ETV Bharat / bharat

ಪ್ರೇಮ ವಿವಾಹ, ಸುಖ ಸಂಸಾರ, ಮುದ್ದಾದ ಮಗು ಜನನ.. ಸಹಿಸದ ಗೃಹಿಣಿ ಅಣ್ಣನಿಂದ ಬಾಮೈದನ ಕೊಲೆ!

author img

By

Published : May 21, 2022, 7:47 AM IST

Another Honor Killing In Hyderabad  Honor killing in telangana  Telangana crime news  ಹೈದರಾಬಾದ್​ನಲ್ಲಿ ಮತ್ತೆ ಮರ್ಯಾದೆ ಹತ್ಯೆ  ತೆಲಂಗಾಣದಲ್ಲಿ ಮರ್ಯಾದೆ ಹತ್ಯೆ  ತೆಲಂಗಾಣ ಅಪರಾಧ ಸುದ್ದಿ
ಸಹಿಸದ ಗೃಹಿಣಿ ಅಣ್ಣನಿಂದ ಭಾವನ ಕೊಲೆ

Honor Killing.. ತೆಲಂಗಾಣದ ಹೈದರಾಬಾದ್​ನಲ್ಲಿ ಎರಡು ವಾರದ ಹಿಂದೆ ಮರ್ಯಾದಾ ಹತ್ಯೆವೊಂದು ನಡೆದಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಮರ್ಯಾದಾ ಹತ್ಯೆ ನಡೆದಿದ್ದು, ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಹೈದರಾಬಾದ್(ತೆಲಂಗಾಣ): ಸುಮಾರು 15 ದಿನಗಳ ಹಿಂದೆ ಕುಟುಂಬಸ್ಥರ ವಿರೋಧದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಕ್ಕಾಗಿ ಪತ್ನಿಯ ಎದುರೇ ದಲಿತ ಸಮುದಾಯದ ಯುವಕ ನಾಗರಾಜ್‌ನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಆದ್ರೆ ಈ ಘಟನೆ ಮಾಸುವ ಮುನ್ನವೇ ಮುತ್ತಿನ ನಗರಿಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿರುವುದರಿಂದ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಸಹಿಸದ ಗೃಹಿಣಿ ಅಣ್ಣನಿಂದ ಬಾಮೈದನ ಕೊಲೆ

ಎಸಿಪಿ ಸತೀಶ್ ಕುಮಾರ್ ಮತ್ತು ಸಿಐ ಅಜಯ್ ಕುಮಾರ್ ಪ್ರಕಾರ, ಕೊಲ್ಸವಾಡಿಯ ಬೇಗಂಬಜಾರ್ ನಿವಾಸಿ ನೀರಜ್ ಕುಮಾರ್ ಪನ್ವಾರ್ (22) ಶೇಂಗಾ ವ್ಯಾಪಾರ ಮಾಡುತ್ತಿದ್ದ. ಈತ ಒಂದೂವರೆ ವರ್ಷದ ಹಿಂದೆ ಅದೇ ಪ್ರದೇಶದ ಸಂಜನಾ (20) ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿಗೆ ಒಂದೂವರೆ ತಿಂಗಳ ಹಿಂದೆ ಗಂಡು ಮಗು ಸಹ ಜನಿಸಿದೆ. ಈ ಮಧ್ಯೆ ಸಂಜನಾ ಕುಟುಂಬಸ್ಥರ ಸೇಡಿನ ಕಿಚ್ಚು ಮಾತ್ರ ಹಾಗೆ ಉಳಿದುಕೊಂಡಿತ್ತಂತೆ.

ಓದಿ: ಹೈದರಾಬಾದ್​​ನಲ್ಲಿ ಮರ್ಯಾದಾ ಹತ್ಯೆ: ಗಂಡನ ಕಳೆದುಕೊಂಡ ಅಶ್ರೀನ್​ ಸುಲ್ತಾನಾ ಹೇಳಿದ್ದೇನು?

