡದ ಮುಖ್ಯ ಕೋಚ್​​​​ ಬ್ರೆಂಡನ್​​ ಮೆಕಲಂ ಟ್ವೀಟ್​​ ಮಾಡಿ ವಿನಂತಿ ಮಾಡಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್​​ ವಿರುದ್ಧದ ಮುಂದಿನ ಟೆಸ್ಟ್​​​ ಪಂದ್ಯಗಳಿಂದ ವಿಶ್ರಾಂತಿ ಪಡೆದುಕೊಳ್ಳಲು ಯೋಚಿಸಿ. ಐಪಿಎಲ್​​ ಆರಂಭಗೊಳ್ಳುವ ಹೊತ್ತಿಗೆ ನೀವೂ ಉತ್ತಮವಾಗಿ ಬೌಲಿಂಗ್​ ಮಾಡಬಲ್ಲಿರಿ ಎಂದು ಟ್ವೀಟ್​ ಮಾಡಿದ್ದಾರೆ. ಸದ್ಯ ನ್ಯೂಜಿಲ್ಯಾಂಡ್​​ ವಿರುದ್ಧ ನಡೆಯುತ್ತಿರುವ ಟೆಸ್ಟ್​​ ಕ್ರಿಕೆಟ್​​ನಲ್ಲಿ ಪ್ಯಾಟ್​​ ಕಮ್ಮಿನ್ಸ್​​ ಭಾಗಿಯಾಗಿದ್ದು, ಅತಿ ಹೆಚ್ಚು ವಿಕೆಟ್​ ಸಹ ಪಡೆದುಕೊಂಡಿದ್ದಾರೆ.

  • Think you should rest the remainder of the Nz Test series to make sure you will be in peak condition for the @ipl !! 🤔😂😂😂 https://t.co/oKn8kSzpta

    — Brendon McCullum (@Bazmccullum) December 19, 2019 " class="align-text-top noRightClick twitterSection" data=" ">

ಈಗಾಗಲೇ 16 ಐಪಿಎಲ್​​​ ಪಂದ್ಯಗಳನ್ನಾಡಿರುವ ಪ್ಯಾಟ್​​ ಕಮ್ಮಿನ್ಸ್​​ 17 ವಿಕೆಟ್​​ ಪಡೆದುಕೊಂಡಿದ್ದಾರೆ. ಈ ಹಿಂದೆ 2014ರಲ್ಲಿ ಕಮ್ಮಿನ್ಸ್​​ ಕೋಲ್ಕತ್ತಾ ನೈಟ್​​ ರೈಡರ್ಸ್​​ ತಂಡದ ಪರ ಕಣಕ್ಕಿಳಿದಿದ್ದರು.

ಇದೇ ವೇಳೆ ಕೋಲ್ಕತ್ತಾ ತಂಡದ ಕ್ಯಾಪ್ಟನ್​​ ಆಗಿ ವಿಕೆಟ್​​ ಕೀಪರ್​ ಬ್ಯಾಟ್ಸ್​​ಮನ್​​ ದಿನೇಶ್​​ ಕಾರ್ತಿಕ್​​​​​​​​​​ ಮುಂದುವರಿಯಲಿದ್ದಾರೆ ಎಂದು ತಂಡದ ಕೋಚ್​ ಮೆಕಲಂ ತಿಳಿಸಿದ್ದಾರೆ.

Intro:Body:

ಅತಿ ಹೆಚ್ಚು ಬೆಲೆಗೆ ಕೆಕೆಆರ್​​ ತಂಡ ಸೇರಿಕೊಂಡ ಪ್ಯಾಟ್​​​​​​ ಕಮ್ಮಿನ್ಸ್​​... ಹರಾಜುಗೊಳ್ತಿದ್ದಂತೆ ಕೋಚ್​​ ಮೆಕಲಂ ಮಾಡಿದ್ರು ಮನವಿ!

ಕೋಲ್ಕತ್ತಾ: ಇಂಡಿಯನ್​​ ಪ್ರೀಮಿಯರ್​​ ಲೀಗ್​​​ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್​​​ ಪ್ಯಾಟ್​​ ಕಮ್ಮಿನ್ಸ್​​ ಬರೋಬ್ಬರಿ 15.5 ಕೋಟಿ ರೂಗೆ ಕೋಲ್ಕತ್ತಾ ನೈಟ್​​ ರೈಡರ್ಸ್​​ ತಂಡಕ್ಕೆ ಬಿಕರಿಗೊಂಡಿದ್ದು, ಅತಿ ಹೆಚ್ಚು ಹಣಕ್ಕೆ ಸೇಲ್​​ ಆಗಿರುವ ವಿದೇಶಿ ಪ್ಲೇಯರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಹಣ ಪಡೆದುಕೊಂಡು ಕಮ್ಮಿನ್ಸ್​​ ಸೇಲ್​​ ಆಗುತ್ತಿದ್ದಂತೆ ನ್ಯೂಜಿಲ್ಯಾಂಡ್​​ನ ಮಾಜಿ ಆಟಗಾರ, ಕೆಕೆಆರ್​​ ತಂಡದ ಮುಖ್ಯ ಕೋಚ್​​​​ ಬ್ರೆಂಡನ್​​ ಮೆಕಲಂ ಟ್ವೀಟ್​​ ಮಾಡಿ ವಿನಂತಿ ಮಾಡಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್​​ ವಿರುದ್ಧದ ಮುಂದಿನ ಟೆಸ್ಟ್​​​ ಪಂದ್ಯಗಳಿಂದ ವಿಶ್ರಾಂತಿ ಪಡೆದುಕೊಳ್ಳಲು ಯೋಚಿಸಿ. ಐಪಿಎಲ್​​ ಆರಂಭಗೊಳ್ಳುವ ಹೊತ್ತಿಗೆ ನೀವೂ ಉತ್ತಮವಾಗಿ ಬೌಲಿಂಗ್​ ಮಾಡಬಲ್ಲಿರಿ ಎಂದು ಟ್ವೀಟ್​ ಮಾಡಿದ್ದಾರೆ. ಸದ್ಯ ನ್ಯೂಜಿಲ್ಯಾಂಡ್​​ ವಿರುದ್ಧ ನಡೆಯುತ್ತಿರುವ ಟೆಸ್ಟ್​​ ಕ್ರಿಕೆಟ್​​ನಲ್ಲಿ ಪ್ಯಾಟ್​​ ಕಮ್ಮಿನ್ಸ್​​ ಭಾಗಿಯಾಗಿದ್ದು, ಅತಿ ಹೆಚ್ಚು ವಿಕೆಟ್​ ಸಹ ಪಡೆದುಕೊಂಡಿದ್ದಾರೆ. 

ಈಗಾಗಲೇ 16 ಐಪಿಎಲ್​​​ ಪಂದ್ಯಗಳನ್ನಾಡಿರುವ ಪ್ಯಾಟ್​​ ಕಮ್ಮಿನ್ಸ್​​ 17 ವಿಕೆಟ್​​ ಪಡೆದುಕೊಂಡಿದ್ದಾರೆ. ಈ ಹಿಂದೆ 2014ರಲ್ಲಿ ಕಮ್ಮಿನ್ಸ್​​ ಕೋಲ್ಕತ್ತಾ ನೈಟ್​​ ರೈಡರ್ಸ್​​ ತಂಡದ ಪರ ಕಣಕ್ಕಿಳಿದಿದ್ದರು. 

Conclusion:
Last Updated :Dec 19, 2019, 7:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.