ಕರ್ನಾಟಕ

karnataka

ಜೋಶಿ ಏನು ಅಭಿವೃದ್ಧಿ ಮಾಡಿದ್ದಾರೆ ಹೇಳಲಿ: ಸಚಿವ ಲಾಡ್ ಪ್ರಶ್ನೆ - Santhosh Lad

By ETV Bharat Karnataka Team

Published : Apr 6, 2024, 6:40 PM IST

ಜೋಶಿಯವರೇ ಇದು ನಿಮ್ಮ ಚುನಾವಣೆ. ನೀವು ಏನು ಅಭಿವೃದ್ಧಿ ಮಾಡಿದ್ದಾರೆ ಅಂತಾ ಹೇಳಿ ಅಂತಾ ಕಾರ್ಮಿಕ ಸಚಿವ ಸಂತೋಷ ಲಾಡ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

LABOR MINISTER SANTHOSH LAD  CENTRAL MINISTER PRALHAD JOSHI  DHARWAD
ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿಕೆ

ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿಕೆ

ಧಾರವಾಡ: ಇದು ನನ್ನ ಚುನಾವಣೆಯಲ್ಲ, ನನ್ನ ಚುನಾವಣೆ ಬಂದಾಗ ನಾನೇನು ಅಭಿವೃದ್ಧಿ ಮಾಡಿದ್ದೇನೆ ಅಂತಾ ಹೇಳುವೆ. ಈಗ ಜೋಶಿ ಅವರ ಚುನಾವಣೆ ನಡೆದಿದೆ. ಅವರೇನು ಮಾಡಿದ್ದಾರೆ ಹೇಳಲಿ ಎಂದು ಕಾರ್ಮಿಕ ಸಚಿವ ಸಂತೋಷ್​ ಲಾಡ್ ಸವಾಲು ಹಾಕಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಲ್ಕು ಸಲ, 20 ವರ್ಷ ಎಂಪಿ ಆಗಿದಿರೀ.. ಈ ಅವಧಿಯಲ್ಲಿ ನೀವೇನು ಮಾಡಿದಿರಿ ಹೇಳಿ. ಜನರತ್ತ ನಾನು ಹೋಗಿ ನನ್ನ ಕೆಲಸ ಹೇಳುವೆ ಎಂದು ಜೋಶಿ ವಿರುದ್ಧ ಹರಿಹಾಯ್ದರು.

ನನಗೆ ಸಿದ್ದರಾಮಯ್ಯ ಬೈಯೋಕೆ ಇಟ್ಟಿದಾರೆಂಬ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ನನಗೆ ಇವರನ್ನು ಬೈಯಲು ಸಿದ್ದರಾಮಯ್ಯ ಇಟ್ಟಿರಬಹುದು. ಹಾಗಾದರೆ ಇವರನ್ನು ಮೋದಿ ಸುಳ್ಳು ಹೇಳೋಕೆ ಇಟ್ಟಿದಾರಾ?.. ವಿಶ್ವದಲ್ಲಿ ಸುಳ್ಳು ಹೇಳುವ ಪಕ್ಷ ಬಿಜೆಪಿ. ಅದರಲ್ಲಿ ನಂ. 1 ಪ್ರಹ್ಲಾದ ಜೋಶಿ. ಪದೇ ಪದೇ ಜೋಶಿಯವರೇ ಸುಳ್ಳು ಹೇಳಬೇಡಿ. ಅಭಿವೃದ್ಧಿ ವಿಷಯದಲ್ಲಿ ಬನ್ನಿ ಮಾತನಾಡೋಣ. ನೀವು, ಹಿರಿಯ ನಾಯಕರು ನಿಮ್ಮ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ. ಇವತ್ತು ದರಗಳ ಏರಿಕೆಯಾಗಿದೆ. ಅದರ ಬಗ್ಗೆ ನಾವು ಯಾರನ್ನು ಪ್ರಶ್ನೆ ಕೇಳಬೇಕು ಎಂದು ಪ್ರಶ್ನಿಸಿದರು.

