ETV Bharat / bharat

ಪೂಂಚ್ ಎನ್‌ಕೌಂಟರ್ ಸ್ಥಳದ ಬಳಿ ಅಪಾರ ಶಸ್ತ್ರಾಸ್ತ್ರ, ಮದ್ದುಗುಂಡು ಪತ್ತೆ

author img

By PTI

Published : Sep 8, 2023, 8:03 AM IST

ಇಬ್ಬರು ಭಯೋತ್ಪಾದಕರು ಹತರಾದ ಪೂಂಚ್ ಎನ್‌ಕೌಂಟರ್ ಸ್ಥಳದ ಬಳಿ ಶಸ್ತ್ರಾಸ್ತ್ರಗಳು ಹಾಗೂ ಮದ್ದು ಗುಂಡುಗಳು ಪತ್ತೆಯಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Representative image
ಪ್ರಾತಿನಿಧಿಕ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಸಂಗ್ರಹವನ್ನು ಪತ್ತೆ ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಡಿ ನಿಯಂತ್ರಣ ರೇಖೆ ಮಂಡಿಯ ಸಾವ್ಜಿಯಾನ್ ಪ್ರದೇಶದಲ್ಲಿ ಬುಧವಾರ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಭಯೋತ್ಪಾದಕರು ಹತರಾಗಿದ್ದರು. ಈ ಘಟನೆ ನಡೆದು ಒಂದು ದಿನದ ನಂತರ ಭಾರಿ ಪ್ರಮಾಣ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ.

ಓರ್ವ ಭಯೋತ್ಪಾದಕನ ಶವವನ್ನು ವಶಪಡಿಸಿಕೊಳ್ಳಲಾಗಿದ್ದು, ಮತ್ತೊಬ್ಬನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಎನ್‌ಕೌಂಟರ್ ಸ್ಥಳದ ಬಳಿ ಎಕೆ 47 ಗನ್​, ನಾಲ್ಕು ಮ್ಯಾಗಜೀನ್‌ಗಳು, ಒಂದು ಪಿಸ್ತೂಲ್ ಹಾಗೂ 44 ಪಿಸ್ತೂಲ್​ಗಳು ಪತ್ತೆಯಾಗಿವೆ. ಒಂದು ಗ್ರೆನೇಡ್, ಬೈನಾಕ್ಯುಲರ್, ಒಂದು ಜೊತೆ ಶೂ, ರಾತ್ರಿ ದೃಷ್ಟಿ ಸಾಧನ, ಎರಡು ಪ್ಯಾಂಟ್, ಒಂದು ಜೊತೆ ಕೈಗವಸುಗಳು, ಎರಡು ಜಾಕೆಟ್‌ಗಳು, ಎರಡು ಶಾಲುಗಳು, ಎರಡು ರಕ್‌ಸಾಕ್ ಬ್ಯಾಗ್‌ಗಳು, ಎರಡು ವಾಕಿಂಗ್ ಸ್ಟಿಕ್‌ಗಳು, ಒಂದು ಸಿರಿಂಜ್, 16 ಬ್ಯಾಟರಿಗಳು, ಬ್ಯಾಂಡೇಜ್ ರೋಲ್‌ಗಳು, ಒಂದು ಚಾಕು ಹಾಗೂ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್​, ಭದ್ರತಾ ಪಡೆಗಳಿಂದ ಜಂಟಿ ಕಾರ್ಯ: ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಕೊನೆಗಾಣಿಸಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಗುರುವಾರ ಹೇಳಿದ್ದಾರೆ.

ಗಡಿ ಭದ್ರತಾ ಗ್ರಿಡ್ ಕೂಡ ಎಂದಿಗೂ ಹೆಚ್ಚು ಪ್ರಬಲವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಕೊನೆಗಾಣಿಸಲು ಇತರ ಭದ್ರತಾ ಪಡೆಗಳೊಂದಿಗೆ ಪೊಲೀಸರು ಸಂಪೂರ್ಣ ಜಾಗರೂಕರಾಗಿದ್ದಾರೆ. ಭಯೋತ್ಪಾದನೆ ಮುಕ್ತ ಜಮ್ಮು ಮತ್ತು ಕಾಶ್ಮೀರವನ್ನು ನಿರ್ಮಿಸಲು ನಾವು ಮಿಷನ್ ಮೋಡ್‌ನಲ್ಲಿ ನಮ್ಮ ಪ್ರಯತ್ನ ಮುಂದುವರಿಸಬೇಕಾಗಿದೆ ಎಂದರು.