ಸಂಜನಾಳ ಸಹೋದರ ಆರು ತಿಂಗಳಿಂದಲೂ ಬಾಮೈದ ನೀರಜ್‌ನನ್ನು ಕೊಲ್ಲಲು ಹೊಂಚು ಹಾಕಿ ಕಾಯುತ್ತಿದ್ದನು. ಒಂದು ವಾರದಿಂದ ಸಂಜನಾಳ ಅಣ್ಣ ನೀರಜ್​ನ ಚಟುವಟಿಕೆಗಳ ಮೇಲೆ ಕಣ್ಣು ಇಟ್ಟಿದ್ದ. ಶುಕ್ರವಾರ ಮೋಡ ಕವಿದ ವಾತಾವರಣವಿದ್ದು, ರಾತ್ರಿ ವೇಳೆ ವಾಹನ ಮತ್ತು ಜನ ಸಂಚಾರ ವಿರಳವಾಗಿತ್ತು. ನೀರಜ್​ನನ್ನು ಕೊಲೆ ಮಾಡಲು ಇದೇ ಸಮಯವೆಂದು ಸಂಜನಾಳ ಅಣ್ಣ ಭಾವಿಸಿ ತನ್ನ ಸಹಚರರನ್ನು ಸ್ಥಳಕ್ಕೆ ಕರೆಸಿದ್ದಾನೆ.

ನೀರಜ್ ತನ್ನ ಅಜ್ಜನೊಂದಿಗೆ ಫಿಶ್​ ಮಾರ್ಕೆಟ್​ಗೆ ಬಂದಿದ್ದನು. ಈ ವೇಳೆ ರಸ್ತೆ ದಾಟುತ್ತಿದ್ದಾಗ ಹಿಂದಿನಿಂದ ಬಂದ ಸಂಜನಾಳ ಅಣ್ಣನ ಗ್ಯಾಂಗ್​ ಗ್ರಾನೈಟ್ ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ. ನಂತರ ಎಲ್ಲರೂ ಎಳನೀರು ತುಂಡರಿಸಲು ಉಯೋಗಿಸುವ ಕತ್ತಿಯಿಂದ ನೀರಜ್​ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಸುದ್ದಿ ಬೆಂಕಿಯಂತೆ ನಗರದಲ್ಲೆಡೆ ಹಬ್ಬಿದ್ದು, ಪೊಲೀಸರಿಗೂ ತಿಳಿದಿದೆ.

ಓದಿ: ಮರ್ಯಾದಾ ಹತ್ಯೆ.. ಸುಪಾರಿ ಕೊಟ್ಟು ಅಳಿಯನ ಕೊಲ್ಲಿಸಿದ ಮಾವ!

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಶಾಹಿನಾಯತ್ ಗಂಜ್ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ನೀರಜ್​ನನ್ನು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದರು. ಆದ್ರೆ ಅಷ್ಟೊತ್ತಿಗಾಗಲೇ ನೀರಜ್​ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ನೀರಜ್ ಹತ್ಯೆ ಮಾಡಿದವರು ಐವರು ಎಂದು ಪೊಲೀಸರು ಖಚಿತಪಡಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಹತ್ತು ಜನರನ್ನು ಬಂಧಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಎಂಎಲ್​ಎ ರಾಜಾಸಿಂಗ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಂತರ್ಜಾತಿ ವಿವಾಹವಾಗಿರುವ ನೀರಜ್, ತನ್ನ ಪತ್ನಿಯ ಮನೆಯವರಿಂದ ತನಗೆ ಬೆದರಿಕೆ ಇದೆ ಎಂದು ಮೊದಲೇ ಅರಿತು ಒಂದು ವರ್ಷದ ಹಿಂದೆ ಅಫ್ಜಲಗಂಜ್ ಪೊಲೀಸರನ್ನು ಸಂಪರ್ಕಿಸಿದ್ದರು. ರಕ್ಷಣೆ ನೀಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನೀರಜ್ ಸಾವಿನಿಂದ ಆಕ್ರೋಶಗೊಂಡ ಬೇಗಂಬಜಾರ್ ವ್ಯಾಪಾರಿಗಳು ಶುಕ್ರವಾರ ಮಧ್ಯರಾತ್ರಿಯ ವೇಳೆಗೆ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಶನಿವಾರ (ಇಂದು) ಬೇಗಂಬಜಾರ್ ಬಂದ್‌ಗೆ ಕರೆ ನೀಡಲಾಗಿದೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಮರ್ಯಾದೆ ಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.