ಕರ್ನಾಟಕ

karnataka

ಎರಡು ಟೆಸ್ಟ್​ಗಳಿಗೆ ವಿರಾಟ್​ ಕೊಹ್ಲಿ ಅಲಭ್ಯ; ಆರ್​ಸಿಬಿ ಬಾಯ್​​ಗೆ ಸಿಗುವುದೇ ಚಾನ್ಸ್​?

By ANI

Published : Jan 24, 2024, 1:21 PM IST

ಭಾರತ ತಂಡದ ರನ್​ ಮಷಿನ್ ಎಂದೇ ಖ್ಯಾತಿ ಗಳಿಸಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದು ಗೊತ್ತೇ ಇದೆ. ಇವರ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬುದು ಕುತೂಹಲ ಮೂಡಿಸಿತ್ತು. ಆದರೆ ಆರ್‌ಸಿಬಿ ಆಟಗಾರನನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.

Rajat Patidar to replace  Virat Kohli  first two Test matches  England vs India  ವಿರಾಟ್​ ಕೊಹ್ಲಿ ಅಲಭ್ಯ  ಆರ್​ಸಿಬಿ ಬಾಯ್  ಇಂಗ್ಲೆಂಡ್ ವಿರುದ್ಧದ ಟೆಸ್ಟ್​
ಎರಡು ಟೆಸ್ಟ್​ಗಳಿಗೆ ವಿರಾಟ್​ ಕೊಹ್ಲಿ ಅಲಭ್ಯ, ಸಿಗುವುದೇ ಆರ್​ಸಿಬಿ ಬಾಯ್​​ಗೆ ಚಾನ್ಸ್​?

ಹೈದರಾಬಾದ್​ (ತೆಲಂಗಾಣ): ಭಾರತವು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಸಿದ್ಧವಾಗಿದೆ. ಮೊದಲ ಟೆಸ್ಟ್ ಗುರುವಾರದಿಂದ ಹೈದರಾಬಾದ್‌ನಲ್ಲಿ ಆರಂಭವಾಗಲಿದೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಗೈರು ಹಾಜರಾಗಿದ್ದು, ಅವರ ಸ್ಥಾನದಲ್ಲಿ ಯಾರು ಆಡಲಿದ್ದಾರೆ ಎಂಬುದೇ ಚರ್ಚೆಯಾಗಿತ್ತು. ಹಲವರ ಹೆಸರುಗಳು ಕೇಳಿ ಬಂದಿದ್ದವು. ಆದ್ರೆ ವಿರಾಟ್ ಸ್ಥಾನಕ್ಕೆ ಆರ್​ಸಿಬಿ ಆಟಗಾರ ರಜತ್ ಪಾಟಿದಾರ್​ಗೆ ಅವಕಾಶ ಸಿಗಲಿದೆ ಎಂಬ ವರದಿಗಳಿವೆ.

ಬಿಸಿಸಿಐ ಕೂಡ ಅವರ ಬಗ್ಗೆ ಆಸಕ್ತಿ ವಹಿಸಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಮಂಗಳವಾರ ಬಿಸಿಸಿಐ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಟಿದಾರ್ ಭಾಗವಹಿಸಿದ್ದರು. ರಹಾನೆ ಮತ್ತು ಪೂಜಾರ ಅವರನ್ನು ತೆಗೆದುಕೊಳ್ಳಲು ಆಯ್ಕೆ ಸಮಿತಿ ಆಸಕ್ತಿ ಹೊಂದಿಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಆದ್ರೆ ಇದು ಇನ್ನೂ ಅಧಿಕೃತ ಘೋಷಣೆ ಆಗಿಲ್ಲ.