ರೂಪಾಯಿ ಮೌಲ್ಯ ಕುಸಿದಿದೆ.‌ ಇದರ ಬಗ್ಗೆ ಉತ್ತರ ಕೊಡುವವರು ಯಾರು. ಎಲೆಕ್ಟ್ರೋಲ್ ಬಾಂಡ್ ಬಗ್ಗೆ ಉತ್ತರ ಕೊಡುವವರಾರು?. ನೀವು ದೇಶದ ಸಮಸ್ಯೆಗಳ ಬಗ್ಗೆ ಯಾಕೆ ಉತ್ತರ ಕೊಡುವುದಿಲ್ಲ. 2ಜಿ ಹಗರಣದ ಬಗ್ಗೆ ಮಾತನಾಡುತ್ತಾರೆ?, 10 ವರ್ಷ ಅಧಿಕಾರದಲ್ಲಿದ್ರಲ್ವಾ.. ಯಾಕೆ ತಪ್ಪು ಮಾಡಿದವರನ್ನು ಹಿಡಿದು ಒಳಗೆ ಹಾಕಲಿಲ್ಲ. ಬಿಎಸ್‌ಎನ್‌ಎಲ್‌ಗೆ ಯಾಕೆ 4ಜಿ ಲೈಸೆನ್ಸ್ ಕೊಡಲಿಲ್ಲ. 4ಜಿ ಬಂದಾಗ ಜಿಯೋ ನಂ.1 ಆಯ್ತಲ್ಲ. ಬಿ‌ಎಸ್‌ಎನ್‌ಎಲ್ ಯಾಕೆ ನಂ. 1 ಆಗಲಿಲ್ಲ. ನಾನು ಏನೇ ಮಾಡಿದರೂ ದೊಡ್ಡದಾಗಿ ಮಾಡುವೆ ಅಂತಾ ಮೋದಿ ಹೇಳ್ತಾರೆ. ಬಿ.ಎಸ್.ಎನ್.ಎಲ್ ಏನಾಯ್ತು. ರಫೇಲ್ ಏನಾಯ್ತ?. ಅನಿಲ ಅಂಬಾನಿ ಕಂಪನಿ ಒಂದು ಸೈಕಲ್ ತಯಾರಿಸಿಲ್ಲ. ಅದು ಒಂದೇಟಿಗೆ ಹೆಲಿಕಾಪ್ಟರ್ ತಯಾರಿಸಬಹುದಾ.. ಅದರ ಡೀಲ್ ಅವರಿಗೆ ಹೇಗೆ ಹೋಯ್ತು?. ಇದೆಲ್ಲದರ ಬಗ್ಗೆ ಬಿಜೆಪಿಯವರು ಮಾತಾಡುತ್ತಿಲ್ಲ. ಸುಮ್ಮನೇ ಲಾಡ್ ಬೈತಾರೆ ಅಂತಾ ಹೇಳ್ತಾರೆ. ಇದು ಅವರ ಘನತೆಗೆ ಗೌರವ ತರುವಂತಹುದಲ್ಲ, ನಾನು ಜೋಶಿ-ಮೋದಿಗೆ ಬೈದಿಲ್ಲ, ಪ್ರಶ್ನೆ ಕೇಳಿದರೆ ಬೈಯದಂತೆನಾ?. ಈ ಪ್ರಶ್ನೆಗೆ ಉತ್ತರ ಕೊಡಿ ಎಂದರು.

ಅದು ಬಿಟ್ಟು ನಮ್ಮ ಮೇಲೆ ಯಾಕೆ ಸುಳ್ಳು ಹೇಳ್ತಿರಾ.. ಕಳೆದ 10 ವರ್ಷದಲ್ಲಿ 1.20 ಲಕ್ಷ ಕೋಟಿ ಸಾಲ ಜಾಸ್ತಿಯಾಗಿದೆ. ಇದರ ಬಗ್ಗೆ ಜೋಶಿ ಉತ್ತರ ಕೊಡಲಿ. ವಿಧವಾ ವೇತನ, ವೃದ್ಧಾಪ್ಯ, ಆಶಾ ಯೋಜನೆ ಸೇರಿ ಎಲ್ಲ ಯೋಜನೆ ಮಾಡಿದ್ದು ನಾವೇ. ವಿಶ್ವವಿದ್ಯಾಲಯ, ಐಐಎಂ, ಐಐಟಿ ಮಾಡಿದವರೆಲ್ಲ ನಾವೇ. ಇವರೇನು ಮಾಡಿದ್ದಾರೆ ಎಂದು ಸಚಿವ ಲಾಡ್​.

ಲಾಡ್ ಮಕ್ಕಳು ಏನಾಗಬೇಕೆಂಬ ಜೋಶಿ ಪ್ರಶ್ನೆ ವಿಚಾರಕ್ಕೆ ಮಾತನಾಡಿ, ನನ್ನ ಮಕ್ಕಳು ರಾಹುಲ್ ಗಾಂಧಿ ತರಹ ಆಗಬೇಕು. ಇದನ್ನು ನಾನು ಹೆಮ್ಮೆಯಿಂದ ಹೇಳುವೆ. ಮೋದಿಯಂತೆ ಸುಳ್ಳು ಹೇಳುವವರಾಗಬಾರದು ಎಂದು ತಿರುಗೇಟು ಕೊಟ್ಟರು.

