ETV Bharat / bharat

ಟ್ರಕ್ ​- ಟ್ರ್ಯಾಕ್ಟರ್​ ಮಧ್ಯೆ ಭೀಕರ ಅಪಘಾತ: ವಿಠ್ಠಲನ ಪಾದ ಸೇರಿದ 4 ಭಕ್ತರು, 40ಕ್ಕೂ ಹೆಚ್ಚು ಜನರಿಗೆ ಗಾಯ!

author img

By

Published : Mar 14, 2022, 8:14 AM IST

Updated : Mar 14, 2022, 9:13 AM IST

ಕಳೆದ ರಾತ್ರಿ ಟ್ರಕ್​ ಮತ್ತು ಟ್ರ್ಯಾಕ್ಟರ್​ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಪಂಡರಾಪುರದ ವಿಠ್ಠಲ್​ನ ದರ್ಶನಕ್ಕೆ ತೆರಳುತ್ತಿದ್ದ ನಾಲ್ವರು ಭಕ್ತರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.

Accident in Solapur District,  Pandharpur truck crash, Vittal devotees died in road accident, Maharashtra accident news, ಸೊಲ್ಲಾಪುರ ಜಿಲ್ಲೆಯಲ್ಲಿ ಅಪಘಾತ, ಪಂಡರಾಪುರ ಟ್ರಕ್ ಅಪಘಾತ, ರಸ್ತೆ ಅಪಘಾತದಲ್ಲಿ ವಿಠ್ಠಲ್​ ಭಕ್ತರು ಸಾವು, ಮಹಾರಾಷ್ಟ್ರ ಅಪಘಾತ ಸುದ್ದಿ,
ಟ್ರಕ್​-ಟ್ರ್ಯಾಕ್ಟರ್​ ಮಧ್ಯೆ ಭೀಕರ ಅಪಘಾತ

ಸೊಲ್ಲಾಪುರ: ಪಂಡರಾಪುರಕ್ಕೆ ತೆರಳುತ್ತಿದ್ದ ಭಕ್ತರ ಟ್ರ್ಯಾಕ್ಟರ್‌ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 35ರಿಂದ 40 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಆರು ಜನ ಸ್ಥಿತಿ ಚಿಂತಾಜನಕವಾಗಿದೆ.

Accident in Solapur District,  Pandharpur truck crash, Vittal devotees died in road accident, Maharashtra accident news, ಸೊಲ್ಲಾಪುರ ಜಿಲ್ಲೆಯಲ್ಲಿ ಅಪಘಾತ, ಪಂಡರಾಪುರ ಟ್ರಕ್ ಅಪಘಾತ, ರಸ್ತೆ ಅಪಘಾತದಲ್ಲಿ ವಿಠ್ಠಲ್​ ಭಕ್ತರು ಸಾವು, ಮಹಾರಾಷ್ಟ್ರ ಅಪಘಾತ ಸುದ್ದಿ,
ಟ್ರಕ್​-ಟ್ರ್ಯಾಕ್ಟರ್​ ಮಧ್ಯೆ ಭೀಕರ ಅಪಘಾತ

ಸೊಲ್ಲಾಪುರದಿಂದ ಮೊಹೋಲ್ ಮಾರ್ಗವಾಗಿ ಪಂಡರಾಪುರಕ್ಕೆ ತೆರಳುತ್ತಿದ್ದಾಗ ಕೊಂಡಿ - ಕೇಗಾಂವ್ ನಡುವೆ ಇದ್ದಾಗ ಹಿಂಬದಿಯಿಂದ ಬಂದ ಟ್ರಕ್ (ಎಂಎಚ್ 12 ಟಿವಿ 7348) ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಟ್ರ್ಯಾಕ್ಟರ್​ನಲ್ಲಿದ್ದ ಭಕ್ತರು ಮೇಲಕ್ಕೆ ಹಾರಿ ರಸ್ತೆಯಲ್ಲಿ ಚೆಲ್ಲಾ - ಪಿಲ್ಲಿಯಾಗಿ ಬಿದ್ದಿದ್ದಾರೆ. ಈ ವೇಳೆ ನಾಲ್ವರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಓದಿ: ಬಜೆಟ್​ ಅಧಿವೇಶನದ 2ನೇ ಹಂತ ಇಂದಿನಿಂದ ಶುರು: ಜಮ್ಮು ಕಾಶ್ಮೀರದ ಬಜೆಟ್ ಮಂಡನೆ

ಗಾಯಾಳುಗಳನ್ನು ಚಿಕಿತ್ಸೆಗಾಗಿ ಸೊಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಹಾಗೂ ಗಾಯಗೊಂಡವರೆಲ್ಲರೂ ತುಳಜಾಪುರ ತಾಲೂಕಿನ ಕಡಮವಾಡಿ ನಿವಾಸಿಗಳು. ಈ ಎಲ್ಲ ಭಕ್ತರು ಏಕಾದಶಿ ನಿಮಿತ್ತ ಟ್ರ್ಯಾಕ್ಟರ್‌ನಲ್ಲಿ ಪಂಡರಾಪುರಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಸ್ಥಳೀಯರೊಂದಿಗೆ ಜೊತೆಗೂಡಿದ ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ಪರಿಹಾರ ಕಾರ್ಯ ಕೈಗೊಂಡರು. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated :Mar 14, 2022, 9:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.