"ಜನರಿಗೆ ಶಾಂತಿಯುತ ವಾತಾವರಣವನ್ನು ಒದಗಿಸಲು ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಎಲ್ಲಾ ಭಾಗಗಳಲ್ಲಿ ಶಾಂತಿ ಸಮೃದ್ಧವಾಗಿದೆ. ಭಯೋತ್ಪಾದಕರನ್ನು ಹೊರಹಾಕಲು ಮತ್ತು ಶಸ್ತ್ರಾಸ್ತ್ರಗಳು ಹಾಗೂ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಪಾಕಿಸ್ತಾನದ ಯಾವುದೇ ಪ್ರಯತ್ನವನ್ನು ತಡೆಯಲು ಗಡಿ ಭದ್ರತಾ ಗ್ರಿಡ್ ಹಿಂದೆಂದಿಗಿಂತಲೂ ಹೆಚ್ಚು ಶಕ್ತವಾಗಿದೆ" ಎಂದು ಅವರು ಹೇಳಿದರು.

ಭದ್ರತಾ ಪಡೆಗಳು ಪೂಂಚ್-ರಜೌರಿ ಬೆಲ್ಟ್‌ನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಹಲವಾರು ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಿದವು. ಸ್ಥಳೀಯರ ಸಹಾಯದಿಂದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮಾದಕ ಸರಕುಗಳನ್ನು ವಶಪಡಿಸಿಕೊಂಡವು. ಜೌರಿ ಮತ್ತು ಕಣಿವೆಯ ಗಡಿ ಜಿಲ್ಲೆಯೊಂದಿಗೆ ಸಂಪರ್ಕ ಹೊಂದಿರುವುದರಿಂದ ರಿಯಾಸಿ ಸೂಕ್ಷ್ಮ ಪ್ರದೇಶ. ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ದಾಟುವ ಪ್ರಯತ್ನಗಳು ನಡೆಯಬಹುದು. ಅಂತಹ ಪ್ರಯತ್ನಗಳನ್ನು ವಿಫಲಗೊಳಿಸ ಒಟ್ಟಾಗಿ ಕೆಲಸ ಮಾಡಬೇಕೆಂದು ಸಿಂಗ್ ಕರೆ ನೀಡಿದರು.

ಅಧಿಕಾರಿಗಳು ಜಾಗರೂಕರಾಗಿರಬೇಕು. ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗಡಿಯಾಚೆಗಿನ ಭಯೋತ್ಪಾದಕ ರಚನೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿರುವ ಶಂಕಿತರು ಮತ್ತು ಜನರ ಚಟುವಟಿಕೆಗಳ ಮೇಲೆ ನಿಗಾ ಇಡುವಂತೆ ಅವರು ನಿರ್ದೇಶನ ನೀಡಿದರು. ಬಳಿಕ ಸಿಂಗ್ ಅವರು 33 ರಾಷ್ಟ್ರೀಯ ರೈಫಲ್ಸ್‌ನ ಅಧಿಕಾರಿಗಳು ಮತ್ತು ಯೋಧರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಪ್ರದೇಶದಲ್ಲಿನ ಕಾರ್ಯಾಚರಣೆಯ ಅಂಶಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಪಡೆದರು.

ಇದನ್ನೂ ಓದಿ: Militant killed: ಜಮ್ಮುವಿನಲ್ಲಿ ಉಗ್ರರು - ಭದ್ರತಾ ಪಡೆಗಳ ಮಧ್ಯೆ ಗುಂಡಿನ ಚಕಮಕಿ; ಭಯೋತ್ಪಾದಕ ಖತಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.