ಮಹಾದಾಯಿ ಹೋರಾಟಗಾರರ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಮಹಾದಾಯಿ ಹೋರಾಟಗಾರರು ಇವತ್ತು ಭೇಟಿಗೆ ಬಂದಿದ್ದಾರೆ. ಕೆಲವರು ಪಕ್ಷಕ್ಕೂ ಸೇರಲಿದ್ದಾರೆ. ಮೋದಿ ರಷ್ಯಾ-ಉಕ್ರೇನ್ ವಾರ್ ನಿಲ್ಲಿಸಬಲ್ಲರು. ನಮ್ಮ ಮಹದಾಯಿಗೆ ಅರಣ್ಯ ಇಲಾಖೆ ಕ್ಲಿಯೆರನ್ಸ್ ಕೊಡಿಸಲು ಆಗೋಲ್ವಾ?.. ಕೇಂದ್ರ ಸರ್ಕಾರವೇ ಮಹದಾಯಿ ಮಾಡಬಹುದಲ್ವಾ?.. ರಾಜ್ಯ ಸರ್ಕಾರದ ಮೇಲೆ ಯಾಕೆ ಹಾಕ್ತಿರಾ. ಡಬಲ್ ಇಂಜಿನ ಸರ್ಕಾರ ಇತ್ತಲ್ವಾ ಆಗ ಯಾಕೆ ಮಾಡಲಿಲ್ಲ. ಮಹದಾಯಿ ವಿಷಯದಲ್ಲಿ ನಾವು ರಾಜಕೀಯ ಲಾಭ ನೋಡುತ್ತಿಲ್ಲ. ಮಹದಾಯಿ ಆಯ್ತು ಅಂತಾ ಬಿಜೆಪಿಯೇ ವಿಜಯೋತ್ಸವ ಮಾಡಿತ್ತಲ್ವಾ. ನಾವೇನು ಮಾಡಿದ್ವಾ? ಎಂದರು.

ಪುಲ್ವಾಮಾ ದಾಳಿ ಬಗ್ಗೆ ತನ್ವೀರ ಶೇಠ್​ ಹೇಳಿಕೆ ವಿಚಾರಕ್ಕೆ ಮಾತನಾಡಿ, ತನ್ವೀರ ಶೇಠ್​ ಹೇಳಿಕೆಯನ್ನು ಲಾಡ್ ಸಮರ್ಥಿಸಿಕೊಂಡರು. ಪುಲ್ವಾಮಾ ದಾಳಿ ಮೇಲೆಯೇ ಇವರು ವೋಟ್ ಕೇಳಿದ್ರಲ್ವಾ, ಈಗ ಆರು ವರ್ಷ ಆಯ್ತು. ಅದರ ಬಗ್ಗೆ ಅವರೇ ಚರ್ಚೆ ಮಾಡಬೇಕಲ್ವಾ.. ಆಗ ಅಮಿತ್​ ಶಾ ಸರ್ಕಾರದಲ್ಲಿರಲಿಲ್ಲ, ಅವರೇ 300 ಜನ ಸಾವನ್ನಪ್ಪಿದ್ದಾರೆಂದು ಹೇಳಿದ್ದರು. 300 ಜನರನ್ನು ಕೊಂದಿದ್ದೇವೆ ಎಂದಿದ್ದಿರಿ. ಟಿವಿಯಲ್ಲಿಯೂ ತೋರಿಸಿಬಿಟ್ರಿ.. ಇಡೀ ದೇಶಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಅವರು ಆಗ ಯಾರು? ಅವರು ಸಾಮರ್ಥ್ಯ ಏನು? ಯಾರಪ್ಪನದೋ ದುಡ್ಡು, ಇವರ ಜಾತ್ರೆ ಎನ್ನುವಂತೆ ನಡೆದಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಓದಿ:ಚುನಾವಣಾ ಪ್ರಚಾರದಲ್ಲಿ ಮೋದಿ ಫೋಟೋ ಬಳಕೆಗೆ ನ್ಯಾಯಾಲಯಕ್ಕೆ ಕೆವಿಯಟ್ ಅರ್ಜಿ ಸಲ್ಲಿಸಿದ ಕೆ.ಎಸ್​ ಈಶ್ವರಪ್ಪ - Modi photo

ABOUT THE AUTHOR

...view details