ಕರ್ನಾಟಕ

karnataka

ರೌಡಿಶೀಟರ್​ನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು: ಹಳೆ ದ್ವೇಷ ಶಂಕೆ

By ETV Bharat Karnataka Team

Published : Jan 24, 2024, 12:46 PM IST

Updated : Jan 24, 2024, 8:31 PM IST

ಮನೆ ಹೊರಗಡೆ ಮಲಗಿದ್ದ ರೌಡಿ ಶೀಟರ್​ ಸತೀಶ್​ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Bengaluru Rowdy Sheeter Murder
ಬೆಂಗಳೂರು ರೌಡಿ ಶೀಟರ್​ ಕೊಲೆ

ಡಿಸಿಪಿ ಶೇಖರ್​ ಹೆಚ್​ ಟಿ

ಬೆಂಗಳೂರು: ರೌಡಿಶೀಟರ್ ಓರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವ ಘಟನೆ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ವಿವೇಕನಗರದ ಮಾಯಾಬಜಾರ್​ನಲ್ಲಿ ಮಂಗಳವಾರ ತಡರಾತ್ರಿ 2.30ರ ಸುಮಾರಿಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ರೌಡಿ ಶೀಟರ್​ ಸತೀಶ್ ಅಲಿಯಾಸ್ ಮಿಲ್ಟ್ರಿ ಸತೀಶ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.‌

ಮೃತನ ವಿರುದ್ಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿತ್ತು. ಅಪರಾಧವೆಸಗುವ ಪ್ರವೃತ್ತಿ ಬೆಳೆಸಿಕೊಂಡಿದ್ದ ಸತೀಶ್ ಮಂಗಳವಾರ ರಾತ್ರಿ ಮನೆ ಹೊರಗಡೆ ಮಲಗಿದ್ದ. ದುಷ್ಕರ್ಮಿಗಳು ಇದನ್ನು ಅರಿತು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಹತ್ಯೆಗೆ ಹಳೆ ದ್ವೇಷವಿರಬಹುದು ಎಂದು ಶಂಕಿಸಿರುವ ವಿವೇಕನಗರ ಠಾಣೆಯ ಪೊಲೀಸರು, ಈ ಸಂಬಂಧ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಹತ್ಯೆ ಬಗ್ಗೆ ಕೇಂದ್ರ ವಿಭಾಗ ಡಿಸಿಪಿ‌ ಶೇಖರ್ ಎಚ್‌‌.ಟಿ. ಪ್ರತಿಕ್ರಿಯೆ ನೀಡಿದ್ದು, "ವ್ಯವಸ್ಥಿತ ಸಂಚು ರೂಪಿಸಿ ರಾತ್ರೋರಾತ್ರಿ ದಾಳಿ ನಡೆಸಿ ಕೊಲೆ ಮಾಡಿದ್ದಾರೆ‌‌‌‌. ಕೊಲೆಯಾದ ವ್ಯಕ್ತಿಯ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಹಳೇ ವೈಷಮ್ಯ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ಇದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಯುವತಿ ಜೊತೆ ಓಡಿ ಹೋಗಿ ಪ್ರೇಮ ವಿವಾಹವಾದ ತಮ್ಮ: ಯುವತಿಯ ಸಹೋದರನಿಂದ ಹತ್ಯೆಯಾದ ಅಣ್ಣ

Last Updated :Jan 24, 2024, 8:31 PM IST

ABOUT THE AUTHOR

...view details