ETV Bharat / bharat

ಗಣರಾಜ್ಯೋತ್ಸವ ಪರೇಡ್​​​ಗಾಗಿ ಆಗಮಿಸಿದ 150 ಸೇನಾ ಸಿಬ್ಬಂದಿಗೆ ಕೊರೊನಾ

author img

By

Published : Dec 26, 2020, 8:28 PM IST

Around 150 Army personnel test positive for COVID-19
150 ಸೇನಾ ಸಿಬ್ಬಂದಿಗೆ ಕೊರೊನಾ ಸೋಂಕು

ಕೋವಿಡ್ ಸೋಂಕಿನ ಭೀತಿಯಿಂದಾಗಿ ಎರಡು ಪರೇಡ್​ಗಳಲ್ಲಿ ಭಾಗವಹಿಸುವ ಎಲ್ಲ ಸಿಬ್ಬಂದಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಹೀಗೆ ನಡೆಸಿದ ಪರೀಕ್ಷೆಯಲ್ಲಿ 150 ಸೇನಾ ಸಿಬ್ಬಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.

ನವದೆಹಲಿ: ಗಣರಾಜ್ಯೋತ್ಸವ ಮತ್ತು ಸೇನಾ ದಿನದ ಮೆರವಣಿಗೆಯಲ್ಲಿ ಭಾಗವಹಿಸಲು ಕಳೆದ ಕೆಲವು ವಾರಗಳಲ್ಲಿ ವಿವಿಧ ಸ್ಥಳಗಳಿಂದ ರಾಷ್ಟ್ರ ರಾಜಧಾನಿಗೆ ಆಗಮಿಸಿದ ಸುಮಾರು 150 ಸೇನಾ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೋವಿಡ್ ಸೋಂಕಿನ ಭೀತಿಯಿಂದಾಗಿ ಎರಡು ಪರೇಡ್​ಗಳಲ್ಲಿ ಭಾಗವಹಿಸುವ ಎಲ್ಲ ಸಿಬ್ಬಂದಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಹೀಗೆ ನಡೆಸಿದ ಪರೀಕ್ಷೆಯಲ್ಲಿ 150 ಸೇನಾ ಸಿಬ್ಬಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಗಣರಾಜ್ಯೋತ್ಸವ ಮತ್ತು ಸೇನಾ ದಿನದ ಪರೇಡ್​ಗಾಗಿ ವಿವಿಧ ಸಾರಿಗೆ ಮೂಲಕ ನವೆಂಬರ್ ಅಂತ್ಯದಿಂದ 2 ಸಾವಿರಕ್ಕೂ ಹೆಚ್ಚು ಸೇನಾ ಸಿಬ್ಬಂದಿ ದೆಹಲಿಗೆ ಆಗಮಿಸಿದ್ದಾರೆ. ಅವರೆಲ್ಲರೂ "ಬಯೋ ಬಬಲ್​" ಪ್ರವೇಶಿಸುವ ಮೊದಲು ಕೋವಿಡ್​ ಪರೀಕ್ಷೆಗೆ ಒಳಗಾಗಬೇಕಾಯಿತು ಎಂದು ಮೂಲಗಳು ತಿಳಿಸಿವೆ.

ಸೋಂಕು ಪತ್ತೆಯಾಗದೇ ಇರುವವರನ್ನು "ಸುರಕ್ಷಿತ ಗುಳ್ಳೆ"ಗೆ ಸೇರಿಸಲಾಗುತ್ತಿದ್ದು, ಪರೇಡ್​ನ ಭಾಗವಾಗಿರುವ ಎಲ್ಲ ಸಿಬ್ಬಂದಿಗೆ ಅವಕಾಶ ಕಲ್ಪಿಸಲು ಇದನ್ನು ರಚಿಸಲಾಗಿದೆ.

ಕಂಟೋನ್ಮೆಂಟ್ ಪ್ರದೇಶದಲ್ಲಿ ರಚಿಸಲಾದ "ಸುರಕ್ಷಿತ ಗುಳ್ಳೆ" ಹೆಚ್ಚಿನ ಸಂಖ್ಯೆಯ ಕ್ಯಾಂಪ್​ಗಳನ್ನು ಒಳಗೊಂಡಿದೆ. ಅವುಗಳಲ್ಲಿ ಉಳಿಯಲು ಆಯ್ಕೆಯಾದವರು ಜನವರಿ 26 ರ ಗಣರಾಜ್ಯೋತ್ಸವದವರೆಗೆ ಹೊರಗಿನ ಪ್ರಪಂಚದಿಂದ ಬಹುತೇಕ ಶೂನ್ಯ ಸಂಪರ್ಕವನ್ನು ಹೊಂದಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.