ಕರ್ನಾಟಕ

karnataka

ದೇವ್ರಹಾ ಬಾಬಾ ಆಶ್ರಮದಿಂದ ಬಾಲರಾಮನಿಗೆ 1 ಲಕ್ಷ 11 ಸಾವಿರ ಟಿಫಿನ್​ ಬಾಕ್ಸ್​ನಲ್ಲಿ ಲಡ್ಡುಗಳ ರವಾನೆ - laddus sent to ayodhya

By ETV Bharat Karnataka Team

Published : Apr 17, 2024, 10:58 AM IST

ಲಡ್ಡು ತಯಾರಿ

ಉತ್ತರ ಪ್ರದೇಶ: ರಾಮನವಮಿ ಹಿನ್ನೆಲೆ ಅಯೋಧ್ಯೆಯ ಬಾಲರಾಮನಿಗೆ ದೇಸಿ ತುಪ್ಪದಲ್ಲಿ ತಯಾರಿಸಿದ ಲಡ್ಡುಗಳನ್ನು 1 ಲಕ್ಷದ 11 ಸಾವಿರ ಟಿಫಿನ್​ ಬಾಕ್ಸ್​ಗಳಲ್ಲಿ ಕಳುಹಿಸಿಕೊಡಲಾಗಿದೆ. ವಾರಾಣಸಿ ಮತ್ತು ಪ್ರಯಾಗ್‌ರಾಜ್‌ನ ಮಿಠಾಯಿಗಾರರು ಈ ಲಡ್ಡುಗಳನ್ನು ತಯಾರಿಸಿದ್ದು, ಮಿರ್ಜಾಪುರ ದೇವ್ರಹ ಬಾಬಾ ಆಶ್ರಮದಿಂದ ಕಳುಹಿಸಲಾಗಿದೆ. 

ಈ ಲಡ್ಡುಗಳನ್ನು ಶ್ರೀರಾಮನಿಗೆ ಅರ್ಪಿಸಿದ ನಂತರವೇ ಭಕ್ತರಿಗೆ ಹಂಚಲಾಗುತ್ತದೆ. ದೇಶದೆಲ್ಲೆಡೆ ರಾಮನವಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಅಯೋಧ್ಯೆಯ ಬಾಲರಾನಮನಿಗೆ ಇದು ಮೊದಲ ರಾಮನವಮಿ. ಪ್ರಾಣ ಪ್ರತಿಷ್ಠೆಯ ಸಮಯದಲ್ಲಿಯೂ ಸಹ ದೇವ್ರಹಾ ಬಾಬಾ ಆಶ್ರಮದಿಂದ ಶುದ್ಧ ದೇಸಿ ತುಪ್ಪದೊಂದಿಗೆ 4,440 ಕೆಜಿ ಲಡ್ಡುಗಳನ್ನು ರವಾನೆ ಮಾಡಲಾಗಿತ್ತು. ಈಗ ಮತ್ತೆ ರಾಮನವಮಿಗೆ ಇಲ್ಲಿಂದ ಲಡ್ಡುಗಳನ್ನು ಕಳುಹಿಸಲಾಗಿದೆ. ಇನ್ನು ಪ್ರತಿ ವಾರ ಶುದ್ಧ ದೇಸಿ ತುಪ್ಪ, ಬೇಳೆ ಹಿಟ್ಟು ಮತ್ತು ಸಕ್ಕರೆಯಿಂದ ಮಾಡಿದ ಲಡ್ಡುಗಳನ್ನು ತುಂಬಿದ ಸುಮಾರು ಐದು ಸಾವಿರ ಪ್ರಸಾದ ಚೀಲಗಳನ್ನು ಅಯೋಧ್ಯೆಗೆ ಕಳುಹಿಸಲಾಗುತ್ತದೆ ಎಂದು ಆಶ್ರಮದ ಸಂತ ತುಷಾರದಾಸ್ ಹೇಳಿದರು. 

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ನಂತರ ಮೊದಲ ಬಾರಿಗೆ ರಾಮನವಮಿ ಸಂದರ್ಭದಲ್ಲಿ ಶ್ರೀರಾಮನಿಗೆ ವಿಶೇಷ ನೈವೇದ್ಯಕ್ಕಾಗಿ ಲಡ್ಡುಗಳನ್ನು ಸಿದ್ಧಪಡಿಸಲಾಗಿದೆ. 20 ದಿನಗಳ ಕಾಲ ಲಡ್ಡುಗಳನ್ನು ತಯಾರಿಸಿದ್ದು ಅಯೋಧ್ಯೆಗೆ ಕಳುಹಿಸಲಾಗಿದೆ. 

ಇದನ್ನೂ ಓದಿ: ರಾಮನಾಮದಲ್ಲಿ ಮುಳುಗಿದ ಅಯೋಧ್ಯೆ: ಇಂದು 12 ಗಂಟೆಗೆ ಬಾಲರಾಮನಿಗೆ 'ಸೂರ್ಯ ತಿಲಕ' ವಿಸ್ಮಯ - surya tilak on ramlalla

ABOUT THE AUTHOR

...view details