ರಜತ್ ಪಾಟಿದಾರ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ಕಳೆದ ವಾರ ಅಹಮದಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಭಾರತ-ಎ ಪರ ಮೊದಲ ಅನಧಿಕೃತ ಟೆಸ್ಟ್‌ನಲ್ಲಿ 151 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ 111 ರನ್ ಗಳಿಸಿದ್ದರು. 30 ವರ್ಷದ ರಜತ್ ಈವರೆಗೆ 55 ಪ್ರಥಮ ದರ್ಜೆ ಪಂದ್ಯಗಳಲ್ಲಿ 45.97 ಸರಾಸರಿಯಲ್ಲಿ 4000 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕಗಳಿವೆ. ಮತ್ತು 2021-22ರಲ್ಲಿ ಮಧ್ಯಪ್ರದೇಶ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೊಹ್ಲಿಯಂತಹ ಆಟಗಾರನ ಸ್ಥಾನಕ್ಕೆ ಬೆಸ್ಟ್ ಫಿನಿಶರ್ ಎಂದೇ ಖ್ಯಾತಿ ಪಡೆದಿರುವ ರಿಂಕು ಸಿಂಗ್ ಪರಿಪೂರ್ಣ ಎಂದು ಮಾಜಿ ಆಟಗಾರ ಆಕಾಶ್ ಚೋಪ್ರಾ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೂ ರಿಂಕು ಇನ್ನೂ ದೀರ್ಘ ಸ್ವರೂಪದಲ್ಲಿ ಪಾದಾರ್ಪಣೆ ಮಾಡಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಸ್ಥಿರವಾಗಿ ಆಡಿ ರನ್ ಗಳಿಸುವ ಅಗತ್ಯವಿದೆ. ರಿಂಕು ಕೆಳ ಕ್ರಮಾಂಕದಲ್ಲಿ ಮಿಂಚಿದ್ದಾರೆ. ಈಗಾಗಲೇ ಟಿ20ಯಲ್ಲಿ ಅವರ ಆಟವನ್ನು ನೋಡಿದ್ದೇವೆ. ಆದರೆ, ಟೆಸ್ಟ್‌ನಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ ಎಂಬುದು ಕೆಲವರ ಮಾತಾಗಿದೆ.

ವಿರಾಟ್​ ಅವರ ನಿರ್ಧಾರವನ್ನು ಬಿಸಿಸಿಐ ಗೌರವಿಸುತ್ತದೆ. ಮಂಡಳಿ ಮತ್ತು ತಂಡದ ಆಡಳಿತವು ಸ್ಟಾರ್ ಬ್ಯಾಟ್ಸ್‌ಮನ್‌ಗೆ ತಮ್ಮ ಬೆಂಬಲವನ್ನು ವಿಸ್ತರಿಸಿದೆ ಮತ್ತು ಟೆಸ್ಟ್ ಸರಣಿಯಲ್ಲಿ ಶ್ಲಾಘನೀಯ ಪ್ರದರ್ಶನಗಳನ್ನು ನೀಡುವ ತಂಡದ ಉಳಿದ ಆಟಗಾರರ ಸಾಮರ್ಥ್ಯದ ಬಗ್ಗೆ ವಿಶ್ವಾಸವಿದೆ. ಈ ಸಮಯದಲ್ಲಿ ವಿರಾಟ್ ಕೊಹ್ಲಿ ಅವರ ಗೌಪ್ಯತೆಯನ್ನು ಗೌರವಿಸುವಂತೆ ಮತ್ತು ಅವರ ವೈಯಕ್ತಿಕ ಕಾರಣಗಳ ಬಗ್ಗೆ ಊಹಾಪೋಹಗಳನ್ನು ಹರಡದಂತೆ ಬಿಸಿಸಿಐ ಮಾಧ್ಯಮಗಳು ಮತ್ತು ಅಭಿಮಾನಿಗಳಿಗೆ ಮನವಿ ಮಾಡಿದೆ.

ಓದಿ:ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್‌ ಪಂದ್ಯಗಳಿಗೆ ಕೊಹ್ಲಿ ಅಲಭ್ಯ: ದ್ರಾವಿಡ್ ಹೇಳಿದ್ದೇನು?

ABOUT THE AUTHOR

...view details